NewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ವ್ಯಾಪಾರ ಉದ್ದಿಮೆ’ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ತತ್ಸಂಬಂಧ ದಿನಾಂಕ: 12.03.2018 ರಿಂದ 15.03.2018 ರವರೆಗೆ ‘ವ್ಯಾಪಾರ ಉದ್ದಿಮೆ’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರು ಇಲ್ಲಿ ಹಮ್ಮಿಕೊಳ್ಳಲಾಗಿತ್ತು .

ವ್ಯಾಪಾರ ಉದ್ದಿಮೆ ತರಬೇತಿಯ ಎರಡನೇ ತಂಡವನ್ನು ಶ್ರೀಯುತ ಸೋಮನಾಥ್.ಕೆ, ಆಡಳಿತ ಯೋಜನಾಧಿಕಾರಿಗಳು, ಪ್ರಾದೇಶಿಕ ಕಛೇರಿ, ಮೈಸೂರು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮಗಳು ಇತರೆ ಸಂಸ್ಥೆಗಳಿಗೆ ಮಾದರಿಯಾಗಿದ್ದು ಇಲ್ಲಿನ ಪ್ರತಿಯೊಂದು ಕಾರ್ಯಕ್ರಮವನ್ನು ಪೂಜ್ಯರು ಹಲವಾರು ಆಯಾಮಗಳಲ್ಲಿ ಅವಲೋಕಿಸಿ ಜಾರಿಗೊಳಿಸಲು ಸಮ್ಮತ್ತಿಸುತ್ತಾರೆ. ಆದ್ದರಿಂದ ಹಲವಾರು ಒತ್ತಡಗಳಿಂದ ಬಂದಿರುವ ತಾವೆಲ್ಲರೂ ಅವಲೋಕಿಸಿ ತರಬೇತಿಯನ್ನು ಅರಗಿಸಿಕೊಂಡು ಇಲ್ಲಿಂದ ಧೃಢ ನಿರ್ಧಾರಗಳನ್ನು ಮಾಡಿ ಸ್ವ-ಉದ್ಯೋಗವನ್ನು ಪ್ರಾರಂಭಿಸಬೇಕು ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಯೋಜನೆಯು ಬೆನ್ನುಲುಬಾಗಿ ಕೆಲಸವನ್ನು ಮಾಡಲಿದೆ. ಗೊಂದಲದಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳದೆ ನಿಮ್ಮ ದೇಹ ಮತ್ತು ಮನಸ್ಸನ್ನು ಒಗ್ಗೂಡಿಸಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿ ಉದ್ಯಮಿಗಳಾಗಬೇಕು ಎಂದು ಒಂದು ಸಣ್ಣ ಕಥೆಯ ಉದಾಹರಣೆಯ ಮೂಲಕ ಹಾರೈಸಿದರು.
ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಸದ್ಯದ ಪ್ರಮುಖ ಸಮಸ್ಯೆಯಾದ “ದುಡಿಯುವ ಕೈ ಒಂದು, ತಿನ್ನುವ ಕೈಗಳು ಹಲವಾರು” ಎಂಬ ಸ್ಥಿತಿ ಇಂದು ಎಲ್ಲೆಡೆ ಇದ್ದು, ಈ ಕೊರತೆಯನ್ನು ನೀಗಿಸಲು ವಿದ್ಯಾಭ್ಯಾಸ ಮಾಡಿದ/ಮಾಡದ ಯುವಕ–ಯುವತಿಯರನ್ನು ಒಗ್ಗೂಡಿಸಿ ಪರಿಸ್ಥಿತಿಯನ್ನು ನಿವಾರಿಸಲು ಸ್ವ-ಉದ್ಯೋಗ ವರ್ಷದಡಿ ಜಂಟಿ ಬಾಧ್ಯತಾ ಸಂಘಗಳನ್ನು ಸ್ಥಾಪಿಸಿ ಸಂಸ್ಥೆಯು ಯೋಜನೆಯ ನಾಲ್ಕು ತರಬೇತಿ ಸಂಸ್ಥೆಗಳ ಮೂಲಕ ಕೌಶಲ್ಯಾಭಿವೃದ್ಧಿಯನ್ನು ನೀಡಿ ಅನೇಕ ಯುವಕ-ಯುವತಿಯರ ಬದುಕನ್ನು ಕಟ್ಟಿಕೊಳ್ಳಲು ಗ್ರಾಮಾಭಿವೃದ್ಧಿ ಯೋಜನೆ ಕೆಲಸವನ್ನು ನಿರ್ವಹಿಸುತ್ತಿದೆ. ಒಂದು ಧಾರ್ಮಿಕ ಸಂಸ್ಥೆ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದು, ಸರ್ವಧರ್ಮ ಸಹಿಷ್ಣುತೆ, ಜಾತ್ಯತೀತವಾಗಿ, ಸಮಾಜವನ್ನು ಅಭಿವೃದ್ಧಿಯಡೆಯಲ್ಲಿ ನಡೆಸುವಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಬಡವನಾಗಿ ಹುಟ್ಟುವುದು ಶಾಪಾವಲ್ಲ, ಬಡವನಾಗಿ ಸಾಯುವುದು ಶಾಪ ಎಂಬ ನುಡಿಯನ್ನು ಅಳವಡಿಸಿಕೊಂಡು ಎಲ್ಲರೂ ಮುನ್ನುಗ್ಗುವ ಅವಶ್ಯಕತೆ ಇದೆ. ಆದ್ದರಿಂದ ಈ 4 ದಿನಗಳ ತರಬೇತಿಯಲ್ಲಿ ವ್ಯಾಪಾರ ಮಾಡುವಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಕುರಿತು ಮಾಹಿತಿಯನ್ನು ನೀಡಲಿದ್ದೇವೆ ಎಂದು ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್ ಉಪಸ್ಥಿತರಿದ್ದರು.
4 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 35 ಮಂದಿ ಭಾಗವಹಿಸುತ್ತಿದ್ದು, ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *