NewsWomen Empowerment

ಮಹಿಳಾ ದಿನಾಚರಣೆ -ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಹಾಗೂ ಸಿರಿಧಾನ್ಯಗಳ ಪದ್ಧತಿಯನ್ನು ಅರಿವು ಮೂಡಿಸುವ ಕಾರ್ಯಕ್ರಮ

ಸ್ಥಳ: ಜೆ.ಎಸ್.ಎಸ್ ಭವನ, ವಾಟಾಳು ಗ್ರಾಮ, ತಿ.ನರಸೀಪುರ ತಾಲೂಕು.

ಯೋಜನಾಧಿಕಾರಿಯವರು ಬರುವ ಎಲ್ಲಾ ಅತಿಥಿಗಳನ್ನು ಸ್ವಾಗತಿಸುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನರಸೀಪುರ ತಾಲೂಕಿಗೆ ಬಂದು 6 ವರ್ಷವಾಗಿದ್ದು, ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣಾ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ಸ್ವಉದ್ಯೋಗ, ನಾಗರೀಕ ಸೌಲಭ್ಯಗಳ ಬಳಕೆ ಮುಂತಾದ ಗುರಿಗನ್ನಿರಿಸಿಕೊಂಡು ಯೋಜನೆಯು ಪ್ರಾರಂಭಿಸಿದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವು ಶ್ರೀಮತಿ ಹೇಮಾವತಿ. ವಿ.ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಇಂದು ಜನಪ್ರಿಯ ಕಾರ್ಯಕ್ರಮವಾಗಿ ಬೆಳೆದು ಬಂದಿದೆ. ಹಾಗೂ ತಾಲೂಕಿನಲ್ಲಿ ಮಹಿಳೆಯರಿಗೆ 500 ತರಬೇತಿ ಹಮ್ಮಿಕೊಂಡಿದ್ದು, ಈ ಪ್ರಸ್ತುತ ವರ್ಷದಲ್ಲಿ ಕಂಪ್ಯೂಟರ್ ತರಬೇತಿ ಹಾಗೂ ಟೈಲರಿಂಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ 25 ಜ್ಞಾನ ವಿಕಾಸ ಕೇಂದ್ರವಿದ್ದು ಎಲ್ಲಾ ಕೆಂದ್ರಗಳಲ್ಲಿಯೂ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನಾದ್ಯಂತ ಸ್ವಸಹಾಯ ಸಂಘಗಳ ಮೂಲಕ ನಿರಂತರ ಜ್ಞಾನವನ್ನು ಕೊಡುವ ಕೆಲಸ ಮಾಡುತ್ತಿದೆ. ಅದಕ್ಕೆ ಉದಾಹರಣೆ ಇಂದಿನ ದಿನ ಮಹಿಳೆಯರಿಗೆ ಕಾನೂನು ಮಾಹಿತಿ ನೀಡುತ್ತಿರುವುದು ಹೀಗೆ ಬೇರೆ ಬೇರೆ ಸಾಮಾಜಿಕ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಮಾರ್ಗದರ್ಶನ ನೀಡುತ್ತಿರುವ ಪರಮ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗೆರವರಿಗೆ ಧನ್ಯವಾದಗಳು ಎಂದು ಕಾರ್ಯಕ್ರಮವನ್ನು ಕುರಿತು ಶ್ರೀ ಶ್ರೀ ಶ್ರೀ ಸಿದ್ಧಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಸೂರ್ಯಸಿಂಹಾಸನ ಮಠ, ವಾಟಾಳು ಇವರು ಶುಭಹಾರೈಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ತಿ.ನರಸೀಪುರದ ಗೌರವಾಧ್ಯಕ್ಷರು ಶ್ರೀ ಎ ನಾಗಿರೆಡ್ಡಿ
ಮೊದಲಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಕುರಿತು ಶುಭಹಾರೈಸಿದರು. ಮಹಿಳೆಯರಿಗೆ ಯಾವುದೇ ತಾರತ್ಯಮವಾಗಬಾರದು. ಗಂಡು ಹೆಚ್ಚು ಹೆಣ್ಣು ಕಡಿಮೆ ಎನ್ನುವ ವ್ಯತ್ಯಾಸ ಇಂದು ಸಮಾಜದಲ್ಲಿ ಇರಬಾರದು. ಇದೇ ಉದ್ದೇಶದಿಂದ ಮಹಿಳೆಯರಿಗೆಯಾದ ಹಕ್ಕುಗಳು ಇರುವುದು
1. ಸಮಾನತೆಯ ಹಕ್ಕು: ಸಮಾನತೆಯ ಹಕ್ಕು ಎಲ್ಲಾ ಹಕ್ಕುಗಳ ಮತ್ತು ಸ್ವಾತಂತ್ರ್ಯಗಳ ಮೂಲಕ ಅಡಿಪಾಯ, ಸಮಾನತೆಯ ಹಕ್ಕು ಕಾನೂನಿನ ಮುಂದೆ ಸಮಾನತೆಯನ್ನು ನೀಡುತ್ತದೆ. ಬೇರೆ ಬೇರೆ ಲಿಂಗ ತಾರತಮ್ಯವನ್ನು ಎಣಿಸುವಂತಿಲ್ಲ ಎಂಬ ಸಮಾನತೆಯನ್ನು ನೀಡುತ್ತದೆ
2. ಶೋಷಣೆಯಿಂದ ಮುಕ್ತವಾಗಿ ಘನತೆಯಿಂದ ಜೀವಿಸುವ ಹಕ್ಕು: ಶೋಷಣೆಯ ವಿರುದ್ಧ ರಕ್ಷಣೆಯಿಲ್ಲದಿದ್ದರೆ, ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ. ಆದ್ದರಿಂದ ಈ ಹಕ್ಕು ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬಾಳುವ ಹಕ್ಕುಗಳಿಗೆ ಪೂರಕವಾಗಿದೆ. ಹೆಣ್ಣುಮಕ್ಕಳ ಮಾರಾಟ, ಕಳ್ಳ ಸಾಗಾಣಿಕೆ, ಮುಂತಾದ ವಿವಿಧ ಶೋಷಣೆಗೆ ಗುರಿಯಾಗುತ್ತಲೇ ಬಂದಿದ್ದಾರೆ. ಮಹಿಳೆಯನ್ನು ವೇಶ್ಯಾ ವೃತ್ತಿಗೆ ತಳ್ಳುವುದು. ಮಹಿಳೆಯ ವಿರುದ್ಧ ಕ್ರೌರ್ಯವೆಸಿಕೊಳ್ಳು ಅತ್ಯಂತ ಹೇಯ ಕ್ರೌರ್ಯವಾಗಿದೆ. ಇದನ್ನು ತಡೆಗಟ್ಟಲು ಶೋಷಣೆಯಿಂದ ಮುಕ್ತವಾಗಿ ಇರಿಸಲು ಶೋಷಣೆಯ ಹಕ್ಕುನ್ನು ಜಾರಿಗೆ ತರಲಾಗಿದೆ.
3. ಉಚಿತ ಶಿಕ್ಷಣದ ಹಕ್ಕು: ಮಹಿಳೆಯರಿಗೆ ಪುರುಷರಷ್ಟೇ ಸಮಾನ ಶಿಕ್ಷಣವನ್ನು ಮಾಡುವ ಅಧಿಕಾರವಿದೆ. ಇದು ಸರ್ಕಾರದ ಜವಾಬ್ದಾರಿಯೂ ಆಗಿರುತ್ತದೆ.

4. ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ನಿಷೇಧ ಕಾಯ್ದೆ:  ಮದುವೆಯಾಗಿ ಮತ್ತೊಂದು ಮನೆಗೆ ಹೋಗುವ ಮಗಳ ಶಿಕ್ಷಣಕ್ಕೆ ಮಾಡುವ ಖರ್ಚು ವ್ಯರ್ಥ ಎಂಬ ಆಲೋಚನೆಯಿಂದಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೆಣ್ಣು ಮಗು ಹುಟ್ಟಿದಂದಿನಿಂದಲೇ ತಂದೆ ತಾಯಿಯರಿಗೆ ಅವಳ ಮದುವೆಗೆ ವರದಕ್ಷಿಣೆಗಾಗಿ ಹಣ ಹೊಂದಿಸುವುದು ಹೇಗೆಂಬ ಯೋಚನೆ ಪ್ರಾರಂಭವಾಗುತ್ತದೆ. ಶಿಶು/ಹೆಣ್ಣು ಭ್ರೂಣ ಹತ್ಯೆ. ಇದು ಹೆಣ್ಣಿನ ಹುಟ್ಟುವ ಹಕ್ಕನ್ನೇ ಕಸಿದುಕೊಂಡಂತೆ. ಇದನ್ನು ತಡೆಯಲು 1994 ಗರ್ಭ ಧಾರಣಾ ಮತ್ತು ಪ್ರಸವ ಪೂರ್ವ ರೋಗ ನಿದಾನ ತಂತ್ರಗಳ ಕಾನೂನನ್ನು ಜಾರಿಗೆ ತರಲಾಯಿತು. ಸ್ತ್ರೀ ಪುರುಷರ ಸಂಖ್ಯೆಯ ನಡುವಿನ ಸಮಾಜಿಕ ಸಮತೋಲನ ಏರುಪೇರಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು.
5.ವರದಕ್ಷಿಣೆ ತಡೆ ಕಾಯ್ದೆ, ವಿಚ್ಛೇದನ ಕಾಯ್ದೆ, ಲೈಂಗಿಕ ದೌರ್ಜನ್ಯ ಕಾಯ್ದೆ, ಬಾಲ್ಯ ವಿವಾಹ ಕಾಯ್ದೆ ಮುಂತಾದ ಹಕ್ಕುಗಳ ಬಗ್ಗೆ ಮಹಿಳೆಯರಿಗೆ ಸವಿಸ್ತಾರವಾಗಿ ಅರಿವನ್ನು ಮೂಡಿಸಿದರು.

ವಿಚಾರ ಗೋಷ್ಠಿ-1 “ಕೌಟುಂಬಿಕ ದೌರ್ಜನ್ಯ”
ಸಂಪನ್ಮೂಲ ವ್ಯಕ್ತಿ:  ಶ್ರೀಮತಿ ಶೊಭ, ವಕೀಲರು, ತಿ.ನರಸೀಪುರ.
ಕೌಟುಂಬಿಕ ದೌರ್ಜನ್ಯಗಳ ಇಂದು ಬಹುಪಾಲು ಮಹಿಳೆಯರು ತಮ್ಮ ಕುಟುಂಬದ ವ್ಯಕ್ತಿಗಳಿಂದಲೇ ದೌರ್ಜನ್ಯಕ್ಕೆ, ಹಿಂಸೆಗೆ ಒಳಗಾಗುತ್ತಿದ್ದಾರೆ. ಇಂತಹ ದೌರ್ಜನ್ಯ ಅನೇಕ ಕಾಲದಿಂದ ನಡೆಯುತ್ತಾ ಬಂದಿದೆ. ಇದಕ್ಕೆ ಕಾರಣ ಮಹಿಳೆಯರು ಆರ್ಥಿಕವಾಗಿ ಪುರುಷರನ್ನು ಅವಲಂಭಿಸಿರುವುದು ಮತ್ತು ಪುರುಷರು ಮಹಿಳೆಯರಿಗಿಂತ ಮೇಲು ಎಂಬ ಭಾವನೆ ಸಮಾಜದಲ್ಲಿ ಬೇರೂರಿರುವುದು. ಹಾಗಾಗಿ ಇದರ ವಿರುದ್ಧ ಹೋರಾಡಲು ಮತ್ತು ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಪಡೆಯಲು ತೀರಾ ಇತ್ತೀಚಿನವರೆಗೆ ಮಹಿಳೆಗೆ ಯಾವುದೇ ಕಾನೂನಿನ ಬೆಂಬಲ ಇರಲಿಲ್ಲ. ಮಹಿಳಾ ಸಂಘಟನೆಗಳ ದೀರ್ಘ ಕಾಲದ ಹೋರಾಟದ ಫಲವಾಗಿ “ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ” ಎಂಬ ಕಾನೂನು 2006 ರಿಂದ ಜಾರಿಗೆ ಬಂದಿದೆ. ಕುಟುಂಬದ ಸದಸ್ಯರಿಂದಲೇ ನಡೆಯುವ ದೌರ್ಜನ್ಯ ಹಾಗೂ ಹಿಂಸೆಗಳ ವಿರುದ್ಧ ಹೋರಾಡಲು ಮಹಿಳೆಯರಿಗೆ ಈ ಕಾನೂನಿನ ಅರಿವು ಇರುವುದು ಅಗತ್ಯ. ಈ ಕಾನೂನಿನ ಅಡಿಯಲ್ಲಿ ರಕ್ಷಣೆ ದೊರೆಯವುದು. ಮಹಿಳೆಯರಿಗೆ ಮಾತ್ರ ಪುರುಷರಿಂದ ಹಿಂಸೆಗೆ ಅಥವಾ ದೌರ್ಜನ್ಯಕ್ಕೆ ಒಳಗಾಗಿದ್ದರೆ ಮಾತ್ರ ಮಹಿಳೆ ಅವರ ವಿರುದ್ಧ ದೂರು ನೀಡಬಹುದು. ಮಹಿಳೆ ವಿವಾಹಿತೆಯಾಗಿರುವಲ್ಲಿ, ಹಿಂಸೆ ನೀಡುವವರು ಮಹಿಳೆಯಾಗಿದ್ದರೂ ಅವಳ ಗಂಡನ ಸಂಬಂಧಿಗಳಾಗಿದ್ದರೆ ಅವರ ವಿರುದ್ಧ ಆಕೆ ದೂರು ನೀಡಬಹುದು. ಎಂದು ತಿಳಿಸಿದರು. ಅನ್ಯಾಯಕ್ಕೆ ಒಳಗಾದ ಹೆಣ್ಣುಮಕ್ಕಳು ತಾಲೂಕು ಸಂರಕ್ಷಣಾ ಅಧಿಕಾರಿ ಅವರಿಗೆ ವಿಷಯ ಮುಟ್ಟಿಸಿ ಅವರ ಮುಖೇನ ಅವರಿಗೆ ಆಗಿರು ಅನ್ಯಾಯಕ್ಕೆ ನ್ಯಾಯವನ್ನು ಪಡಕೊಳ್ಳುವ ಮಾರ್ಗವನ್ನು ಪಡಕೊಳ್ಳಬಹುದು. ಯಾವುದೇ ಒಂದು ಕಾಯ್ದೆ ರಚಿತವಾಗಿರುವುದು ಮಹಿಳೆಯರಿಗೆ ಸಮಾನ ಗೌರವ ಸಿಗಬೇಕು ಎಂಬ ದೃಷ್ಠಿಯಿಂದ ರಚಿತವಾಗಿದೆಯೇ ಹೊರತು ಅದನ್ನು ದುರುಪಯೋಗ ಪಡಿಸಿಕೊಳ್ಳುಬಾರದೆಂದು ತಿಳಿಸಿದರು.

ವಿಚಾರ ಗೋಷ್ಠಿ-2 “ಆಸ್ತಿ ಹಕ್ಕು”
ಸಂಪನ್ಮೂಲ ವ್ಯಕ್ತಿ: ಕುಮಾರಿ ನಾಗಮ್ಮ, ವಕೀಲರು, ತಿ.ನರಸೀಪುರ.
ಮಹಿಳೆಯರು ಆರ್ಥಿಕವಾಗಿ ಪರಾವಲಂಬಿಗಳಾಗಿರುವುದೇ ಈ ಪಿಡುಗು ಇಷ್ಟು ಸರ್ವವ್ಯಾಪಿಯಾಗಿ ಬೆಳೆಯುವುದಕ್ಕೆ ಕಾರಣ ಎಂಬ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಸಮಾನ ಹಕ್ಕು ನೀಡಲಾಯಿತು. 1956ರಷ್ಟು ಹಿಂದಿನಿಂದಲೇ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳೊಂದಿಗೆ ಸಮಾನವಾಗಿ ಆಸ್ತಿ ಹಂಚಿಕೊಳ್ಳುವ ಹಕ್ಕುನ್ನು ನೀಡಲಾಗಿತ್ತು. 1994ರಲ್ಲಿ ಕರ್ನಾಟಕದಲ್ಲಿ 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಪಿತ್ರಾರ್ಜಿತ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿಹಕ್ಕನ್ನು ನೀಡಲಾಯಿತು. ವಿರೋಧ ವಾದ ವಿವಾದಗಳ ನಡುವೆಯೇ ಈ ಕಾನೂನು ಜಾರಿಯಾಯಿತು. ಗಂಡು ಮಕ್ಕಳಿಂದ ವಂಶ ಮುಂದುವರಿಯುವುದು ಎಂಬ ಬಲವಾಗಿ ಈಗಲೂ ನಂಬಿರುವ ಸಮಾಜ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಸಮಪಾಲು ಪಡೆಯುವ ಹಕ್ಕು ನೀಡಿದ ಈ ಕ್ರಮ ಮಹಿಳಾ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

