News

ಕಾನೂರಾಯಣ ಚಿತ್ರೀಕರಣ ಪೂರ್ಣ – ೯ರಂದು ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ.

ಶ್ರೀಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳ ೨೦ ಲಕ್ಷ ಸದಸ್ಯರು ಸೇರಿ ನಿರ್ಮಿಸಿರುವ ಕಾನೂರಾಯಣ ಚಲನಚಿತ್ರ ನಿರ್ಮಾಣ ಪೂರ್ಣಗೊಂಡಿದ್ದು, ಫೆ ೯ ರಂದು ಸಾಯಂಕಾಲ ೬ ಗಂಟೆಗೆ ಬೆಂಗಳೂರಿನಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಯಿತು.

ಚಿನ್ನಸ್ವಾಮಿ ಕ್ರಿಕೆಟ್ ಅಸೋಸಿಯೇಷನ್ ಕ್ಲಬ್ ನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಚಿತ್ರದ ನಿರ್ದೇಶಕ ಟಿ. ಎಸ್. ನಾಗಾಭರಣ, ಚಲನಚಿತ್ರ ತಂಡ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಚಲನಚಿತ್ರದ ಟೀಸೆರ್, ಬ್ಯಾನರ್ ಬಿಡುಗಡೆಯಾಯಿತು. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಿದ್ದು, ಐದು ಹಾಡು ಒಳಗೊಂಡಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯಗಳನ್ನು ಒಳಗೊಂದು ಗ್ರಾಮೀಣ ಪ್ರದೇಶದಲ್ಲಿ ಎದುರಿಸಿರುವ ಸವಾಲುಗಳನ್ನು ಮುಂದಿಟ್ಟುಕೊಂಡು ತಯಾರಿಸಿರುವ ಈ ಚಲನಚಿತ್ರದಲ್ಲಿ ಪ್ರಖ್ಯಾತ ಕಲಾವಿದರಿದ್ದು, ಚಿಕ್ಕಮಗಳೂರಿನ ಬೆಳವಡಿ ಗ್ರಾಮದಲ್ಲಿ ಸುಮಾರು ೪೦ ದಿನ ಚಿತ್ರೀಕರಣ ನಡೆಸಲಾಗಿದೆ.

Leave a Reply

Your email address will not be published. Required fields are marked *