success storyWomen Empowerment

ಕೇಂದ್ರದ ಸದಸ್ಯರ ಅಭಿವೃಧ್ಢಿಗೆ ಆಸರೆಯಾದ ರೊಟ್ಟಿ ಕೇಂದ್ರ

ಸರ್ವೆ ಸಾಮಾನ್ಯವಾಗಿ ನಾವು ಸ್ವಾರ್ಥ ಜೀವನ ನಡೆಸುವವರನ್ನು ನೋಡಿದ್ದೇವೆ ಆದರೆ ಇಲ್ಲೊಂದು ಅದಕ್ಕೆ ಸವಾಲೆನಿಸುವಂತಿದೆ. ಮೂಲತಹಃ ಲಿಂಗಸುಗೂರು ತಾಲೂಕಿನ ಮಟ್ಟುರು ಎಂಬ ಚಿಕ್ಕ ಹಳ್ಳಿಯಲ್ಲಿ ವಾಸಮಾಡುತ್ತಿರುವ ಜಯಶ್ರೀ, ಜಯಮ್ಮ, ವಿಜಯಲಕ್ಷ್ಮೀ, ಸಂಗಮ್ಮ ಹಾಗೂ ಲಕ್ಷ್ಮೀದೇವಿ ಇವರು ಧರಣಿ ಜ್ಞಾನವಿಕಾಸ ಕೇಂದ್ರದ ಸದಸ್ಯರು. ಕೇಂದ್ರದ ಕಾರ್ಯಕ್ರಮಗಳಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿ ಕೊಟ್ಟ ಮಾಹಿತಿಯನ್ನು ಪಡೆದು ಪ್ರೇರಿತರಾಗಿ ತಮ್ಮ ಗುಂಪಿನಲ್ಲಿ 05 ಜನ ಸೇರಿಕೊಂಡು ರೊಟ್ಟಿ ಕೇಂದ್ರವನ್ನು ಪ್ರಾರಂಭ ಮಾಡುತ್ತಾರೆ. ಕೇವಲ ರೊಟ್ಟಿ ಮಾಡುವದಷ್ಟೇ ಅಲ್ಲದೇ ದಿನವಿಡಿ ಹೊಲದಲ್ಲಿ ಕೆಲಸವನ್ನು ಮುಗಿಸಿಕೊಂಡು ರಾತ್ರಿಯ ಸಮಯದಲ್ಲಿ ದಿನಕ್ಕೆ ಕನಿಷ್ಠ 500 ರೊಟ್ಟಿಯನ್ನು ಮಾಡುತ್ತಾರೆ. ಒಂದು ರೊಟ್ಟಿಗೆ ರೂ 3 ರಂತೆ ಖುದ್ದಾಗಿ ಖಾನವಳಿಯವರೇ ಹಳ್ಳಿಗೆ ಬಂದು ಖರೀದಿಸುತ್ತಾರೆ. ಸದ್ರಿಯವರು ಸಂಘದಲ್ಲಿ ರೂ.50000/- ಪ್ರಗತಿನಿಧಿಯನ್ನು ಪಡೆದು ತಮ್ಮ ರೊಟ್ಟಿ ಕೇಂದ್ರವನ್ನು ಮುನ್ನಡಿಸುತ್ತಿದ್ದಾರೆ. ಈ ಒಂದು ಉದ್ಯೋಗದಲ್ಲಿ ತೊಡಗಿ ದಿನಕ್ಕೆ 1500 ರಿಂದ 2000 ರಷ್ಟು ಆದಾಯಗಳಿಸುತ್ತಾರೆ. ಈ ಕಾಯಕವನ್ನು ನಡೆಸಿಕೊಟ್ಟ ಯೋಜನೆಗೆ ಯಾವತ್ತು ಚಿರರುಣಿಯಾಗಿದ್ದೇವೆ ಎನ್ನುತ್ತಾರೆ ಜಯಶ್ರೀ, ಜಯಮ್ಮ, ವಿಜಯಲಕ್ಷ್ಮೀ, ಸಂಗಮ್ಮ ಹಾಗೂ ಲಕ್ಷ್ಮೀದೇವಿ.

Leave a Reply

Your email address will not be published. Required fields are marked *