NewsTraining

ನಗದು ರಹಿತ ವ್ಯವಹಾರ ಅನುಷ್ಠಾನ ಕುರಿತಾಗಿ ತರಬೇತಿ ಸಹಾಯಕರ ತರಬೇತುದಾರರ ತರಬೇತಿ

ಮೈಸೂರು ಫೆಬ್ರವರಿ 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ನ ಪ್ರಾಯೋಜಿತ ಕಾರ್ಯಕ್ರಮ “ಸ್ವ-ಸಹಾಯ ಸಂಘಗಳಲ್ಲಿ ನಗದು ರಹಿತ ವ್ಯವಹಾರ ಪದ್ಧತಿ”ಯನ್ನು ಅಳವಡಿಸುವ ನಿಟ್ಟಿನಲ್ಲಿ ದಿನಾಂಕ 29.10.2017 ರಂದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಂದ ಸಂಘದ ವ್ಯವಹಾರಗಳು ಕೂಡ ನಗದು ರಹಿತವಾಗಿ ವ್ಯವಹಾರಿಸುವ ನಿಟ್ಟಿನಲ್ಲಿ Rupay ಕಾರ್ಡ್‍ಗಳನ್ನು ವಿತರಿಸಲು ಈ ಮೂಲಕ ಚಾಲನೆ ನೀಡಲಾಗಿತ್ತು. ಈ Rupay ಕಾರ್ಡ್‍ಗಳನ್ನು ಬಳಕೆ ಮಾಡುವ ವಿಧಾನ ಹಾಗೂ ಪ್ರಸ್ತುತವಾಗಿ ಇರುವ ನಗದು ರಹಿತ ವ್ಯವಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸ್ವ-ಸಹಾಯ ಸಂಘದ ಸದಸ್ಯರಿಗೆ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಮೊದಲಿಗೆ ತಾಂತ್ರಿಕ ವಿಭಾಗದ ತರಬೇತಿ ಸಹಾಯಕರಿಗೆ “ನಗದು ರಹಿತ ವ್ಯವಹಾರ ಪದ್ಧತಿ” ಕುರಿತಾದ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಯನ್ನು ಶ್ರೀ ಸೋಮನಾಥ್.ಕೆ, ಆಡಳಿತ ಯೋಜನಾಧಿಕಾರಿಗಳು,ಮೈಸೂರು ಪ್ರಾದೇಶಿಕ ಕಛೇರಿ, ಮೈಸೂರು ಹಾಗೂ ಶ್ರೀಯುತ ಚಂದ್ರಶೇಖರ್.ಯು.ಎನ್, MIS ಯೋಜನಾಧಿಕಾರಿಗಳು, ಮೈಸೂರು ಜಿಲ್ಲೆ ಇವರು ಉದ್ಘಾಟಿಸಿ ಹಿಂದಿನ ಕಾಲದಲ್ಲಿ ಬ್ಯಾಂಕ್, ಇತರೆ ಇಲಾಖಾ ಚಟುವಟಿಕೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಕಾಯುವ ಸ್ಥಿತಿಯಿತ್ತು, ಹೆಚ್ಚಿನ ಸಮಯ ವ್ಯಹಿಸಬೇಕಿತ್ತು ಆದರೆ ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಇಂದು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವ ಮಾರ್ಗಗಳು ಗೋಚರಿಸುತ್ತಿವೆ. ಉದಾಹರಣೆಗೆ ಬ್ಯಾಂಕ್‍ನಲ್ಲಿರುವ ಹಣವನ್ನು ಯಾವ ಸಮಯದಲ್ಲದ್ದರೂ ಬಳಸಬಹುದು, Withdrawal/Deposit, ಖಾತೆಯ ಉಳಿತಾಯದ ವಿವರವನ್ನು ಬ್ಯಾಂಕಿಗೆ ತೆರಳದೆ ಬ್ಯಾಂಕ್ ATM ಕೇಂದ್ರಗಳಲ್ಲಿ, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮೂಲಕವೇ ಮಾಡಬಹುದು, ನಮ್ಮ ದೈನಂದಿನ ಖರೀದಿ/ಪಾವತಿ ಎಲ್ಲವನ್ನು ನೆಟ್ ಬ್ಯಾಂಕಿಂಗ್ ಇಲ್ಲವೆ ಡೆಬಿಟ್ ಕಾರ್ಡ್ ಮೂಲಕವೇ ವ್ಯವಹರಿಸುವ ಅವಕಾಶವಿದ್ದು, ಹಣದ ಸುರಕ್ಷತೆ, ಸಮಯ ವ್ಯಯ ನಿಯಂತ್ರಿಸಲು, ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲು ಈ ರೀತಿಯ ತಂತ್ರಜ್ಞಾನವೂ ಉಪಯೋಗಕರವಾಗಿದೆ. ನಮ್ಮ ಸ್ವ-ಸಹಾಯ ಸಂಘಗಳಲ್ಲೂ ಅಳವಡಿಸಿಕೊಂಡಿದ್ದಲ್ಲಿ ಸುಲಭ, ಸುರಕ್ಷಿತ ಮಟ್ಟದ ಸೇವೆಯನ್ನು ನೀಡಲು ಸಹಕಾರಿಯಾಗಿದೆ. ಆದ್ದರಿಂದ ತಾವೆಲ್ಲರೂ ತರಬೇತಿಯಲ್ಲಿ ಪಡೆಯುವ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ಸದಸ್ಯರಿಗೆ ತಿಳಿಸುವ ಮೂಲಕ ಭಾರತ ದೇಶದ “ಡಿಜಿಟಲ್ ಇಂಡಿಯಾ” ಕಾರ್ಯಕ್ರಮವೂ ಯಶಸ್ವಿಗೊಳ್ಳಲು ನಾವೆಲ್ಲರೂ ಕೈಜೋಡಿಸುವಂತಾಗಬೇಕು. ಅಕ್ಷರಸ್ಥರು/ಅನಕ್ಷರಸ್ಥರಲ್ಲಿ ತಂತ್ರಜ್ಞಾನದ ಅರಿವೂ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಉತ್ತಮ ರೀತಿಯಲ್ಲಿ ಯಶಸ್ವಿಗೊಳ್ಳಲಿ ಎಂದು ಮಾರ್ಗದರ್ಶನವನ್ನು ನೀಡಿ ಶುಭದಾಯಕವಾಗಿರಲ್ಲಿ ಎಂದು ಆಶಿಸಿದರು.

ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2016-17ನೇ ಆರ್ಥಿಕ ವರ್ಷವನ್ನು ‘ತಂತ್ರಜ್ಞಾನ ವರ್ಷ’ವೆಂದು ಅಚರಿಸಲಾಗಿ ಯೋಜನೆಯ ವಿವಿಧ ಕಾರ್ಯಕ್ರಮಗಳಲ್ಲಿ ತಂತ್ರಜ್ಞಾನದ ಅಳವಡಿಕೆ ಮಾಡಿಕೊಂಡು ಅಭಿವೃದ್ದಿಯತ್ತಾ ಮುನ್ನುಗುತ್ತಿದ್ದು ಈ ಹಂತದಲ್ಲಿ ಸಂಘದ ವ್ಯವಹಾರ, ಸದಸ್ಯರು ಕೂಡ “ನಗದು ರಹಿತ ವ್ಯವಹಾರ ಪದ್ಧತಿ”ಯನ್ನು ಅಳವಡಿಸಿಕೊಳ್ಳುವಂತೆ ಪೋತ್ಸಾಹಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸುತ್ತಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯ ಸಮಗ್ರ ರೂಪುರೇಷೆಯ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

1 ದಿನದ ಈ ತರಬೇತಿಯಲ್ಲಿ ಮೈಸೂರಿನ ವಿವಿಧ ಕೇಂದ್ರಗಳ ತಾಂತ್ರಿಕ ವಿಭಾಗದ ತರಬೇತುದಾರರು ಒಟ್ಟು 67 ಮಂದಿ ಭಾಗವಹಿಸುತ್ತಿದ್ದು, ತರಬೇತಿಯಲ್ಲಿ ಮಾಹಿತಿ, ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪೂರ್ಣಗೊಳಿಸಲಾಯಿತು.

Leave a Reply

Your email address will not be published. Required fields are marked *