Training

ಧಾರವಾಡದಲ್ಲಿ ಸಿದ್ದ ಉಡುಪು ತಯಾರಿಕೆ, ಹೈನುಗಾರಿಕೆ ಮತ್ತು ವ್ಯಾಪಾರ ಉದ್ದಿಮೆ ಕೌಶಲ್ಯಭಿವೃದ್ದಿ ತರಬೇತಿ

ದಿನಾಂಕ 06.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಸಿದ್ದ ಉಡುಪು ತಯಾರಿಕೆ, ಹೈನುಗಾರಿಕೆ ಮತ್ತು ವ್ಯಾಪಾರ ಉದ್ದಿಮೆ ಕೌಶಲ್ಯಭಿವೃದ್ದಿ ತರಬೇತಿಗಳನ್ನು ಆಯೋಜಿಸಲಾಗಿದ್ದು ಧಾರವಾಡ ಜಿಲ್ಲಾ ಪಂಚಾಯತ ಕೌಶಲ್ಯಭಿವೃದ್ದಿ ಕೇಂದ್ರದ ಅಧಿಕಾರಿಗಳಾದ ಶ್ರೀ ಭೀಮಪ್ಪರವರು ಉದ್ಘಾಟಿಸಿ ಕೌಶಲ್ಯಭಿವೃದ್ದಿ ತರಬೇತಿಗಳ ಕುರಿತು ಮಾಹಿತಿ ನೀಡಿದರು. ಈ ತರಬೇತಿಯಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 107 ಜನ ಜಂಟಿ ಬಾಧ್ಯತಾ, ಪ್ರಗತಿಬಂಧು ಮತ್ತು ಸ್ವ ಸಹಾಯ ಸಂಘದ ಪಲಾನುಭವಿಗಳು ಭಾಗವಹಿಸಿರುತ್ತಾರೆ.

ಸಾಯಂಕಾಲದ ಅವಧಿಯಲ್ಲಿ ತರಬೇತಿಗೆ ಗೌರವಾನ್ವಿತ ಮಾನ್ಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ|| ಎಲ್.ಎಚ್ ಮಂಜುನಾಥರವರು ಆಗಮಿಸಿದ ಪಲಾನುಭವಿಗಳನ್ನು ಉದ್ದೇಶಿಸಿ ಕೌಶಲ್ಯಭಿವೃದ್ದಿ ತರಬೇತಿಗೆ ಆಸಕ್ತಿಯಿಂದ ಭಾಗವಹಿಸಿದ್ದಕ್ಕೆ ಅಭಿನಂದಿಸುತ್ತಾ “ಪ್ರಸ್ತುತ ಪ್ರಚಲಿತದಲ್ಲಿರುವ ಸ್ವ ಉದ್ಯೋಗವೆಂದರೆ ಸಿದ್ದ ಉಡುಪು ತಯಾರಿಕೆ, ಏಕೆಂದರೆ ಯಾವುದೇ ಮನುಷ್ಯನನ್ನು ಅವನ ವ್ಯಕ್ತಿತ್ವದಿಂದ ಗುರುತಿಸುವ ಬದಲು ಅವನ ಉಡುಪಿನಿಂದ ಗುರುತಿಸುತ್ತಾರೆ ಹಾಗಾಗಿ ಪ್ರತಿಯೊಬ್ಬರು ತಮ್ಮ ಉಡುಪುಗಳನ್ನು ವಿಭಿನ್ನ ಮತ್ತು ವೈಶಿಷ್ಠ ಪೂರ್ಣವಾಗಿ ಧರಿಸಲು ಇಚ್ಚಿಸುತ್ತಿದ್ದು ಈ ಉದ್ಯೋಗಕ್ಕೆ ಅತಿ ಹೆಚ್ಚು ಬೇಡಿಕೆ ಇದೆ. ಉಡುಪುಗಳ ವಿಷಯದಲ್ಲಿ ಮಹಿಳೆಯರು ತುಂಬಾ ಜಾಗರೂಕತೆ ವಹಿಸುತ್ತಾರೆ ಡಿಸೈನ್ಸ, ಅಳತೆ, ನವನವೀನತೆ ನೋಡುತ್ತಾರೆ. ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸಿ ಖರೀದಿಸಿಸುತ್ತಾರೆ ಮತ್ತು ಒಳ್ಳೆಯ ಉಡುಪು ಧರಿಸಲು ತಿಂಗಳುಗಳಗಟ್ಟಲೆ ಟೇಲರ್‍ಗಳ ಹತ್ತಿರ ಅಲೆಡಾಡಿದ ಉದಾಹರಣೆಗಳಿವೆ. ಸಿದ್ದ ಉಡುಪು ತಯಾರಿಸುವುದು ಸಾಮಾನ್ಯ ಕೆಲಸವಲ್ಲ. ಅದರಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಗ್ರಾಹಕರ ಸಂತುಷ್ಠರಾಗುವುದಿಲ್ಲ. ಈ ತರಬೇತಿಯಿಂದ ವಿಶೇಷ ಪರಿಣಿತಿ ಪಡೆದು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಉಡುಪು ತಯಾರಿಸಿದರೆ ನಿಮಗೆÉ ಅವಕಾಶಗಳು ಮತ್ತು ಆದಾಯವು ಅಧಿಕವಾಗುವುದು. ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುವುದು ಎಂದು ಹೇಳಿದರು. ಬಂಡವಾಳವಿಲ್ಲದೇ ನಮ್ಮ ಕೌಶಲ್ಯಗಳನ್ನು ಅಳವಡಿಸಿ ನಮ್ಮದೇ ಆದ ಕಲ್ಪನೆ ರೂಪಕೊಡುವ ಉದ್ಯೋಗವೆಂದರೇ ಸಿದ್ದ ಉಡುಪು ತಯಾರಿಕೆ” ಎಂದು ಹೇಳಿದರು.

