EventsNewsTrainingWomen Empowerment

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ಫೆಬ್ರವರಿ-2018

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉಚಿತ ಟ್ಯೂಶನ್ ತರಗತಿ

ಧಾರವಾಡ ತಾಲೂಕು ಯೋಜನಾ ವ್ಯಾಪ್ತಿಯಲ್ಲಿ ಮಹಿಳಾ ಜ್ಷಾನವಿಕಾಸ ಕಾರ್ಯಕ್ರಮದಡಿ ಕಲಿಕೆಯಲ್ಲಿ ಹಿಂದುಳಿದ 20 ಬಡ ಮಕ್ಕಳಿಗೆ ಉಚಿತ ಟ್ಯೂಶನ್ ತರಗತಿಯನ್ನು ಕಳೆದ ಮೂರು ತಿಂಗಳಿನಿಂದ ನಡೆಸಿಕೊಡುತ್ತಿದ್ದು ಟ್ಯೂಶನ್ ತರಗತಿಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು. ಮನೆಯಲ್ಲಿ ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿಕೊಳ್ಳುವುದರ ಕುರಿತು ಅರಿವು ಮೂಡಿಸಲಾಯಿತು. ಉಚಿತ ಟ್ಯೂಶನ್ ತರಗತಿಯಲ್ಲಿ ಭಾಗವಹಿಸಿದ ಮಕ್ಕಳಿಗೆ ಯೋಜನೆಯ ವತಿಯಿಂದ ಉಚಿತ ಪುಷ್ಠಿ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.


ಸಿರಿಧಾನ್ಯಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಜ್ಞಾನವಿಕಾಸ ಕೇಂದ್ರದಲ್ಲಿ ಸಿರಿಧಾನ್ಯದ ಬಗ್ಗೆ ಮಾಹಿತಿ ಮತ್ತು ಆಹಾರ ತಯಾರಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿರಿ ಧಾನ್ಯದ ಬಗ್ಗೆ ಮಾಹಿತಿ ಮತ್ತು ಸಿರಿ ಧಾನ್ಯಗಳಾದ ಊದಲು ಮತ್ತು ಬರಗಿನಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ಊದಲಿನಿಂದ ದೋಸೆ ಹಾಗೂ ಬರಗಿನಿಂದ ಪಾಯಸವನ್ನು ತಯಾರಿಸಿ ಪ್ರಾತ್ಯಕ್ಷಿಕೆಯನ್ನು ಮಾಡಿ ಸಿರಿಧಾನ್ಯಗಳ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 80 ಮಂದಿ ಸದಸ್ಯರು ಪಾಲ್ಗೊಂಡಿದ್ದರು.


ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಮತ್ತು ಸಿರಿಧಾನ್ಯ ಆಹಾರ ಮೇಳ ಕಾರ್ಯಕ್ರಮ

ಜಿಲ್ಲಾ ಮಟ್ಟದ ಮಹಿಳಾ ಸಮಾವೇಶವನ್ನು ಕೊಪ್ಪಳ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಡೆಸಲಾಗಿದ್ದು, ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ವಿಚಾರಗೋಷ್ಠಿ, ಸ್ವ ಉದ್ಯೋಗ ಮಹಿಳೆಯರ ಸ್ಟಾಲ್, ವಿವಿಧ ಮಾರ್ಕೆಟಿಂಗ್ ಸ್ಟಾಲ್‍ಗಳು, ಜಾಗೃತಿ ಮೂಡಿಸುವ ವಿವಿಧ ಇಲಾಖೆ ಮತ್ತು ಯೋಜನೆಯ ವಿವಿಧ ಕಾರ್ಯಕ್ರಮಗಳ ಸ್ಟಾಲ್‍ಗಳು, ಮಹಿಳೆಯರಿಗೆ ಪ್ರೇರಣೆ ನೀಡುವ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು, ಸಾಧನೆ ಮಾಡಿದ ಮಹಿಳಾ ಸೇವಾಪ್ರತಿನಿಧಿ, ಅತ್ಯುತ್ತಮ ಸ್ವ ಸಹಾಯ ಸಂಘಗಳ ಗುರುತಿಸುವಿಕೆ, ಸಾಧನೆ ಮಹಿಳೆಯರನ್ನು ಗುರಿತಿಸಿ ಸನ್ಮಾನ ಮಾಡುವುದರ ಮೂಲಕ ಇತರ ಮಹಿಳೆಯರಿಗೆ ಪ್ರೇರಣೆ, ಅಲ್ಲದೆ ಕಸ ವಿಲೇವಾರಿ ಬೀದಿ ನಾಟಕ ಪ್ರದರ್ಶನದಿಂದ ಮಹಿಳೆಯರಿಗೆ ಉತ್ತಮ ಮಾಹಿತಿ ಮತ್ತು ಜಾಗೃತಿ ಮತ್ತು ಸಿರಿಧಾನ್ಯಗಳ ಆಹಾರ ಉತ್ಪನ್ನಗಳ ಬಳಕೆಯ ಜಾಗೃತಿಯೊಂದಿಗೆ ಪ್ರಾತ್ಯಕ್ಷಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಒಳಪಡಿಸಿ ಯಶಸ್ವಿಯಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.


                                                                ಜ್ಞಾನವಿಕಾಸ ಕೇಂದ್ರದ ವತಿಯಿಂದ ಶೃದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮ

ಕೋಲಾರ ಯೋಜನಾ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕೇಂದ್ರದ ಮುಖಾಂತರ ಸ್ಥಳೀಯ ದೇವಾಲಯವನ್ನು ಸ್ವಚ್ಛತೆ ಮಾಡಿ ಸುತ್ತಮುತ್ತಲಿನ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಕೇಂದ್ರದ 40 ಮಂದಿ ಸದಸ್ಯರು ಪಾಲ್ಗೊಂಡು ಬಸವೇಶ್ವರ ದೇವಸ್ಥಾನದ ಆವರಣ ಕೆಂದಟ್ಟಿ ಸುತ್ತಮುತ್ತಲೂ ಸ್ವಚ್ಛಗೊಳಿಸುವುದರ ಮೂಲಕ ಶ್ರದ್ದಾ ಕೇಂದ್ರದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.


 

Leave a Reply

Your email address will not be published. Required fields are marked *