AgricultureNews

ಹಸಿರು ಇಂಧನ ವಿಚಾರ ಸಂಕಿರಣ ಕಾರ್ಯಕ್ರಮ

ಹಸಿರು ಇಂಧನ ವಿಚಾರ ಸಂಕಿರಣ ಕಾರ್ಯಕ್ರಮವನ್ನುಸರ್ಕಾರಿ ಪ್ರೌಢಶಾಲೆಯ ಆವರಣ, ಹಳೇಕೆಂಪಯ್ಯನಹುಂಡಿ ಗ್ರಾಮ, ತಿ.ನರಸೀಪುರದಲ್ಲಿ ದಿನಾಂಕ 18.02.2018 ರಂದುನಡೆಸಲಾಯಿತು. ಇಡೀ ಜಗತ್ತಿಗೆ ಬೆಳಕು ನೀಡುವವನು ಅಘಾದವಾದ ಶಕ್ತಿಯನ್ನು ಹೊಂದಿದ್ದು, ಗ್ರಹಳಲ್ಲಿ ಪ್ರಮುಖ ಕೇಂದ್ರ ಸ್ಥಾನ ಹೊಂದಿರುವ ಆತ ಸೂರ್ಯ. ಸೂರ್ಯನಿಂದ ಹೊರ ಬೀಳುವ ಕಿರಣಗಳ ಮುಖೇನ ಸೌರ ಇಂಧನವಾಗಿ ಬಳಸಿ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್ ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಶ್ರೀ ಎ.ಶ್ರೀಹರಿ, ಶ್ರೀ ಕ್ಷೇ.ಧ.ಗ್ರಾ.ಯೋ(ರಿ.). ಪ್ರಾದೇಶಿಕ ನಿರ್ದೇಶಕರು, ಪ್ರಾದೇಶಿಕ ಕಛೇರಿ, ಮೈಸೂರು ಮಾಡಿದರು. ತಾಲೂಕಿನಲ್ಲಿ ಸ್ವ-ಸಹಾಯ ಸಂಘ, ಪ್ರಗತಿಬಂಧು ತಂಡ ಹಾಗೂ ಜಂಟಿ ಬಾಧ್ಯತೆ ತಂಡ ಈ 3 ರೀತಿಯ ಸಂಘ ರಚನೆ ಮಾಡಿ ಈ ಸದಸ್ಯರಿಗೆ ಪೂರಕವಾಗಿ ತರಬೇತಿ ನೀಡಿ. ಬ್ಯಾಂಕಿನಿಂದ ಪ್ರಗತಿನಿಧಿ ಒದಗಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 35 ವರ್ಷದಿಂದಲೂ ಮಾಡುತ್ತಾ ಬಂದಿದೆ. ಅದರಲ್ಲಿಯೂ ಕೃಷಿ ಮಾಡುವ ಸದಸ್ಯರಿಗೆ ಅನುದಾನ ನೀಡಿ ಅಧ್ಯಯನ ಪ್ರವಾಸ, ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಇದಲ್ಲದೇ ಸೆಲ್ಕೋ ಕಂಪನಿಯಿಂದ ಕೈ ಜೋಡಿಸಿ ಪ್ರತೀ ಸದಸ್ಯರು ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್ ಅನುಷ್ಠಾನ ಮಾಡುವಂತೆ ಮಾಹಿತಿ ನೀಡುತ್ತಿದ್ದು, ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್ ಅಳವಡಿಸಿಕೊಂಡ ಕುಟುಂಬದ ಸದಸ್ಯರಿಗೆ ಪ್ರಗತಿನಿಧಿ ಕೊಟ್ಟು ಅದನ್ನು ಪ್ರತೀ ವಾರದಲ್ಲಿ ಮರುಪಾವತಿ ಮಾಡಿಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮತ್ತು ಕಣ್ಣಿನ ದೃಷ್ಠಿಗಾಗಿ ಉತ್ತಮ ರೀತಿಯಲ್ಲಿ ಸೆಲ್ಕೋ ಸೋಲಾರ್ ಕೆಲಸ ನಿರ್ವಹಣೆ ಮಾಡುತ್ತದೆ. ಕಂಪನಿಯಿಂದ ರೂ.1000.00 ಅನುದಾನ ಮತ್ತು ಯೋಜನೆಯಿಂದ ರೂ.500.00 ಅನುದಾನ ನೀಡಿ ಪ್ರೋತ್ಸಾಹಿಸುತ್ತಿದ್ದು, ಈ ಕಂಪನಿಯವರು ಸರಿಯಾದ ಸಮಯಕ್ಕೆ ಮನೆಗೆ ಬಂದು ಸರ್ವೀಸ್ ನೀಡಲು ಸಹಾಯಕವಾಗಿದೆ ಆದ್ದರಿಂದ, ಸೋಲಾರ್ ಅಳವಡಿಕೆ ಮಾಡಿಕೊಳ್ಳುವಂತೆ ತಿಳಿಸಿದರು. ಅದಲ್ಲದೆ ನಿರ್ಗತಿಕರಿಗೆ ಸಹಾಯಧನವಾಗಿ ಮಾಸಾಶನ, ಮಕ್ಕಳ ವಿದ್ಯಾಭ್ಯಾಸಕ್ಕೆ ಸುಜ್ಞಾನ ನಿಧಿ ಶಿಷ್ಯವೇತನ, ನೂತನ ಹಾಲಿನ ಡೈರಿಗಳಿಗೆ ಅನುದಾನ ವಿತರಣೆ ನೀಡಿ ಪ್ರೋತ್ಸಾಹಿಸುತ್ತಿರುವುದಾಗಿ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಶ್ರೀ ರವಿಕಾಂತ್, ಸೆಲ್ಕೋಸೋಲಾರ್ ಕಂಪನಿ ಪ್ರಬಂಧಕರು ಇವರಿಂದ “ಸೋಲಾರ್ ಅಳವಡಿಸಿ ವಿದ್ಯುತ್ ಉಳಿಸಿ ಹಣ ಗಳಿಸಿ” ವಿಚಾರ ಗೋಷ್ಠಿ ನಡೆಯಿತು. ನಾವು ಮುಂದಿನ ದಿನಗಳಲ್ಲಿ ಶಾಶ್ವತವಾಗಿ ದೊರೆಯುವ ಇಂಧನಗಳನ್ನು ಮಾತ್ರ ಬಳಸಲು ಸಾಧ್ಯವಿದೆ. ಅಳದುಹೋಗುವ ಇನ್ನು ಕೆಲವೇ ವರ್ಷಗಲ್ಲಿ ಮುಗಿದು ಹೋಗಲಿರುವ ತೈಲ ಉತ್ಪನ್ನಗಳಾದ ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಅರಣ್ಯ ಸಂಪತ್ತು. ಪ್ರಸ್ತುತ ಮಾನವನಿಗೆ ಅಶ್ಯಕವಿರುವ ಇಂಧನವನ್ನು ನೀಗಿಸುವಲ್ಲಿ ವಿಫಲವಾಗಲಿದೆ. ಹಾಗೂ ಸಾಮಾನ್ಯ ಜನರು ಪೆಟ್ರೋಲ್, ಡೀಸೆಲ್ ಎಲ್.ಪಿ.ಜಿ ಸೀಮೆ ಎಣ್ಣೆ, ಇಂಧನ ಬಳಸುತ್ತಿರುವ ಈ ಉತ್ಪನ್ನಗಳು ಸಾಮಾನ್ಯ ಜನರ ಪಾಲಿಗೆ ಕಬ್ಬಿಣದ ಕಡೆಲೆಯಾಗಲಿದೆ. ನಾವು ಇಂದಿನ ದಿನಗಳಲ್ಲಿ ಅವಲಂಭಿತರಾಗಿರುವ ವಿದ್ಯುತ್ ಉತ್ಪಾದನೆ ಮಳೆಯ ಕೊರತೆಯಿಂದ ಕಡಿಮೆಯಾಗಿ ವಿದ್ಯುತ್‍ನ್ನು ಅವಲಂಭಿಸಿರುವ ಮನೆ ಕತ್ತಲಿನಿಂದ ಆವರಿಸಲಿದೆ. ಇದು