ನಂತರ ಹೈನುಗಾರಿಕೆ ತರಬೇತಿಯ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ಕೃಷಿ ಚಟುವಟಿಕೆಯೊಂದಿಗೆ ಈ ಉದ್ಯೋಗವನ್ನು ಮಾಡಬಹುದು. ಸ್ವ ಉದ್ಯೋಗಗಳಲ್ಲಿ ಉತ್ತಮ ಆದಾಯ ತಂದು ಕೊಡಬಲ್ಲ ಉದ್ಯೋಗವೆಂದರೆ ಹೈನುಗಾರಿಕೆ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದ್ದು ಅಧಿಕ ಹಾಲನ್ನು ಕೊಡುವ, ಮತ್ತು ನಿರ್ವಹಣೆಗೆ ಸುಲಭವಾಗುವ ತಳಿಯನ್ನು ಕಂಡು ಹಿಡಿದಿದ್ದಾರೆ. ಕೇವಲ ಮೊತ್ತ ರೂ 500/- ಪಾವತಿಸಿದರೇ ಸಾಕು ಹೆಣ್ಣು ಕರು ಹುಟ್ಟುವ ಹಾಗೆ ಕೃತಕ ಗರ್ಬಧಾರಣೆ ಮಾಡುತ್ತಾರೆ. ಇನ್ನು ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನು ಆವಿಷ್ಕರಿಸಿದ್ದು ಲಕ್ಷಾಂತರ ಹಣ ಪಾವತಿಸಿ ಎತ್ತುಗಳನ್ನು ಖರೀದಿಸುವ ಬದಲು ಆದಾಯ ತರುವ ಹಸುಗಳನ್ನು ಸಾಕಿ ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಎತ್ತುಗಳ ನಿರ್ವಹಣೆಗಿಂತ ಹಸುಗಳ ನಿರ್ವಹಣೆ ತುಂಬಾ ಸುಲಭ”ಎಂದು ಹೇಳಿದರು.

ನಂತರ ವ್ಯಾಪಾರ ಉದ್ದಿಮೆ ತರಬೇತಿಯ ಅಭ್ಯರ್ಥಿಗಳನ್ನು ಉದ್ದೇಶಿಸಿ “ಹಿಂದಿನ ಕಾಲದಲ್ಲಿ ಮನೆಯಲ್ಲಿ ಕೃಷಿ ಹೇರಳವಾಗಿತ್ತು ಮನೆಯಲ್ಲಿಯೇ ಕೃಷಿ ಕೆಲಸದೊಂದಿಗೆ ಎಲ್ಲಾ ಪದಾರ್ಥಗಳು ಮನೆಯಲ್ಲಿ ಸಿಗುತ್ತಿದ್ದವು. ಈಗ ಎಲ್ಲಾ ಪದಾರ್ಥಗಳನ್ನು ಕೊಂಡು ತರಬೇಕಾಗಿದ್ದರಿಂದ ವ್ಯಾಪಾರಿಗಳಿಗೆ ಸುವರ್ಣವಕಾಶ. ಪ್ರಸ್ತುತ ದಿನಗಳಲ್ಲಿ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿದ್ದು ಗ್ರಾಹಕರ ನಿರಂತರತೆ ಖಾಯ್ದುಕೊಳ್ಳುವುದು ಅವಶ್ಯಕ. ವ್ಯಾಪಾರಿಗಳು ಉದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ತರಬೇತಿಗಳು ಅವಶ್ಯಕ” ಎಂದು ಹೇಳಿದರು.

“ಯಾವುದೇ ಸ್ವ ಉದ್ಯೋಗವಾಗಲಿ ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ಅಳವಡಿಸಿಕೊಂಡರೇ ಯಶಸ್ವಿಯಾಗುತ್ತಾರೆ ಎಂಬ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ತನ್ನ ಪಲಾನುಭವಿಗಳಿಗೆ ಇಂತಹ ತರಬೇತಿಗಳನ್ನು ಆಯೋಜಿಸುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಜಯಶಂಕರ ಶರ್ಮ, ಧಾರವಾಡ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಮತ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *