NewsTraining

ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ತರಬೇತಿ ಸಮಾರೋಪ

“ಶ್ರದ್ದೆ, ಪರಿಶ್ರಮ ಮತ್ತು ಆತ್ಮವಿಶ್ವಾಸವಿದ್ದರೇ ಯಾವುದೇ ಸ್ವ ಉದ್ಯೋಗವಾಗಲಿ ಯಶಸ್ಸನ್ನು ಗಳಿಸಬಹುದು”

-ಶ್ರೀ ರಮೇಶ ಚಳಗೇರಿ, ಅಭಿಯಂತ್ರರು ನೀರು ಮತ್ತು ನೈರ್ಮಲ್ಯ ವಿಭಾಗ

ದಿನಾಂಕ 10.02.2018ರಂದು ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ಹೈನುಗಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆಯ ಐದು ದಿನಗಳ ತರಬೇತಿಗಳ ಸಮಾರೋಪವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಮಲ್ಲಾಪೂರ ನೀರು ನೈರ್ಮಲ್ಯ ವಿಭಾಗದ ಕೆಮಿಕಲ್ ಅಭಿಯಂತ್ರರಾದ ಶ್ರೀ ರಮೇಶ ಚಳಗೇರಿಯವರು ಉಪಸ್ಥಿತರಿದ್ದು ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಇಂದಿನ ಯುವ ಜನರು ನೌಕರಿಗಿಂತ ಸ್ವ ಉದ್ಯೋಗಕ್ಕೆ ಹೆಚ್ಚು ಒಲುಮೆ ತೋರುತ್ತಿದ್ದು ತುಂಬಾ ಸಂತೋಷದ ವಿಷಯವಾಗಿದ್ದು, ಶ್ರದ್ದೆ, ಪರಿಶ್ರಮ ಮತ್ತು ಆತ್ಮ ವಿಶ್ವಾಸವಿದ್ದರೇ ಯಾವುದೇ ಸ್ವ ಉದ್ಯೋಗವಾಗಲಿ ಯಶಸ್ಸನ್ನು ಗಳಿಸಬಹುದು. ಕೈ ಕೆಸರಾದರೇ ಮಾತ್ರ ಬಾಯಿ ಮೊಸರಾಗುವುದು ಎಂದು ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಾಂತ್ರರಾದ ಶ್ರೀ ರಮೇಶ ಚಳಗೇರಿಯವರು ಹೇಳಿದರು. ನಂತರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಮಲ್ಲಾಪೂರವರು ಮಾತನಾಡುತ್ತಾ ತರಬೇತಿಲ್ಲಿ ಕಲಿಸಿರುವ ವಿಷಯಗಳನ್ನು ಉದ್ಯೋಗಗಳಲ್ಲಿ ಅಳವಡಿಸಿಕೊಂಡು ಉತ್ತಮ ಆದಾಯಗಳಿಸಬೇಕು ಇದರಿಂದ ನಮ್ಮ ಕುಟುಂಬದ ಆರ್ಥಿಕಮಟ್ಟ ಸುದಾರಣೆಯಾಗುವುದು ಎಂದು ಹೇಳಿದರು.

ಹುಬ್ಬಳ್ಳಿ, ರಾಯಚೂರು, ನವಲಗುಂದ, ಕುಂದಗೋಳ ಮತ್ತು ಧಾರವಾಡ 65 ಜನ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಿ ಸ್ವ ಪ್ರೇರಣೆ, ಗ್ರಾಹಕ ಸಂಪರ್ಕ, ಯೋಜನಾವರದಿ ತಯಾರಿ, ಲೆಕ್ಕ ಪತ್ರ ನಿರ್ವಹಣೆ ಮುಂತಾದ ವಿಷಯಗಳಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

Leave a Reply

Your email address will not be published. Required fields are marked *