News

ಕಾನೂರಾಯಣದ ಮುಹೂರ್ತ ಫಿಕ್ಸ್

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ 20 ಲಕ್ಷ ಸದಸ್ಯರು ಸೇರಿ ನಿರ್ಮಿಸಿರುವ ಕಾನೂರಾಯಣ ಚಲನಚಿತ್ರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದು. ಇದೇ ತಿಂಗಳ 27 ರಂದು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೆಗೊಳ್ಳಲಿದೆ. ಕಾನೂರಾಯಣ ಚಲನಚಿತ್ರವನ್ನು ಧರ್ಮಸ್ಥಳ ಧರ್ಮಾಧಿಕಾರಿಗಳು ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ .ಡಿ ವೀರೇಂದ್ರ ಹೆಗ್ಡೆಯವರಿಗೆ 50 ನೇ ಪಟ್ಟಾಭಿಷೇಕ ದ ಸವಿನೆನಪಿಗಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳು ಸೇರಿ ನಿರ್ಮಾಣ ಮಾಡಿದ್ದಾರೆ.
ಟಿ ಎಸ್ ನಾಗಾಭರಣರವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಡಾ ಎಲ್ ಹೆಚ್ ಮಂಜುನಾಥ್ ಹಾಗೂ ಹರೀಶ್ ಹಾಗಲವಾಡಿ ಕಥೆ-ಸಂಭಾಷಣೆ ತಯಾರಿಸಿದ್ದಾರೆ. ಚಿತ್ರಕಥೆ-ಸಹನಿರ್ದೇಶನದಲ್ಲಿ ಪನ್ನಗ ಭರಣರವರು ಕೈಚಳಕ ತೋರಿಸಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶಯಗಳನ್ನು ಒಳಗೊಂಡು ಗ್ರಾಮೀಣ ಪ್ರದೇಶದಲ್ಲಿ ಎದುರಿಸುವ ಸವಾಲುಗಳನ್ನು ಮುಂದಿಟ್ಟುಕೊಂಡು ನಿಮ್ಮ ಮುಂದೆ ಬರುತ್ತಿದೆ. ಕನ್ನಡ ಚಿತ್ರರಂಗದಲ್ಲೆ ಮೊಟ್ಟಮೊದಲ ಬಾರಿಗೆ 20 ¯ಕ್ಷ ಮಂದಿ ಹಣ ಹಾಕಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಮುಖ್ಯಭೂಮಿಕೆಯಲ್ಲಿ ರಾಧಾರಮಣ ಖ್ಯಾತಿಯ ಸ್ಕಂದ ಅಶೋಕ್ , ಸೋನು ಗೌಡ , ದೊಡ್ಡಣ್ಣ , ನೀನಾಂಸಂ ಅಶ್ವತ್ , ಕಡ್ಡಿಪುಡಿ ಚಂದ್ರು ನಟಿಸಿದ್ದಾರೆ.

ಟ್ರೈಲರ್ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://www.youtube.com/watch?v=kinjPCZr4rU

 

Leave a Reply

Your email address will not be published. Required fields are marked *