NewsTrainingWomen Empowerment

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ಫೆಬ್ರವರಿ-2018

ಪರಿಸರ ಸಂರಕ್ಷಣೆ ಮತ್ತು ನೀರಿನ ಸದ್ಬಳಕೆ ಕುರಿತು ಬೀದಿ ನಾಟಕ ಕಾರ್ಯಕ್ರಮ

ಬಂಗಾರಪೇಟೆ ತಾಲೂಕು ಯೋಜನಾ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರದಲ್ಲಿ ಪರಿಸರ ಸಂರಕ್ಷಣೆ ಮತ್ತು ನೀರಿನ ಸದ್ಬಳಕೆ ಕುರಿತು ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಕಲ ಜೀವ ರಾಶಿಗಳು ಬದುಕಲು ಗಾಳಿ, ಬೆಳಕು, ನೀರು ಅತ್ಯಗತ್ಯ ಈ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಪರಿಸರ ಸಂರಕ್ಷಣೆಯಾದಲ್ಲಿ ಮಾತ್ರ ನೆಮ್ಮದಿಯ ಜೀವನ ಸಾಗಿಸಬಹುದು ಮತ್ತು ಮುಂದಿನ ಪೀಳಿಗೆಗೂ ರಕ್ಷಣೆಯನ್ನು ನೀಡಬಹುದಾಗಿದೆ ಎಂದು ಬೀದಿನಾಟಕದ ಮೂಲಕ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 100 ಸದಸ್ಯರು ಪಾಲ್ಗೊಂಡಿದ್ದರು.


ಸೃಜನಶೀಲ ಕಾರ್ಯಕ್ರಮದಡಿಯಲ್ಲಿ-135 ಕುಟುಂಬಕ್ಕೆ ಶೌಚಾಲಯ ರಚನೆ ಪೂರ್ಣಗೊಳಿಸಿ ಸಮಾರೋಪ ಕಾರ್ಯಕ್ರಮ

ಯಲಬುರ್ಗ ತಾಲೂಕಿನ ಬಂಡಿಹಾಳ ಕಾರ್ಯಕ್ಚೇತ್ರದಲ್ಲಿ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಸಂಘದ ಹಾಗೂ ಜ್ಞಾನವಿಕಾಸ ಕೇಂದ್ರದ ಒಟ್ಟು 135 ಕುಟುಂಬದಲ್ಲಿ ಶೌಚಾಲಯ ರಚನೆ ಗುರಿ ಪಡೆಯಲಾಗಿದ್ದು ಒಟ್ಟು 135 ಕುಟುಂಬಗಳಲ್ಲಿ ಶೌಚಾಲಯ ರಚನೆಯಾಗಿ ಬಳಕೆಯನ್ನು ಮಾಡುತ್ತಿದ್ದಾರೆ. ಊರಿನ ಗಣ್ಯರ & ಗ್ರಾಮ ಪಂಚಾಯತ್ ಅಧ್ಯಕ್ಷರು & ಸದಸ್ಯರ ಸಹಕಾರದಿಂದ ಎಲ್ಲಾ ಕುಟುಂಬಗಳಲ್ಲಿ ಶೌಚಾಲಯ ರಚನೆ ಪೂರ್ಣಗೊಂಡಿರುತ್ತದೆ. ಶೌಚಾಲಯ ಬಳಕೆಯ ಬಗ್ಗೆ ಮನೆಬೇಟಿ ಮೂಲಕ ಅರಿವು ಮೂಡಿಸಲಾಗಿದೆ. ಚಿಕ್ಕಮಕ್ಕಳಿಗೂ ಶೌಚಾಲಯ ಬಳಸುವಂತೆ ಪ್ರೇರೇಪಿಸಲಾಗಿದೆ. ಸಂಸ್ಕøತಿ ಕಲಾ ತಂಡದವರಿಂದ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಗಿದೆ. ಶೌಚಾಲಯ ಬಳಕೆ ಮಾಡದಿದ್ದಲ್ಲಿ ಏನೆಲ್ಲಾ ರೋಗಗಳಿಗೆ ತುತ್ತಾಗಬೇಕಾಗುತ್ತದೆ & ಶೌಚಾಲಯ ಬಳಕೆಯ ಪ್ರಯೋಜನಗಳ ಬಗ್ಗೆ ವಿಚಾರ ವಿನಿಮಯದೊಂದಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ಒದಗಿಸಲಾಯಿತು. ಸಮಾರೋಪದಲ್ಲಿ 135 ಕುಟುಂಬಗಳಿಗೆ ಉಚಿತವಾಗಿ ಶೌಚಾಲಯಕ್ಕೆ ಬಕೆಟ್ & ಜಗ್ಗ್ ವಿತರಣೆ ಮಾಡಲಾಯಿತು.


ಅಧ್ಯಯನ ಪ್ರವಾಸದಲ್ಲಿ ವಿವಿಧ ಸರಕಾರಿ ಇಲಾಖೆಗಳ ಭೇಟಿ ಮತ್ತು ಇಲಾಖೆ ಅಧಿಕಾರಗಳಿಂದ ಮಾಹಿತಿ

ಹೊನ್ನಾಳಿ ಯೋಜನಾ ಕಛೇರಿ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು ಮುಖ್ಯವಾಗಿ ಮಹಿಳೆಯರಿಗಿರುವ ವಿಶೇಷ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಗೆಂದು ದಾವಣಗೆರೆಯಲ್ಲಿರುವ ವಿವಿಧ ಇಲಾಖೆಗಳಾದ ಪೋಲಿಸ್ ಠಾಣೆ, ಜಿಲ್ಲಾ ನ್ಯಾಯಾಲಯ, ಮಹಿಳಾ ಸಾಂತ್ವನ ಕೇಂದ್ರ, ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಇಲಾಖೆಗಳಿಂದ ವಿಶೇಷ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ನೀಡಲಾಯಿತು.


ಸೋಪು, ಸೋಫ್ ಆಯಿಲ್ ಮತ್ತು ಫಿನಾಯಿಲ್ ತಯಾರಿಕಾ ತರಬೇತಿ ಕಾರ್ಯಕ್ರಮ

ಉಡುಪಿ ತಾಲೂಕಿನ ಜ್ಞಾನವಿಕಾಸ ಕೇಂದ್ರದಲ್ಲ್ಲಿ ಸ್ವ-ಉದ್ಯೋಗ ತರಬೇತಿ ನೀಡಲಾಯಿತು. ಸದಸ್ಯರಿಗೆ ಮನೆಯಲ್ಲೇ ಸರಳವಾಗಿ ತಯಾರಿಸಲು ಯಾವುದೇ ಅಡ್ಡಪರಿಣಾಮವಿಲ್ಲದಂತಹ ನೈಸರ್ಗಿಕವಾದ ಸಾಬೂನು ಮತ್ತು ಫೆನಾಯಿಲ್, ಸೋಫ್ ಆಯಿಲ್ ತಯಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ತರಬೇತಿ ನೀಡಲಾಯಿತು. ಸದಸ್ಯರಿಗೆÉ ಮನೆಗೆ ಬೇಕಾದ ಫಿನೈಲ್ ಮತ್ತು ಸೋಪ್ ಆಯಿಲ್ ಮನೆಯಲ್ಲಿಯೇ ತಯಾರಿಸುವುದರಿಂದ ಹಣದ ಉಳಿತಾಯ ಆಗುತ್ತದೆ ಹಾಗೂ ಸ್ವ ಉದ್ಯೋಗ ಮಾಡುವರೇ ಅವಕಾಶ ಸಿಕ್ಕಿದಂತಾಗಿದೆ.

Leave a Reply

Your email address will not be published. Required fields are marked *