success storyTrainingWomen Empowerment

‘ಬಾಲ್ಯದ ಕಲಿಕೆ ಬದಲಾಯಿಸ ಬಲ್ಲದು ತರುತ ಗಳಿಕೆ’

‘ಕಲಿಕೆ’ಯ ಮಹತ್ವ ಕಲಿಕೆಯ ವಂಚಿತರಿಗೆ ಗೊತ್ತು. ಅದರಲ್ಲೂ ಬಡತನದ ಬೇಗೆಯಿಂದ ನೊಂದು ಸಾಕಷ್ಟು ಕಷ್ಟ ಅನುಭವಿಸಿದ ಅದೆಷ್ಟೋ ಜೀವಗಳು ನಮ್ಮ ಸುತ್ತ ಮುತ್ತಲಿದ್ದಾರೆ. ಆದರೆ ಇದರಿಂದ ಹೊರಬರುವಲ್ಲಿ ಅವಕಾಶವನ್ನು ಹುಡುಕಿ ಕಲ್ಪಿಸಿಕೊಳ್ಳುವರ ಸಂಖ್ಯೆ ಮಾತ್ರ ವಿರಳ ಎನ್ನಬಹುದು. ಆದರೆ ಬಡತನದ ನೋವಿನಲ್ಲಿ ತಂದೆ ತಾಯಿಯ ಪ್ರೀತಿ ವಾತ್ಸಲ್ಯದಿಂದಲೂ ವಂಚಿತರಾಗಿ ನೊಂದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ತೊಡಗಿಸಿಕೊಂಡಿರುವರು ನಾಗಮಂಡಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ನಿವಾಸಿ ಶ್ರೀಮತಿ ಗಾಯಿತ್ರಿ. ಓದಿದ್ದು ಕೇವಲ 7 ನೇ ವರ್ಗ ಆದರೆ ಚಿಂತನೆ ಇವರ ಕಲಿಕೆಗೂ ಎತ್ತರ ಎನ್ನಬಹುದು.
“ಬೇರೆಯವರು ಮಕ್ಕಳು ಇಂಜನಿಯರಿಂಗ್ ಓದಿಸುವುದನ್ನು ನೋಡಿ ಆಶ್ಚರ್ಯ ಪಡೆಯುತ್ತಿದ್ದೆ ಆದರೆ ನಾನೇ ಮುಂದೊಂದು ದಿನಾ ನನ್ನ ಮಗಳಿಗೆ ಇಂಜನಿಯರ್ ಓದಿಸಬಹುದು ಎನ್ನುವ ಕಲ್ಪನೆ ನನಗೆ 6 ವರ್ಷದ ಹಿಂದೆ ಇರಲಿಲ್ಲ.” – ಗಾಯಿತ್ರಿ.

ಕೌಟುಂಬಿಕ ಆರ್ಥಿಕ ಸ್ಥಿತಿ:
ಸುಮಾರು 45 ವರ್ಷ ಪ್ರಾಯದ ಗಾಯಿತ್ರಿಯವರು ಕ್ರಿಯಾಶೀಲತೆಯುಳ್ಳವರು. ಸಣ್ಣ ಪ್ರಾಯದಲ್ಲಿಯೇ ಅಂದರೆ 12ನೇ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದು ಕೊಂಡ ತಬ್ಬಲಿ ಎನ್ನಬಹುದು. ಮೊದಲೇ ತಂದೆಯನ್ನು ಕಳೆದುಕೊಂಡ ಗಾಯಿತ್ರಿಯವರಿಗೆ ಕ್ಯಾನ್ಸರ ಭಾದೆಯಿಂದ ತಾಯಿಯನ್ನು ಕಳೆದು ಕೊಳ್ಳಬೇಕಾಯಿತು. ಬಾಡಿಗೆ ಮನೆ, ಆದಾಯವಿಲ್ಲದೇ ಇವರು ಕಷ್ಟಪಡುತ್ತಿರುವಾಗ ಅಣ್ಣನಿಗೆ ಕೇವಲ 16 ವರ್ಷ ಪ್ರಾಯ. ಮತ್ತು ಗಾಯಿತ್ರಿಯವರಿಗೆ 12 ನೇ ವರ್ಷ ಮತ್ತು ತಂಗಿಗೆ 9 ವರ್ಷ. ಮಂಡಕ್ಕಿಪುರಿ ತಿಂದು ನೀರು ಕುಡಿದು ನೀಗಿಸಿಕೊಂಡಿರುವ ಕಳೆದ ಅದೆಷ್ಟೋ ದಿನಗಳು ಇವರ ಪಾಲಿಗೆ ಇನ್ನೂ ಹಚ್ಚು ಹಸಿರಾಗಿ ಉಳಿದಿಹುದು. ಅಂಗನವಾಡಿ ಆಯಾ ಕೆಲಸದಲ್ಲಿ ಮರಣ ಕಾಲದಲ್ಲಿ ತಾಯಿ ಇದ್ದುದರಿಂದ ಅನುಕಂಪದ ಆಧಾರದಲ್ಲಿ ಅಣ್ಣನಿಗೆ ಬಿಲ್ ಕಲೆಕ್ಷನ್ ಹುದ್ದೆಯು ಸಿಕ್ಕಿರುವುದು ಜೀವನದಲ್ಲಿ ಮುಳುಗವನಿಗೆ ಹುಲ್ಲುಕಡ್ಡಿ ಹಿಡಿದಂತಾಯಿತು. ಸಣ್ಣ ವಯಸ್ಸಿನಲ್ಲಿಯೇ ಅಣ್ಣ ತಂಗಿಯರ ಜವಾಬ್ದಾರಿಯನ್ನು ತೆಗೆದುಕೊಂಡರು ಆದರೆ ಇವರು ತಮ್ಮ ಓದಿಗೆ ಪೂರ್ಣವಿರಾಮ ನೀಡುವ ಅನಿವಾರ್ಯತೆಯು ಪಾಲಿಗೆ ಬಂದಿತ್ತು.

ಆದಾಯದ ಚಿಂತನೆಯಿಂದ ಅಭಿವೃದ್ಧಿಯತ್ತ:
ಓದಿಲ್ಲದಿದ್ದರೇನಂತೆ ಅಲ್ಪ ವಿದ್ಯೆಯಲ್ಲಿಯೇ ಇವರು ಒಂದು ಸಹಕಾರಿ ಬ್ಯಾಂಕಿನಲ್ಲಿ ಪಿಗ್ಮಿ ಕಲೆಕ್ಷನ್ ಮಾಡಿ ಕಮೀಷನ್ ಆಧಾರದಲ್ಲಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದರು. ಆದರೆ ಮಹಿಳೆಯರು ಮನೆಯಲ್ಲಿಯೇ ಕುಳಿತೆ ಹಲವಾರು ಉದ್ಯೋಗವನ್ನು ಮಾಡಲು ಸಾಧ್ಯ ಎಂದು ಇತ್ತೀಚೆಗೆ 8 ವರ್ಷದಿಂದ ‘ಶ್ರೀ ಭೈರದೇವೇಶ್ವರ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್’ ಹಾಕಿಕೊಂಡು ಉತ್ತಮ ನಿರ್ವಹಣೆಯೊಂದಿಗೆ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಈಗ ಪತಿಯು ಪಿಗ್ಮಿ ಕಲೆಕ್ಷನ್ ಉದ್ಯೋಗದ ಆದಾಯದಲ್ಲಿ ಮುಂದುವರೆಸಿದ್ದು, ಸ್ಟೇಷನರಿ ಆದಾಯದೊಂದಿಗೆ ಕುಟುಂಬದ ಆದಾಯಕ್ಕೆ ಇವರು ಕೈ ಜೋಡಿಸಿದ್ದಾರೆ.

ಆರ್ಥಿಕ ಸವಾಲು ಮತ್ತು ಸಹಕಾರ ಮತ್ತು ಲಾಭದಾಯಕ ಉದ್ಯೋಗ:

ಸಂಸಾರದಲ್ಲಿ ಆರ್ಥಿಕ ಸಹಕಾರ ಇಲ್ಲವಾದರೆ ಸಂಸಾರ ಕುಸಿಯುವುದು ನಿಶ್ಚಿತ. ಆದರೆ ಅದನ್ನು ಗಟ್ಟಿಗೊಳಿಸುವಲ್ಲಿ ಇವರು ಧರ್ಮಸ್ಥಳದ ಏಕದಂತ ಸ್ವ ಸಹಾಯ ಸಂಘವನ್ನು 6 ವರ್ಷದ ಈಚೆಗೆ ಪ್ರಾರಂಭಿಸಿಕೊಂಡರು. 2 ವರ್ಷವಾದರೂ ಯಾವುದೇ ಅಭಿವೃದ್ಧಿಯನ್ನು ಕಾಣದ ಇವರು ಹಂತ ಹಂತವಾಗಿ ಸಾಲವನ್ನು ಪಡೆದರು. ಮೊದಲು ರೂ.10 ಸಾವಿರ, 25 ಸಾವಿರ, ನಂತರ 50 ಸಾವಿರ, 70 ಸಾವಿರ, 1.50 ಲಕ್ಷ ಸಾಲವನ್ನು ಈ ಅವಧಿಯಲ್ಲಿ ಒಟ್ಟು ರೂ.3.05 ಲಕ್ಷ ಸಾಲವನ್ನು ಅಂಗಡಿಯ ಬಂಡವಾಳಕ್ಕೆ ಬಳಸಿಕೊಂಡು ಸುಮಾರು 2 ಲಕ್ಷ ಅಂಗಡಿಯಲ್ಲಿ ಸಾಮಾಗ್ರಿಗಳಿಂದ ತುಂಬಿಸಿಕೊಂಡಿರುತ್ತಾರೆ. ಅಂಗಡಿಯಲ್ಲಿ, ಸ್ಟೇಷನರಿ, ರೆಡಿಮೇಡ್ ಬಟ್ಟೆಗಳು, ತಾವೇ ಸ್ವತಃ ಖರೀದಿಸಿದ ಪೇಪರ್ ಪ್ಲೇಟ್ ಮಿಷನ್‍ನಿಂದ ತಯಾರಿಸಿದ ಪೇಪರ್ ಪ್ಲೇಟುಗಳ ಮಾರಾಟ, ಹೀಗೆ ಹತ್ತು ಹಲವಾರು ಸಾಮಾಗ್ರಿಗಳಿಂದ ಅಂಗಡಿಯಲ್ಲಿ ಲಾಭವನ್ನು ತಂದುಕೊಳ್ಳುತ್ತಿದ್ದಾರೆ. ತಿಂಗಳಿಗೆ ರೂ.20000/-ಗಳ ಆದಾಯವನ್ನು ಈ ಅಂಗಡಿಯ ವ್ಯಾಪಾರದಿಂದ ಪಡೆಯುತ್ತಿದ್ದು, ಒಟ್ಟು ಸಾಲದ ಕಂತು ಮತ್ತು ಇತರೆ ಖರ್ಚನ್ನು ತೆಗೆದು ರೂ.5000/- ಉಳಿಕೆ ಮಾಡುತ್ತಿದ್ದಾರೆ.
ಮಗಳಿಗೆ ಇತ್ತೀಚೆಗೆ ಸ್ವ ಸಹಾಯ ಸಂಘದಿಂದ ರೂ.1.50 ಲಕ್ಷ ಸಾಲವನ್ನು ಪಡೆದು ಇಂಜನಿಯರಿಂಗ್ ವಿದ್ಯಾಭ್ಯಾಸನವನ್ನು ಮಾಡಿಸುತ್ತಲಿರುವರು. ಮಗನಿಗೂ ಕೂಡಾ ಉತ್ತಮ ಪದವಿಯನ್ನು ಮಾಡುವ ಇಚ್ಚೆಯಲ್ಲಿದ್ದು, ಈಗ ವರ್ಷಕ್ಕೆ 2 ಮಕ್ಕಳ ಶಿಕ್ಷಣಕ್ಕೂ ಸೇರಿ ರೂ.1.50 ಲಕ್ಷ ವಾರ್ಷಿಕವಾಗಿ ಇವರು ಇದೇ ಆದಾಯದಲ್ಲಿ ಖರ್ಚು ಮಾಡುತ್ತಲಿದ್ದಾರೆ. ಯಜಮಾನರ ಆದಾಯದಲ್ಲಿ ಇತರೆ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದು, ಸೈಟ್ ಖರೀದಿಸಲು ಉಳಿತಾಯವನ್ನು ದಂಪತಿಗಳು ಜೊತೆಗೂಡಿ ಮಾಡಿಕೊಂಡಿರುತ್ತಾರೆ.

ಸಾಮಾಜಿಕ ಬಲಕ್ಕೆ ಬೇಕು ಮಹಿಳೆಯರಿಗೆ ಜಾಗೃತಿ:
“ನೊಂದ ಮಹಿಳೆಯರಿಗೆ ಆತ್ಮಬಲವನ್ನು ತುಂಬುವಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ದಾರಿದೀಪವಾಗಿದೆ. ಈ ಕಾರ್ಯಕ್ರಮದ ಮಾಹಿತಿಯಿಂದ ನಮ್ಮ ಸಂಕಷ್ಟವನ್ನು ದಾಟಿ ಮೆಟ್ಟಿ ನಿಲ್ಲಲು ನಮಗೆ ಸಾಧ್ಯವಿದ್ದು, ನೊಂದ ಮಹಿಳೆಯರಿಗೆ ನಾನು ಸಂದೇಶ ಕೊಡುತ್ತೇನೆ ನಿಮ್ಮ ಊರಲ್ಲಿ ನೀವು ಈ ಕೇಂದ್ರವನ್ನು ಸೇರಿ ಪ್ರಯೋಜನ ಪಡೆದುಕೊಳ್ಳಿರಿ ಎಂದು” ತಮ್ಮ ಮನದಾಳದ ಮಾತುಗಳಿಂದ ಆತ್ಮವಿಶ್ವಾಸವನ್ನು ತುಂಬುತ್ತಾರೆ.
ಕುಟುಂಬದ ಹತ್ತು ಹಲವಾರು ಜವಾಬ್ದಾರಿಗಳೊಂದಿಗೆ ಉತ್ತಮ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇತರೆ ಮಹಿಳೆಯರಿಗೆ ಧೈರ್ಯವನ್ನು ತುಂಬುತ್ತಾರೆ. ಸ್ವತಃ ಇದೇ ಕಾರ್ಯಕ್ರಮದಡಿಯಲ್ಲಿ ಸೃಜನಶೀಲ ಉಚಿತ ಕೌಶಲ್ಯ ತರಬೇತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೀರೆಗೆ ಕುಚ್ಛು ಕಟ್ಟಿ ಆದಾಯ ಮಾಡಿಕೊಳ್ಳುವಲ್ಲಿ ಸ್ವತಃ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಚಿಂತನಾಶೀಲರಾಗಿರುವ ಇವರು ಪತಾಂಜಲಿಯಂತಹ ಉತ್ಪಾದನೆಗಳೊಂದಿಗೆ ಧರ್ಮಸ್ಥಳದ ಸಿರಿಧಾನ್ಯಗಳನ್ನು ಹೆಚ್ಚು ವ್ಯವಸ್ಥಿತವಾಗಿ ಮಾರಾಟ ಮಾಡುವ ಮಹದಾಸೆಯನ್ನು ಹೊಂದಿರುತ್ತಾರೆ.

(ಗಾಯಿತ್ರಿ ದೂರವಾಣಿ ಸಂಖ್ಯೆ:9480772179)

Leave a Reply

Your email address will not be published. Required fields are marked *