“ಸಮಾಜದಲ್ಲಿ ಪ್ರಮುಖವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ನಿರುದ್ಯೋಗ, ನಾಯಕತ್ವ, ಭ್ರಷ್ಟಾಚಾರದಂತಹ ಸಮಸ್ಯೆಗಳು ಉದ್ಭವಿಸಿದ್ದು ಪರ್ಯಾಯವಾಗಿ ಸರ್ಕಾರವು ವಿವಿಧ ಕಾರ್ಯಕ್ರಮಗಳ ಮುಖೇನ ಅಭಿವೃದ್ಧಿ ಚಿಂತನೆಯನ್ನು ಮಾಡಿ ಇದನ್ನು ವ್ಯವಸ್ಥಿತವಾಗಿ ಜನರಿಗೆ ತಲುಪಿಸುವಲ್ಲಿ ಸರಕಾರೇತರ ಸಂಸ್ಥೆಯ ಸಹಭಾಗಿತ್ವ ಪಡೆಯುತ್ತಿರುವುದನ್ನು ಗಮನಿಸಬಹುದಾಗಿದೆ. ಸರ್ಕಾರದ ಈ ಕಾರ್ಯಕ್ರಮದ ಪೂರ್ವದಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂದರೆ 1982 ರಿಂದ ಈ ಚಿಂತನೆಯೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು. ಪ್ರತಿ ವರ್ಷದಲ್ಲಿ ವಿದ್ಯಾವಂತರು ಕೇವಲ 10% ರಿಂದ 15% ಪ್ರತಿಶತದಲ್ಲಿ ಉದ್ಯೋಗವಕಾಶವನ್ನು ಸರ್ಕಾರಿ ಮಟ್ಟದಲ್ಲಿ ಪಡೆಯಬಹುದಾಗಿದ್ದು, ಉಳಿದಂತೆ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆಯೊಂದಿಗೆ ಉತ್ತಮ ಆದಾಯೋತ್ಪನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಜೀವನ ನಿರ್ವಹಣೆಯನ್ನು ಮಾಡಲು ಅವಕಾಶಗಳು ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ತೊಡಗಿಸಿಕೊಳ್ಳಬೇಕು.” ಎಂದು ಉದ್ದೇಶಿಸಿ ಮೈಸೂರು ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶ್ರೀಹರಿ ಇವರು ಜ್ಯೋತಿ ಬೆಳಗಿಸುವ ಮೂಲಕ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಭಾಗವಹಿಸಿದ ಶಿಭಿರಾರ್ಥಿಗಳನ್ನು ಮಾರ್ಗದರ್ಶಿಸಿದರು.
“ನಗರ ಪ್ರದೇಶಗಳಿಗೆ ಆಕರ್ಷಿತರಾಗಿ ಜೀವನದ ಮೌಲ್ಯವನ್ನು ಕಳೆದುಕೊಳ್ಳದೆ, ದುಶ್ಚಟಕ್ಕೆ ಬಲಿಯಾಗದೇ ಸಧೃಢ ದೇಶ ಕಟ್ಟುವಲ್ಲಿ, ಉತ್ತಮ ಕುಟುಂಬ ರೂಪಿಸಿಕೊಳ್ಳಲು, ತಾವು ಬೆಳೆದ ನಾಡನ್ನು ಅಭಿವೃದ್ಧಿಯಡೆಗೆ ಸಾಗಿಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿರಲಿ ಹಾಗೂ ಈ ತರಬೇತಿ ಮೂಲಕ ಹೊಸ ಆಶಯಯೊಂದಿಗೆ ಹುಮ್ಮಸ್ಸಿನಿಂದ ನಿಮ್ಮ ಬದುಕು ಸಾಗಲಿ” ಎಂದು ಶಿಭಿರಾರ್ಥಿಗಳಿಗೆ ಸ್ವ ಪ್ರೇರಣೆಯನ್ನು ತುಂಬಿದರು.
ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಮಲ್ಲಾಪುರ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಹೈನುಗಾರಿಕೆ, ಸಿದ್ಧ ಉಡುಪು, ಕಸೂತಿ ತರಬೇತಿಗೆ ಭಾಗವಹಿಸಿದ ಶಿಭಿರಾರ್ಥಿಗಳನ್ನು ಸಂಸ್ಥೆಯ ರೂಪುರೇಷೆಗಳನ್ನು ತಿಳಿಸಿ ಅತಿಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಸಿಕೊಟ್ಟರು.ಯೋಜನೆಯ ಜಂಟಿ ಬಾಧ್ಯಾತ ಸಂಘಗಳ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು 5 ದಿನಗಳ ಕಾಲ ದಿನಾಂಕ:19.06.2018 ರಿಂದ 23.06.2018ರವರೆಗೆ ಹಮ್ಮಿಕೊಂಡಿರುವ ಈ ತರಬೇತಿಯಲ್ಲಿ ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದು, ಮೈಸೂರು ಮತ್ತು ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಒಟ್ಟು 76 ಫಲಾನುಭವಿ ಸದಸ್ಯರು ಭಾಗವಯಿಸಿದ್ದಾರೆ.
ಹೈನುಗಾರಿಕೆ, ಸಿದ್ಧ ಉಡುಪು ಮತ್ತು ಸೀರೆ ಕುಚ್ಚು ಸ್ವ ಉದ್ಯೋಗ ತರಬೇತಿ
