NewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಹೈನುಗಾರಿಕೆ’ ತರಬೇತಿ

ಮೈಸೂರು ಮಾರ್ಚ್ 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ತತ್ಸಂಬಂಧ ದಿನಾಂಕ: 20.03.2018 ರಿಂದ 24.03.2018ರವರೆಗೆ ‘ಹೈನುಗಾರಿಕೆ’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಹೈನುಗಾರಿಕೆ ತರಬೇತಿಯ ಎಂಟನೇ ತಂಡವನ್ನು ಶ್ರೀಯುತ ಸೋಮನಾಥ್, ಆಡಳಿತ ಯೋಜನಾಧಿಕಾರಿಗಳು, ಮೈಸೂರು ಪ್ರಾದೇಶಿಕ ಕಛೇರಿ, ಮೈಸೂರು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಧ್ಯೇಯಗೀತೆಯನ್ನು ರಚಿಸಿದ ಮಾತೃಶ್ರೀ ಹೇಮಾವತಿ ಅಮ್ಮನವರು ಜಾತ್ಯಾತೀತ ಮನಸ್ಸಿನಿಂದ ಎಲ್ಲರೂ ಒಗ್ಗೂಡಿ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಗಟ್ಟಿಯಾಗಿ ನಿಂತು, ಯಾವುದಕ್ಕೂ ವಿಚಲಿತರಾಗದೆ ಮುನ್ನಡೆಸುವ ಶಕ್ತಿಯನ್ನ ಕಂಡುಕೊಳ್ಳಬೇಕೆಂಬುದು ಅಮ್ಮನವರ ಆಶಯ. ಈ ಧ್ಯೇಯಗೀತೆಯನ್ನು ಎಲ್ಲರೂ ಕಲಿತು ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಾಗಿ ಕರೆ ಕೊಟ್ಟರು. ತರಬೇತಿಗೆ ಸಮಸ್ಥೆಯ ಅಧಿಕಾರಿಗಳ ಒತ್ತಾಯದಿಂದ ಅಥವಾ ಒತ್ತಡದಿಂದ ತರಬೇತಿಗೆ ಹಾಜರಾಗಿದ್ದರೂ ಪ್ರತಿಯೋರ್ವರಿಗೂ ತರಬೇತಿ ಎನ್ನುವುದು ಅದೃಷ್ಠವೇ ಸರಿ. ಈ ತರಬೇತಿಗಳೆಲ್ಲವೂ ಪೂಜ್ಯಾ ಡಾ|| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿದ್ದು, ಅವರ ಶಿಸ್ತು ಬದ್ಧ, ಆದರ್ಶಗಳು ಎಲ್ಲರಿಗೂ ಮಾದರಿಯಾಗಿದ್ದು ಈ ತರಬೇತಿ, ಹಾಗೂ ಯೋಜನೆಯ ಆಶಯವನ್ನು ಅರಿತು ‘ಸ್ವ-ಉದ್ಯೋಗಕ್ಕೆ’ ಪೂರಕ ಮಾಹಿತಿಯನ್ನು ಪಡೆದು ಯಶಸ್ವಿ ಉದ್ಯೋಗಿಗಳಾಗಬೇಕೆಂದು ಶುಭಕೋರಿದರು.
ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ನಾವೆಲ್ಲರೂ ಬದುಕನ್ನು ಕಟ್ಟಿಕೊಳ್ಳಲು ತಮ್ಮ ತಮ್ಮ ವಿದ್ಯಾರ್ಹತೆ ಇಲ್ಲವೇ ಸಾಮಥ್ರ್ಯದ ಆಧಾರದ ಮೇರೆಗೆ ಹಲವಾರು ಉದ್ಯೋಗಗಳನ್ನರಸಿ ಹೋಗುವುದುಂಟು. ಕೆಲವರಿಗೆ ಉದ್ಯೋಗ ಲಭಿಸಿದರೆ ಇನ್ನು ಕೆಲವರಿಗೆ ನಿರಾಸೆಯೇ ಸರಿ. ಪೂಜ್ಯರ ಮಾತಿನಂತೆ ಮೂರು ವರುಷ ಪದವಿ ವ್ಯಾಸಾಂಗ ಮಾಡಿ ಇತರರ ಲೆಕ್ಕವನ್ನು ಬರೆಯುವ ಬದಲು ತನ್ನ ಲೆಕ್ಕವನ್ನು ತಾನೇ ಬರೆಯುವುದು ಲೇಸು ಎಂಬ ಮಾತಿನಂತೆ ಇತರರ ಕೈಕೆಳಗೆ ಕೆಲಸ ಮಾಡಲು ಹಾತೊರೆಯುವ ಬದಲು ಪ್ರಸ್ತುತ ವಾಸ್ತವತೆಯನ್ನು ಅರಿತು ಹಲವಾರು ಅವಕಾಶಗಳೊಂಡ “ಸ್ವ-ಉದ್ಯೋಗ”ವನ್ನು ಕಂಡುಕೊಂಡು ಸಮಾಜದಲ್ಲಿ ನಿರುದ್ಯೋಗವನ್ನು ಹೋಗಲಾಡಿಸುವಲ್ಲಿ ಕೈಜೋಡಿಸುವುದೇ ಲೇಸು ಎಂದು ಹೇಳುವುದರ ಮೂಲಕ “ಹೈನುಗಾರಿಕೆ” ತರಬೇತಿಯ ವಿಶೇಷತೆ ಹಾಗೂ ತರಬೇತಿಯ ರೂಪುರೇಷೆಗಳನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್ ಉಪಸ್ಥಿತರಿದ್ದರು.
5 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 56 ಮಂದಿ ಭಾಗವಹಿಸುತ್ತಿದ್ದು, ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿರುತ್ತದೆ.

Leave a Reply

Your email address will not be published. Required fields are marked *