success storyWomen Empowerment

‘ಆತ್ಮವಿಶ್ವಾಸವೇ ಆರ್ಥಿಕ ಮುನ್ನಡೆಗೆ ಸಾಕ್ಷಿ’

ಶಿಕ್ಷಣವೇ ಬದುಕಿಗೆ ಆಧಾರವಲ್ಲ. ‘ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎನ್ನುವಂತೆ ಶಿಕ್ಷಣದಿಂದ ವಂಚಿತರಾದವರಿಗೆ ಮಾದರಿ ಹೆಣ್ಣುಮಗಳು ಶ್ರೀಮತಿ ತೋಟಮ್ಮ. ಇವರು ಕೇವಲ 7ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದ್ದು, ಈ ದಿನ ತಾವೇ ಸ್ವತ: ಉದ್ಯೋಗವನ್ನು ಅರಿಸಿಕೊಳ್ಳುವುದರೊಂದಿಗೆ ಇನ್ನೂ 10 ಜನರಿಗೆ ಉದ್ಯೋಗವನ್ನು ಸೃಷ್ಠಿ ಮಾಡಿಕೊಟ್ಟಿರುವ ಉದ್ಯಮಗಾರ್ತಿಯೇ ಎಂದು ಹೇಳಬಹುದು.

ಲಿಂಗಸೂರಿನಿಂದ 15 ಕಿ.ಮೀ. ದೂರದಲ್ಲಿರುವ ಹೊನ್ನಹಳ್ಳಿ ಒಂದು ಪುಟ್ಟ ಗ್ರಾಮ. 2013 ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘವು ಅಲ್ಲಿ ವಿಸ್ತರಣೆಯಾದಾಗ ಆ ಗ್ರಾಮದಲ್ಲಿ ಹೊಲಮನೆ ಬದುಕನ್ನು ಹೊರತು ಪಡಿಸಿದರೆ ಯಾವುದೇ ಹೇಳುವಂತಹ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಹುಡುಕುವ ಪ್ರಯತ್ನ ಮಾಡಿರಲಿಲ್ಲ. ಆದರೆ ಇದೇ ಗ್ರಾಮದ ತೋಟಮ್ಮವರು ರೊಟ್ಟಿಯ ವ್ಯಾಪಾರವನ್ನು ಮಾಡುವ ಕನಸನ್ನು ಕಟ್ಟಿಕೊಂಡಿದ್ದರು. ಈ ಕನಸನ್ನು ನನಸಾಗಿಸುವ ಕಾಲ ಕೂಡಿ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈಶ್ವರ ಸಂಘವನ್ನು 2013-2014 ನೇ ಸಾಲಿನಲ್ಲಿ ಪ್ರಾರಂಭಿಸಿದಾಗ ಅವರ ಆಸೆಯು ಚಿಗುರೊಡೆಯಿತು. ಭಯ-ಹಿಂಜರಿಕೆಯಿಂದ ಸ್ವ ಉದ್ಯೋಗದಿಂದ ದೂರ ಉಳಿದಿದ್ದ ತೋಟಮ್ಮನವರಿಗೆ ಧೈರ್ಯವನ್ನು ತಂದಿದ್ದು ಧರ್ಮಸ್ಥಳದ ಜ್ಞಾನವಿಕಾಸ ಕಾರ್ಯಕ್ರಮ.

‘ಸಾನ್ವಿ ಜ್ಞಾನವಿಕಾಸದ ಕೇಂದ್ರ’ದ ಸದಸ್ಯೆಯಾದ ಇವರು ‘ಶ್ರೀ ಮಂಜುನಾಥ ರೊಟ್ಟಿ ಕೇಂದ್ರ’ ವನ್ನು ಪ್ರಾರಂಭಿಸಿದಾಗ ಇವರ ಧೈರ್ಯವನ್ನು ಪ್ರೇರೇಪಿಸಿದೆ, ಕೆಲವರು ಅವಮಾನ ಮಾಡಿದವರು ಉಂಟು. ಆದರೆ ತೋಟಮ್ಮ ಇದಕ್ಕೆ ಯಾವುದಕ್ಕೂ ಬಗ್ಗದೆ, ತಮ್ಮ ಸುತ್ತ ಮುತ್ತಲಿನ ಕುಟುಂಬದ ಗೃಹಿಣಿಯರಿಗೆ ಮನೆಯಲ್ಲಿ ಹದ ಮಾಡಿದ ರೊಟ್ಟಿಯ ಹಿಟ್ಟನ್ನು ದಿನಕ್ಕೆ ಒಬ್ಬರಿಗೆ 5-6 ಸೇರಿನಷ್ಟು ಕೊಟ್ಟು, ರೊಟ್ಟಿಯನ್ನು ತಯಾರಿಸಿ ಕೊಡಲು ಹೇಳುತ್ತಾರೆ. ಕೆಲಸದ ಬಿಡುವಿನ ವೇಳೆಯಲ್ಲಿ ಮಹಿಳೆಯರು ಸೇರಿಗೆ 25 ರೊಟ್ಟಿಗಳಂತೆ, ರೂ.50/-ಗಳನ್ನು ಹಿಂಪಡೆಯುತ್ತಾರೆ. ಒಂದು ದಿನಕ್ಕೆ ಒಟ್ಟು 5 ರಿಂದ 6 ಸೇರು ಹಿಟ್ಟು ಪಡೆದು ರೂ.250/- ರಿಂದ 300/-ಗಳ ವರೆಗೂ ಆದಾಯವನ್ನು ಪಡೆಯುತ್ತಿದ್ದಾರೆ. ಕೇವಲ 7ನೇ ತರಗತಿ ವಿದ್ಯಾರ್ಹತೆ ಹೊಂದಿದ ತೋಟವ್ಮ್ಮ ಸ್ವತಃ ಮಾರುಕಟ್ಟೆ ವ್ಯವಸ್ಥೆಯ ಜೊತೆಗೆ ಎಲ್ಲ ಸದಸ್ಯರ ರೊಟ್ಟಿಯ ವಿವರ, ದಿನದ ಕೂಲಿಯ, ಮಾರುಕಟ್ಟೆಯಿಂದ ಬರುವ ಲಾಭ ಎಲ್ಲವನ್ನು ವ್ಯವಸ್ಥಿತವಾಗಿ ಹಚ್ಚಿಕೊಂಡು ಯಾವುದೇ ಗೊಂದಲವಿಲ್ಲದೇ ಕುಟುಂಬವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಪತಿ ಮತ್ತು ಕೊನೆಯ ಮಗ ಈ ಉದ್ಯೋಗಕ್ಕೆ ತುಂಬು ಸಹಾಕಾರವನ್ನು ಇವರು ಪಡೆದಿದ್ದಾರೆ.

ಈ ಮೂಲಕ ಆರ್ಥಿಕ ಪರಿಸ್ಥಿತಿಯಿಂದ ನೊಂದ ಅದೆಷ್ಟೋ ಮಹಿಳೆಯರಿಗೆ ಉದ್ಯೋಗವಕಾಶವನ್ನು ನೀಡಿ ಕುಟುಂಬದಲ್ಲಿ ಮೂಲ ಸೌಕರ್ಯ ಉತ್ತಮ ಪಡಿಸುಕೊಳ್ಳುವಲ್ಲಿ ಸಹಾಯ ನೀಡಿದ್ದಾರೆ. ಅವರಿಗೂ ಕೂಡಾ ಬಿಸಿಲ ಬೇಗೆಯಲ್ಲಿ ಹೊಲದಲ್ಲಿ ದಿನಃಪೂರ್ತಿ ದುಡಿದರು ರೂ.150/- ಪಡೆಯುತ್ತಿದ್ದವರಿಗೆ ಕುಟುಂಬದ ಯೋಗ ಕ್ಷೇಮದೊಂದಿಗೆ ಮನೆಯಲ್ಲಿಯೇ ದುಡಿಯುವ ಮತ್ತು ಮನೆಗೆ ಒಚಿದು ನಾಲ್ಸಾರು ರೊಟ್ಟಿಯನ್ನು ಈ ಮೂಲಕ ಪಡೆಯುವ ಅವಕಾಶದಿಂದ ತುಂಬಾ ಸಂತೋಷ ಹೊಂದಿದ್ದಾರೆ.

ಧರ್ಮಸ್ಥಳದ ಕಿರು ಆರ್ಥಿಕ ವ್ಯವಹಾರದ ಮುಖೇನ ಸಣ್ಣ ಸಣ್ಣ ಸಂಘಗಳ ಸಾಲ ಮರುಪಾವತಿಯಿಂದ ಸ್ವಾವಲಂಭನೆಯ ಕನಸಿನಡೆಗೆ ಮುನ್ನಡೆಗೆ ದೈರ್ಯ ಹೊಂದಿರುವುದಾಗಿ ಇವರು ತಿಳಿಸುತ್ತಾರೆ. ಇಲ್ಲಿಯವರೆಗೂ ಸರಾಸರಿ ರೂ. 1.50 ಲಕ್ಷ ಸಾಲವನ್ನು ಈ ಉದ್ಯೋಗಕ್ಕೆ ಸಂಘದಲ್ಲಿ ಮಾಡಿದ್ದು, ಎಲ್ಲ ಸಾಲ ಮರುಪಾವತಿ ಮಾಡಿದ್ದು, ರೂ.50 ಸಾವಿರ ಮಾತ್ರ ಚಾಲ್ತಿ ಸಾಲ ಹೊಂದಿದ್ದು, ರೂ.600/-ವಾರದ ಕಂತಿನಲ್ಲಿ ಮರುಪಾವತಿ ಮಾಡುತ್ತಿದ್ದಾರೆ.

“ಮೊದಲು ನಾವು ಮನೆಯಲ್ಲಿ ಕುಳಿತು ಮನೆ ಕೆಲಸ ಮುಗಿಸಿ ನೆರೆ ಹೊರೆಯವರೊಟ್ಟಿಗೆ ಕಾಲಾಹರಣ ಮಾಡ್ತಿದ್ವಿ. ಮೊದ್ಲು ಗೊತ್ತಿದ್ದಂಗ ಖಾನವಳಿಗೆ ರೊಟ್ಟಿ ಅಗತ್ತ ಐತಿ ಎಚಿದು ಈ ಉದ್ಯೋಗ ಮಾಡಾಕ ಮನಸ್ಸ ಮಾಡಿದ್ವಿ. ಧರ್ಮಸ್ಥಳ ಸಂಸ್ಥೆಯಿಚಿದ ನಮಗೆ ತುಂಬು ಸಹಕಾರ ಸಿಕ್ಕೈತಿ”
“ನಾವು ತಯಾರ ಮಾಡೋ ರೊಟ್ಟಿ ಹಿಟ್ಟಿನಲ್ಲಿ ಅಕ್ಕಿ ಹಿಟ್ಟು ಸೇರಿಸಲ್ಲ. ಹಿಂಗಾಗಿ ಎಲ್ರೂ ನಮ್ಮ ರೊಟ್ಟಿ ತೊಗೊಳ್ಳಾಕ ಬಾಳ ಇಷ್ಟ ಪಡ್ತಾರ್ರೀ. ” ಎನ್ನುವರು ಹೆವ್ಮ್ಮೆಯಿಚಿದ ಶ್ರೀಮತಿ ತೋಟಮ್ಮ.

ಸುರಪುರ, ರಾಯಚೂರು, ಶಕ್ತಿನಗರ ಮತ್ತು ಸ್ಥಳೀಯವಾಗಿ ಮತ್ತು ವಿವಿಧಡೆಯಿಂದ ನಿರಂತರ ರೊಟ್ಟಿಯ ಬೇಡಿಕೆ ಶ್ರೀ ಮಂಜುನಾಥ ರೊಟ್ಟಿ ಕೇಂದ್ರಕ್ಕೆ ದಕ್ಕಿದೆ. ಹತ್ತಿರದ ಲಿಂಗಸೂರಿನ ಹಲವು ಖಾನಾವಳಿಗೆ ನಿರಂತರ ದಿನಕ್ಕೆ 400 ರೊಟ್ಟಿಗಳನ್ನು ವಿತರಿಸುತ್ತಿರುವ ತೋಟಮ್ಮನವರು ಹಾಗೇಯೇ ಮಧ್ಯದಲ್ಲಿ ಬರುವ ಬೇಡಿಕೆಗಳಾದ ಮದುವೆ ಮತ್ತು ಇತರೆ ಕಾರ್ಯಕ್ರಮಗಳ ಆರ್ಡರ್‍ನ್ನು ಸರಳವಾಗಿ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಿಂಗಳಿಗೆ 10000 ರಿಂದ 15000 ರೊಟ್ಟಿಗಳ ಬೇಡಿಕೆಯನ್ನು ನಿರರ್ಗಳವಾಗಿ ನಿರ್ವಹಿಸುತ್ತಿರುವುದು ಇವರ ಉದ್ಯಮಕ್ಕೆ ಸಾಕ್ಷಿ.

ರೊಟ್ಟಿಯ ಆದಾಯದಿಂದ 3 ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿರುವುದಲ್ಲದೇ ಅವರ ಉದ್ಯೋಗಕ್ಕೆ, ಮನೆ ಕಟ್ಟುವುದಕ್ಕೆ, ಅಷ್ಟೇ ಅಲ್ಲ ಪತಿಯ ಅನಾರೋಗ್ಯದ ಚಿಕಿತ್ಸೆಗೂ “ಧರ್ಮಸ್ಥಳ ಸಂಘದಲ್ಲಿ ಪಡೆದ ಸಾಲದಿಂದ ಸಾಧ್ಯವಾಯಿತು” ಎನ್ನುವ ಹೆಮ್ಮೆ ಇವರಿಗಿದೆ. ಬಸ್ಸಿನ ವ್ಯವಸ್ಥೆ ವಿರಳ ಇರುವ ಇವರ ಗ್ರಾಮಕ್ಕೆ ಬಾಡಿಗೆ ಕಾರು ಚಾಲನೆ ಉದ್ಯೋಗವನ್ನು ಮಗನಿಗೆ ಮಗನಿಗೆ ಇದೇ ಅದಾಯದೊಂದಿಗೆ ಮಾಡಲು ಗುರಿ ಹಾಕಿಕೊಂಡಿದ್ದಾರೆ.

‘ಯಾರಲ್ಲಿ ಆತ್ಮವಿಶ್ವಾಸ ಇರುತ್ತದೆಯೋ ಅವರಲ್ಲಿ ಧೈರ್ಯ ಬರಲು ಸಾಧ್ಯ. ಯಾರು ತಿಳುವಳಿಕೆ ಮಟ್ಟ ಹೆಚ್ಚಿಸಿಕೊಳ್ಳುವಲ್ಲಿ ಪ್ರಯತ್ನಿಸುವರೋ ಅವರು ನಿರಂತರ ಗುರಿಯತ್ತ ಸಾಗಲು ಸಾಧ್ಯ.’ ಓದು ಆತ್ಮವಿಶ್ವಾಸಕ್ಕೆ ಬಲವಾದರೂ ವ್ಯವಹಾರದ ಜ್ಞಾನದ ಅದಕ್ಕೆ ಇನ್ನೂ ಬಲವನ್ನು ತರುವುದರೊಂದಿಗೆ ಹೆಚ್ಚು ಆತ್ಮವಿಶ್ವಾಸ ಮೂಢಿಸುವ ಜೊತೆಜೊತೆಗೆ ಕುಟುಂಬದ ಸಂಪೂರ್ಣ ಪ್ರಗತಿಗೆ ಸಾಧ್ಯ ಎಂದು ತೋರಿಸಿ ಕೊಟ್ಟವರು ಶ್ರೀಮತಿ ತೋಟಮ್ಮನವರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆಯ ಈ ಮಾಹೆಯಲ್ಲಿ ಸಬಲೀಕರಣದ ಹೆಜ್ಜೆ ಹಾಕುತ್ತಿರುವ ತೋಟಮ್ಮನವರಂತಹವರು ಅದೆಷ್ಟೋ ಜನರು ನಮ್ಮ ನಿಮ್ಮ ಮಧ್ಯದಲ್ಲಿ ಇರುವರು. ಪರಮ ಪೂಜ್ಯ ಡಾ.ವಿರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಮಾತ್ರೋಶ್ರೀ ಹೇಮಾವತಿ ಹೆಗ್ಗಡೆಯವರ ಆಶಯದ ಜ್ಞಾನವಿಕಾಸ ಕಾರ್ಯಕ್ರಮದ ಮುಖೇನ ಇಡೀ ಕರ್ನಾಟಕದಾದ್ಯಂತ ಎಲೆಯ ಮರೆಯ ಕಾಯಿಯಂತೆ ಸಬಲೀಕರಣ ಹೆಜ್ಜೆಯನ್ನು ಹಾಕುತ್ತಿರುವುದು ನಿಜಕ್ಕೂ ಶ್ಲಾಘನೀಯ. (ದೂ:9482318072).

Leave a Reply

Your email address will not be published. Required fields are marked *