NewsTrainingWomen Empowerment

“ಬ್ಯೂಟಿಷೀಯನ್ ಸೇವಾಧಾರಿತ ಕೌಶಲ್ಯಾಭಿವೃದ್ದಿ ತರಬೇತಿ”

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ), ಧರ್ಮಸ್ಥಳ ಪ್ರಾಯೋಜಿತ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ರಾಯಾಪೂರ ಧಾರವಾಡದಲ್ಲಿ ದಿನಾಂಕ 18.06.2018 ರಿಂದ 27.06.2018ವರೆಗೆ ಹತ್ತು ದಿನಗಳ “ಬ್ಯೂಟಿಷೀಯನ್ ಸೇವಾಧಾರಿತ ಕೌಶಲ್ಯಾಭಿವೃದ್ದಿ ತರಬೇತಿ” ಸಂಪೂರ್ಣ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಧಾರವಾಡ ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ ಎಂ ರವರು ಉದ್ಘಾಟಿಸಿ ಮಾತನಾಡುತ್ತಾ ತರಬೇತಿ ಸಂಸ್ಥೆಯು ಪೂಜ್ಯರ ಕನಸಿನ ಕೂಸು, ಇದರ ಮೂಲ ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿನ ಅಭಯದಾನ ಶ್ರೇಷ್ಠವಾದುದು. ಎಲ್ಲಾ ಜನರು ಶ್ರೀ ಕ್ಷೇತ್ರಕ್ಕೆ ಹೋಗಿ ಅಭಯದಾನ ಪಡೆಯಲು ಸಾಧ್ಯವಿಲ್ಲ ಅದಕ್ಕೆ ಪರ್ಯಾಯವಾಗಿ ಸ್ವ ಸಹಾಯ ಸಂಘಗಳ ಮುಖೇನ ಸಂಘಟನೆಯಿಂದ ಅಭಯದಾನವನ್ನು ಪಡೆಯಬಹುದಾಗಿದೆ. ಶ್ರೀ ಕ್ಷೇತ್ರದಿಂದ ನೊಂದ ಜೀವಗಳಿಗೆ ದೈರ್ಯ ತುಂಬುವ ಕಾರ್ಯಗಳು ನಡೆಯುತ್ತಿವೆ. ಉತ್ತರ ಕರ್ನಾಟಕದ ಪ್ರತಿಯೊಂದು ಮನೆಗಳ ಸದಸ್ಯರು ಸ್ವ ಉದ್ಯೋಗ ಮಾಡಬೇಕು , ಸ್ವಾವಲಂಬಿಗಳಾಗಬೇಕು, ಎಂಬುದು ಕ್ಷೇತ್ರದ ಆಶಯ. ಈ ನಿಟ್ಟಿನಲ್ಲಿ ಇಂದು ಬ್ಯೂಟಿಷಿಯನ್ ಸೇವಾಧಾರಿತ ಕೌಶಲ್ಯಾಭಿವೃದ್ದಿ ತರಬೇತಿ ಮತ್ತು ವ್ಯಾಪಾರ ಮತ್ತು ಉದ್ದಿಮೆ ಕೌಶಲ್ಯಾಭಿವೃದ್ದಿ ತರಬೇತಿಯನ್ನು ಆಯೋಜಿಸಲಾಗಿದೆ. ಸೌಂದರ್ಯ ಪ್ರಜ್ಞೆ ಎಂಬುದು ಇಂದು ನಿನ್ನೆಯದಲ್ಲ ಅನಾದಿ ಕಾಲದಿಂದಲೂ ಇದ್ದು ಮೊದಲು ಮನೆಗಳಲ್ಲಿ ಮನೆ ಮದ್ದನ್ನು ತಯಾರಿಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ದಿನವಿತ್ತು ಆದರೆ ಕಾಲ ಕ್ರಮೇಣ ಸುಧಾರಿತ ಮದ್ದುಗಳ ಲೋಶನ್‍ಗಳಾಗಿವೆ, ಕೆಲಸಗಳಲ್ಲಿ ಯಂತ್ರಗಳನ್ನು ಬಳಸುತ್ತಿದ್ದಾರೆ. ಮಹಿಳೆಯರಾಗಲಿ ಅಥವಾ ಪುರುಷರಾಗಲಿ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಬ್ಯೂಟಿಪಾರ್ಲರಗಳಂತಹ ಸೇವಾಧಾರಿತ ಉದ್ಯೋಗಗಳಿಗೆ ವಿಪುಲ ಅವಕಾಶಗಳಿವೆ. ಇದರೊಂದಿಗೆ ವ್ಯಾಪಾರಿಗಗಳು ತಮ್ಮ ವ್ಯಾಪಾರಿಗಳಿಗೆ ಅಭಿವೃದ್ದಿ ಹೊಂದಲು ಉತ್ತಮ ಮಾತುಗಾರಿಕೆ, ಗುಣಮಟ್ಟದ ವ್ಯಾಪಾರ, ಗ್ರಾಹಕ ಸಂಪರ್ಕ, ಬಂಡವಾಳದ ಕ್ರೋಡಿಕರಣಗಳ ಕಡೆಗೆ ಗಮನ ಕೊಟ್ಟು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತರಬೇತಿಯ ಉದ್ದೇಶ ಹಾಗೂ ನಿಯಮಗಳ ಕುರಿತು ವಿವರಿಸಿದರು. ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಮತಿ ವಿಜಯಕ್ಷ್ಮಿಯವರು ಸ್ವಾಗತಿಸಿದರು. ಇನ್ನೋರ್ವ ಉಪನ್ಯಾಸಕರಾದ ಶ್ರೀ ನಿಂಗಪ್ಪರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಹತ್ತು ದಿನ ಸೇವಾಧಾರಿತ ಬ್ಯೂಟಿಷಿಯನ್ ತರಬೇತಿಯಲ್ಲಿ ರಾಯಚೂರು,ಧಾರವಾಡ, ಬೆಳಗಾವಿ ಮತ್ತು ಬಳ್ಳಾರಿಯಿಂದ 32 ಜನ ಅಭ್ಯರ್ಥಿಗಳು ಮತ್ತು ನಾಲ್ಕು ದಿನ ವ್ಯಾಪಾರ ಮತ್ತು ಉದ್ದಿಮೆ ತರಬೇತಿಯಲ್ಲಿ ಬಾಗಲಕೋಟೆ, ಬೆಳಗಾವಿ ಮತ್ತು ಬೀದರ ಜಿಲ್ಲೆಯಿಂದ 25 ಜನ ಅಭ್ಯರ್ಥಿಗಳು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆಯಲಿದ್ದಾರೆ.

ಶ್ರೀಮತಿ ವಿಜಯಲಕ್ಷ್ಮಿ ನೆಗಳೂರ
ಉಪನ್ಯಾಸಕಿ
ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ
ರಾಯಾಪೂರ _ ಧಾರವಾಡ

Leave a Reply

Your email address will not be published. Required fields are marked *