ಅಧ್ಯಕ್ಷತೆ:  ಶ್ರೀ ಜಿ.ರವಿಶಂಕರ್, ಅಧ್ಯಕ್ಷರು, ವಕೀಲರ ಸಂಘ ತಿ.ನರಸೀಪುರ.
ಅವಿಭಕ್ತ ಕುಟುಂಬದ ಮಹತ್ವ ಕಡಿಮೆಯಾಗತೊಡಗಿತೆನ್ನುವುದರಲ್ಲಿ ತರ್ಕವಿದೆ. ಹಾಗಿದ್ದ ಮಾತ್ರಕ್ಕೆ ಕೌಟುಂಬಿಕ ತಳಹದಿಯಲ್ಲಿ ಬರುವ ಮಾನವೀಯ, ರಕ್ತಸಂಬಂಧ, ಒಗ್ಗಟ್ಟು ಸಂಬಂಧಗಳ ಪರಿವೆಯೇ ಇಲ್ಲವೇ ಎಂಬ ಪ್ರಶ್ನೆ ಉದ್ಭವವಾಗಬಹುದು. ಅವಿಭಕ್ತ ಕುಟುಂಬದಲ್ಲಿ ಪ್ರೀತಿ, ಸಂಬಂಧಗಳ ಮೌಲ್ಯ, ತಿಳಿಯದೆ ಮನುಷ್ಯ ಕೇವಲ ಹಣ ಸಂಪಾದಿಸುವುದನ್ನೇ ಗುರಿಯನ್ನಾಗಿ ಮಾಡಿಕೊಂಡಿದ್ದಾನೆ. ಆದರೆ ಸಂಬಂಧಗಳಿಗೆ ಬೆಲೆ ಕೊಡಬೇಕು ಕೌಟುಂಬಿಕ ಮೌಲ್ಯದ ಮಹತ್ವ ಎಂಥದ್ದು ಎಂಬುದನ್ನು ಅರಿಯಬೇಕು ಎಂಬ ಸಂದೇಶ ನೀಡಿದರು.

ಶ್ರೀ ಕೆ.ಎನ್.ಪ್ರಭುಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು., ತಿ.ನರಸೀಪುರ.
ಭಾರತ ದೇಶದಲ್ಲಿ ಸಂವಿಧಾನ ಪೂರ್ವದಲ್ಲಿ ಮಹಿಳೆಯರಿಗೆ ಮೀಸಲಾತಿಯ ಹಕ್ಕುಗಳು ಇರಲಿಲ್ಲ. ಉನ್ನತ ವ್ಯಾಸಂಗದಲ್ಲಿ ತಂದೆ ತಾಯಿಗೆ ಸ್ವಾವಲಂಭಿ ತಂದು ಕೊಳ್ಳುವುದಕ್ಕಿಂತ ಕ್ಷೇತ್ರದ ಶಿಕ್ಷಣ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳಲ್ಲಿ ಪುರುಷರಿಗೆ ಸಮಾನವಾದಂತೆ 50% ಮೀಸಲಾತಿ ಇದೆ. ಅದೇ ತರಹ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಲ್ಲಿಯೂ ಮೀಸಲಾತಿ ಇರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮರಿನಂಜಪ್ಪ ವಾಟಾಳು ಗ್ರಾಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ, ವಲಯದ ಮೇಲ್ವಿಚಾರಕರಾದ ಸುಧಾ ಮತ್ತು ಯೋಗೀಶ್ ಹಾಗೂ ಮೂಗೂರು ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ವರದಿ : ಶ್ರೀಮತಿ ಸುನೀತಾ ಪ್ರಭು

Leave a Reply

Your email address will not be published. Required fields are marked *