MicrofinanceNewsTraining

ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತು ಸಹಾಯಕರಿಗೆ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ತರಬೇತಿ

“ಜೀವನದಲ್ಲಿ ಬದಲಾವಣೆಯನ್ನು ಬಯಸುವವರು ನಗದು ರಹಿತ ವ್ಯವಹಾರವನ್ನು ಕೈಗೆತ್ತುಕೊಳ್ಳಬೇಕು”
– ಶ್ರೀ ದಿನೇಶ. ಎಂ, ನಿರ್ದೇಶಕರು ಧಾರವಾಡ ಜಿಲ್ಲೆ

ದಿನಾಂಕ 16.02.2018ರಂದು ಮಹಿಳಾ ಜ್ಞಾನ ವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನದ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು. ಸದರಿ ತರಬೇತಿಂಯನ್ನು ಧಾರವಾಡ ಜಿಲ್ಲೆಯ ನಿರ್ದೇಶಕರಾದ ಶ್ರೀ ದಿನೇಶರವರು ಉದ್ಘಾಟಿಸಿ ತರಬೇತಿ ಅಭ್ಯರ್ಥಿಗಳನ್ನು ಕುರಿತು ಮಾತನಾಡುತ್ತಾ “ಜೀವನದಲ್ಲಿ ಬದಲಾವಣೆಯನ್ನು ಬಯಸುವವರು ನಗದು ರಹಿತ ವ್ಯವಹಾರ ಮಾಡಬೇಕು. ನಗದು ರಹಿತ ವ್ಯವಹಾರ ಮಾಡಲು ವೈಯಕ್ತಿಕ ಖಾತೆಯನ್ನು ಹೊಂದಿಬೇಕಾಗುತ್ತದೆ. ಪ್ರಚಲಿತ ವಿದ್ಯಮಾನದಲ್ಲಿ ಜನರು ಅತಿ ವೇಗವಾಗಿ ಕೆಲಸಗಳನ್ನು ಮಾಡಲು ಇಚ್ಚಿಸುತ್ತಿದ್ದು ನಗದು ರಹಿತ ವ್ಯವಹಾರದಿಂದ ಅತೀ ವೇಗವಾಗಿ ಹಣಕಾಸಿನ ವ್ಯವಹಾರ ಮಾಡಬಹುದು, ಇದರಲ್ಲಿ ಯಾವುದೇ ಹಣದ ಸೋರಿಕೆಯಾಗುವುದಿಲ್ಲ. ಪ್ರತಿಯೊಂದು ವ್ಯವಹಾರಕ್ಕೂ ತಂತ್ರಜ್ಞಾನದಿಂದ ಅಧಿಕೃತವಾದ ಧಾಖಲೆ ದೊರೆಯುತ್ತದೆ. ಪ್ರಸ್ತುತ ದಿನಗಳಲ್ಲಿ ನಾನು ಭಾರತೀಯ ಪ್ರಜೆ ಎಂದು ಗುರುತಿಸಿಕೊಳ್ಳಬೇಕಾದರೇ ನಾವು ಆಧಾರ ಕಾರ್ಡ, ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಲೇಬೇಕಾಗುತ್ತದೆ.

ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯು ಸಹ ಸಂಪೂರ್ಣವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಸಂಸ್ಥೆಯಾಗಿದ್ದು ನಗದು ರಹಿತ ವ್ಯವಹಾರವನ್ನು ಕಳೆದ ವರ್ಷ ಅಕ್ಟೋಬರ್‍ಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮುಖಾಂತರ ಬೆಳ್ತಂಗಡಿ ತಾಲೂಕಿನಲ್ಲಿ ಜಾರಿಗೆ ತಂದಿರುತ್ತದೆ. ಮುಂದಿನ ದಿನಗಳಲ್ಲಿ ಯೋಜನೆಯು ರಾಜ್ಯಾದ್ಯಾಂತ ಜಾರಿಗೆಯಾಗಲಿರುವುದರಿಂದ ಪಾಲುದಾರ ಸದಸ್ಯರು ನಗದುರಹಿತ ವ್ಯವಹಾರವನ್ನು ಮಾಡಬೇಕಾಗುತ್ತದೆ ಇದರಿಂದ ಸದಸ್ಯರ ಸಮಯ ಉಳಿತಾಯವಾಗುವುದು, ವ್ಯವಹಾರದಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ನಗದು ರಹಿತ ವ್ಯವಹಾರವಾದ್ದರಿಂದ ಮಂಜೂರಾದ ಸಾಲಗಳು ಅತ್ಯಂತ ಶೀಘ್ರವಾಗಿ ಸದಸ್ಯರ ಕೈ ಸೇರುತ್ತವೆ” ಎಂದು ಹೇಳಿದರು. ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಗುಂಪು ಲೆಕ್ಕ ಪರಿಶೋಧನಾ ವಿಭಾಗದ ಯೋಜನಾಧಿಕಾರಿಗಳು, ಎನ್, ಆರ್ ಎಲ್ ಎಮ್ ಸಮನ್ವಯಾಧಿಕಾರಿ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿರುತ್ತಾರೆ. ಧಾರವಾಡ ಜಿಲ್ಲೆಯ 37 ಜನ ತಾಂತ್ರಿಕ ಸಿಬ್ಬಂದಿಗಳು ಮತ್ತು ತರಬೇತಿ ಸಹಾಯಕರು ತರಬೇತಿಯಲ್ಲಿ ಭಾಗವಹಿಸಿದ್ದು ವೈಯಕ್ತಿಕ ಖಾತೆಯ ನಿರ್ವಹಣೆ, ಬ್ಯಾಂಕಿಗೆನಲ್ಲಿ ವ್ಯವಹಾರ ಮಾಡುವುದು, ಎ.ಟಿ.ಎಂ ಮತ್ತು ಡೆಬಿಟ್ ಕಾರ್ಡಗಳ ಬಳಕೆ, ಸ್ಥಳೀಯ ಬ್ಯಾಂಕಿನ ಎಜೆಂಟರಗಳಲ್ಲಿ ಬ್ಯಾಂಕಿನ ವ್ಯವಹಾರ ಕೈಗೊಳ್ಳುವುದು ಮತ್ತು ಮೋಬೈಲ್ ಬ್ಯಾಂಕಿಗ್ ಕುರಿತು ಮಾಹಿತಿ ನೀಡಲಾಯಿತು.

2 thoughts on “ನಗದು ರಹಿತ ವ್ಯವಹಾರ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತು ಸಹಾಯಕರಿಗೆ ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿಗಳಿಗೆ ತರಬೇತಿ

  1. ನಮಸ್ತೇ ನೀವು ಮಾಡಿರುವಂತ ಧರ್ಮಸ್ಥಳ ಸ್ವ ಸಹಾಯ ಸಂಘದಲ್ಲೀ ನಮ್ಮ ಭಾಗದ ಜನರಿಗೆ ಹೆಚ್ಚೀನ ರೀತಿಯಲ್ಲಿ ಬಡ್ಡಿ ಹಾಗೂ ಮೋಸ ಮತ್ತು ಹೇಚ್ಚೀನ ಮೊತ್ತ ಕೋಡ್ಸೊತ್ತೀನಂತ ಬ್ಯಾಂಕಿನಲ್ಲೀ FD ಅಂತ 10000 ಪಡೆದು ವಂಚನೆಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಕೋಳ್ಳೆಗಾಲ ತಾಲೋಕು ತಿಮ್ಮರಾಜೀಪುರ ಗ್ರಾಮ ನೆಡೆದಿದೆ ಲಕ್ಕರಸನಪಾಳ್ಯ ದಲ್ಲೀರುವ ಶಾಖೆಯಲ್ಲೀ ಅಧಿಕಾರಿ ಯಶೋಧ ಹಾಗೂ ರಾಜೇಶ್ ಎಂಬಾತರು ತಾವು ನೆಡೆದಿರುವ ಬಗ್ಗೆ ತಾವು

Leave a Reply to Prakash malipatil Cancel reply

Your email address will not be published. Required fields are marked *