ಕ್ರಮೇಣ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಈ ಸಮಸ್ಯೆಗಳಿಗೆ ಏಕೈಕ ಪರಿಹಾರ ಸೋಲಾರ್ ಲೈಟ್ ಮತ್ತು ವಾಟರ್ ಹೀಟರ್‍ಗಳನ್ನು ಅಳಡಿಸಿಕೊಳ್ಳುವುದು. ಹಾಗೂ ಸೂರ್ಯಶಕ್ತಿಯನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವಂತೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಶ್ರೀ ಜಯಸಿಂಹ, ಗ್ರೀನ್ ವೇ ಕುಕ್‍ಸ್ಟವ್ ಪ್ರಬಂಧಕರು ಇವರಿಂದ “ಪ್ರತಿಕೂಲ ಪರಿಸ್ಥಿತಿಯಲ್ಲಿ ಕುಕ್‍ಸ್ಟವ್ ಅಳವಡಿಕೆಯ ಉಪಯೋಗ” ಎರಡನೇ ವಿಚಾರ ಗೋಷ್ಠಿ ನಡೆಯಿತು. ಎಲ್.ಪಿ.ಜಿ ಸೀಮೆ ಎಣ್ಣೆ, ಇಂಧನ ಬಳಸುತ್ತಿರುವ ಈ ಉತ್ಪನ್ನಗಳು ಸಾಮಾನ್ಯ ಜನರ ಪಾಲಿಗೆ ಕಬ್ಬಿಣದ ಕಡೆಲೆಯಾಗುವುದು ಖಂಡಿತ. ನಾವು ಇಂದಿನ ದಿನಗಳಲ್ಲಿ ಅವಲಂಭಿತರಾಗಿರುವ ಇಂಧನಗಳಿಗೆ ಹೋಲಿಕೆ ಮಾಡಿದ್ದಲ್ಲಿ ಗ್ರೀನ್ ವ್ಹೇ ಕುಕ್‍ಸ್ಟವ್ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಅಡಿಗೆ ಮಾಡುವ ವಿಧಾನ, ಕಡಿಮೆ ಸೌದೆ ಬೇಗ ಅಡಿಗೆ ಆಗುವ ಈ ಒಲೆಯಲ್ಲಿ ಅಡಿಗೆ ಮಾಡಿ ಊಟ ಮಾಡಿದರೆ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು. ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀಯುತ ಸಾಜೀದ್ ಅಹಮದ್ ತಾಲೂಕು ಪಂಚಾಯಿತಿ ಸದಸ್ಯರು ಗರ್ಗೇಶ್ವರಿ, ಶ್ರೀಯುತ ಬಾಲಕೃಷ್ಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಳೇಕೆಂಪಯ್ಯನಹುಂಡಿ, ತಾಲೂಕು ಯೋಜನಾಧಿಕಾರಿ ಶ್ರೀಮತಿ ಸುನೀತಾಪ್ರಭು, ಕೃಷಿ ಮೇಲ್ವಿಚಾರಕರಾದ ಮಧುರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿ, ವಲಯದ ಮೇಲ್ವಿಚಾರಕರಾದ ಮಮತ, ಸೋಸಲೆ ವಲಯದ ಮೇಲ್ವಿಚಾರಕರಾದ ಯೋಗೀಶ್ ಹಾಗೂ ಗರ್ಗೇಶ್ವರಿ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *