NewsTrainingWomen Empowerment

ಸಿರಿಧಾನ್ಯಗಳ ಮೌಲ್ಯವರ್ಧನೆ ಸ್ವ ಉದ್ಯೋಗಕ್ಕಾಗಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

“ಸಿರಿಧಾನ್ಯ ಆರೋಗ್ಯ ಪೂರ್ಣ ದಾನ್ಯಗಳಾಗಿದ್ದು, ಇತ್ತೀಚೆಗೆ ಜನ ಸಾಮಾನ್ಯರ ಬೇಡಿಕೆಯ ಉತ್ಪಾದನೆ ಆಗಿದೆ. ಇದರಿಂದ ತಯಾರಿಸುವ ಖಾದ್ಯಗಳನ್ನು ವಿಶೇಷವಾಗಿ ನಿಮ್ಮ ಊರಲ್ಲಿಯೇ ಒಂದು ‘ಸಿರಿ ಕೆಫೆ’ಯನ್ನಾಗಿಸಿಕೊಂಡು ವಿಶೇಷ ಸ್ವ ಉದ್ಯೋಗವನ್ನು ಮಾಡಿಕೊಳ್ಳಲು ಸಾಧ್ಯ. ಇದಕ್ಕೆ ಬೇಕಾಗುವ ಮಾಹಿತಿ, ಮಾರ್ಗದರ್ಶನ ಮತ್ತು ಆರ್ಥಿಕ ಸಹಕಾರ ನಮ್ಮ ಸಂಸ್ಥೆಯಿಂದ ನೀಡಬಹುದು” ಎಂದು ಉದ್ಘಾಟನೆಯನ್ನು ದೀಪ ಬೆಳಗಿಸುವ ಮುಖೇನ ಚಾಲನೆ ಮಾಡಿದ ಶ್ರೀಮತಿ ಮನೋರಮಾ ಭಟ್, ನಿರ್ದೇಶಕರು, ಸಿರಿ ಗ್ರಾಮದ್ಯೋಗ ಸಂಸ್ಥೆ, ಧರ್ಮಸ್ಥಳ ಇವರು ತಿಳಿಸಿದರು.

“ಸಿರಿಧಾನ್ಯವನ್ನು ಈ ಭಾಗದಲ್ಲಿ ಬೆಳೆದರೂ, ಧಾನ್ಯದ ಮಹತ್ವವನ್ನು ಅರಿಯುವ ಕೊರತೆ ಇತ್ತು. ಉತ್ತಮ ಆರೋಗ್ಯದೊಂದಿಗೆ ವಿಶೇಷ ಆಹಾರ ತಯಾರಿಕೆಯೊಂದಿಗೆ ಈ ಉದ್ಯೋಗ ಸ್ಥಳೀಯವಾಗಿ ಗ್ರಾಮಮಟ್ಟದಲ್ಲಿ ಯಶಸ್ವಿಗೊಳಿಸಬಹುದು” ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಜಯಶಂಕರ ಶರ್ಮಾ, ಪ್ರಾದೇಶಿಕ ನಿರ್ದೇಶಕರು, ಧಾರವಾಡ ಇವರು ತಿಳಿಸಿದರು. ಶ್ರೀಮತಿ ವಿಶಾಲ, ಪ್ರಾಂಶುಪಾಲರು, ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆ, ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದರು. ಶ್ರೀಮತಿ ವಿಜಯಲಕ್ಷ್ಮಿ ಉಪನ್ಯಾಸರು ನಿರೂಪಣೆಯೊಂದಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಯು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಹಲವಾರು ಸ್ವ ಉದ್ಯೋಗ ಪೂರಕ ಕೃಷಿಆಧಾರಿತ ಮತ್ತು ಕೃಷಿಯೇತರ ತರಬೇತಿಗಳನ್ನು ಈಗಾಗಲೇ ಹಮ್ಮಿಕೊಳ್ಳುತ್ತಲಾಗಿರುವುದು. ಅದಲ್ಲೂ ಆರೋಗ್ಯಭರಿತ ಸಿರಿಧಾನ್ಯಗಳ ಮೌಲ್ಯವರ್ಧನೆ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯನ್ನು ಗಮನಿಸಲಾಗಿ ವಿಶೇಷ ಸಿರಿಧಾನ್ಯ ಮೌಲ್ಯವರ್ಧನೆ ತರಬೇತಿಯನ್ನು ಧಾರವಾಡ ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. 3 ದಿನದ ಉಚಿತ ತರಬೇತಿಯನ್ನು ದಿನಾಂಕ:6.03.2018ರಂದು ಉದ್ಘಾಟಿಸಿ, ಪ್ರಾತ್ಯಕ್ಷಿಕೆ ತರಬೇತಿಯನ್ನು ದಿ.7.03.2018ರಂದು ಆಯೋಜಿಸಲಾಗಿದೆ. 50 ಬಗೆಯ ಸಿರಿಧಾನ್ಯಗಳ ಖಾದ್ಯ ತಯಾರಿಕೆಯ ಪ್ರಾತ್ಯಕ್ಷಿಕಾ ತರಬೇತಿಯನ್ನು ಬೈಲಹೊಂಗಲದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಮತಿ ಭಾಗ್ಯಶ್ರೀ ಅಕ್ಕಿ ಇವರು ನಿರೂಪಿಸಲಿದ್ದಾರೆ. ಸದರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತ ಖಾದ್ಯಗಳ ಪ್ರದರ್ಶನದೊಂದಿಗೆ ನೆರವೇರಿಸಲಿರುವುದು. ಈ ತರಬೇತಿಯಲ್ಲಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗುಲ್ಬರ್ಗಾ, ರಾಯಚೂರು, ಕೊಪ್ಪಳ ಮತ್ತು ಗದಗ ಹೀಗೆ ಸುತ್ತಲಿನ ಎಲ್ಲ ಜಿಲ್ಲೆಗಳಿಂದ 70 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿ ಸದಸ್ಯರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *