ಯುವಕ ಯುವತಿಯವರ ಒಲವು ಸ್ವಉದ್ಯೋಗದತ್ತ ಸಾಗಿದೆ: ಮಮತಾ ರಾವ್,ನಿರ್ದೇಶಕರು, ಗ್ರಾಮಾಭಿವೃದ್ಧಿ ಯೋಜನೆ
ಬೆಳ್ತಂಗಡಿ: ಇಂದಿನ ಸ್ವರ್ಧಾತ್ಮಕ ಜಗತ್ತಿನಲ್ಲಿ ಯುವಕ ಯುವತಿಯರು ಸ್ವಉದ್ಯಮಕ್ಕೆ ಹೆಚ್ಚು ಒಲವು ತೋರುತ್ತಿದ್ದಾರೆ. ತರಬೇತಿಯ ಅಗತ್ಯತೆಯ ಬಗ್ಗೆ ಮಾತನಾಡುತ್ತಾ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯು ಲಾಭದಾಯಕ ಉದ್ಯಮವಾಗಿದೆ. ಪ್ರಸ್ತುತ ಹಳ್ಳಿ ಹಳ್ಳಿಯಲ್ಲಿಯೂ ಹಾಲಿನ ಸೊಸೈಟಿಯು ಧರ್ಮಸ್ಥಳ ಯೋಜನೆಯ ಅನುದಾನದ ಮೂಲಕ ತೆರೆಯಲಾಗುತ್ತಿದೆ. ಇದರಿಂದ ಹೈನುಗಾರರಿಗೆ ಪಟ್ಟಣಕ್ಕೆ ಬರುವ ಹೊರೆಯು ತಪ್ಪಿದೆ ಎಂದರು. ಅವರು ಗ್ರಾಮಾಭಿವೃದ್ಧಿ ಯೋಜನೆಯ ತರಬೇತಿ ಕೇಂದ್ರ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ ಹೈನುಗಾರಿಕೆ, ಟೈಲರಿಂಗ್ ಮತ್ತು ಕೋಳಿ ಸಾಕಾಣಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ತರಬೇತಿಯು ಉಚಿತವಾಗಿ ನಡೆಯುತ್ತಿದ್ದು, 5 ದಿನಗಳ ತರಬೇತಿಯಲ್ಲಿ ಸ್ವಪ್ರೇರಣೆ, ಲೆಕ್ಕಪತ್ರ ನಿರ್ವಹಣೆ, ಗ್ರಾಹಕ ಸಂಪರ್ಕ, ಇಲಾಖಾ ಸೌಲಭ್ಯಗಳ ಮಾಹಿತಿ, ವೀಡಿಯೋ ಪ್ರದರ್ಶನ, ಅನುಭವ ಹಂಚಿಕೆ ಜೊತೆಗೆ ಕ್ಷೇತ್ರಭೇಟಿ ಕೂಡ ಹಮ್ಮಿಕೊಳ್ಳಲಾಗುತ್ತಿದೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಜಿಲ್ಲೆಯ ಒಟ್ಟು 86 ಮಂದಿ ಸದಸ್ಯರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ತರಬೇತಿ ಸಂಯೋಜಕರಾದ ಬಾಲಕೃಷ್ಣ, ರಾಜೇಶ್ ಮತು ದೇವಪ್ಪ ಉಪಸ್ಥಿತರಿದ್ದರು.
One thought on “ಕೌಶಲ್ಯಾಭಿವೃದ್ಧಿ ತರಬೇತಿ: ಯುವಕ ಯುವತಿಯವರ ಒಲವು ಸ್ವಉದ್ಯೋಗದತ್ತ ಸಾಗಿದೆ”
own bisness