Community HealthNews

ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನಾಚರಣೆ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತಾಲೂಕು ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26.06.18 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನಾಚರಣೆ ಮತ್ತು ಸ್ವಾಸ್ಥ್ಯ ಸಂಕಲ್ಪ ಉದ್ಘಾಟನಾ ಕಾರ್ಯಕಮವನ್ನು ನಡೆಸಲಾಯಿತು. ಸದ್ರಿ ಕಾರ್ಯಕ್ರಮವನ್ನು ಶ್ರೀ ವಿ. ಸುನೀಲ್ ಕುಮಾರ್, ಶಾಸಕರ ಉದ್ಘಾಟಿಸಿ ವ್ಯಸನಮುಕ್ತ ಭಾರತದ ಕಡೆಗೆ ಹೆಚ್ಚು ಒತ್ತು ಕೊಡುವಂತೆ ಮತ್ತು ವಿದ್ಯಾರ್ಥಿಗಳಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಈ ಕನಸಿನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿರಲಿ ಎಂದು ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಮಲಾಕ್ಷ ನಾಯಕ್ ಅಧ್ಯಕ್ಷರು ಜನಜಾಗೃತಿ ವೇದಿಕೆ ಕಾರ್ಕಳ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ತಿಮ್ಮಯ್ಯ ನಾಯ್ಕ, ಯೋಜನಾಧಿಕಾರಿ ಜನಜಾಗೃತಿ ವೇದಿಕೆ ಬೆಳ್ತಂಗಡಿ ಇವರು ಮಾತನಾಡಿ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವಾಗ ಮೇಲಿಟ್ಟರೆ ಕಾಗೆ ಕೊಂಡು ಹೋಗುತ್ತದೆ ಕೆಳಗೆ ಇಟ್ಟರೆ ಇರುವ ಕೊಂಡು ಹೋಗುತ್ತದೆ ಎಂದು ಸಾಕುತ್ತಾರೆ. ಹದಿ ಹರೆಯದ ವಯಸ್ಸಿಗೆ ಬರುವ ಸಂದರ್ಭದಲ್ಲಿ ಮಕ್ಕಳು ತಂದೆ ತಾಯಿಯ ಪಾದಗಳಿಗೆ ನಮಸ್ಕರಿಸಲು ನಾಚುವಂತ ಸ್ಥಿತಿ ಕಾಣುವಂತಾಗಿದೆ. ಗುಟ್ಕಾ ಮಾರುವವನ ಮಗ ಯಾವುದೇ ಮದ್ಯವ್ಯಸನಕ್ಕೆ ಬಲಿಯಾಗುವುದಿಲ್ಲ. ಇನ್ನೊಬ್ಬನ ಬಾಳನ್ನು ಹಾಳು ಮಾಡುತ್ತಾನೆ ಹೊರತು ನೆಮ್ಮದಿಯಿಂದ ಜೀವನ ಮಾಡಲು ಬಿಡುವುದಿಲ್ಲ. ಮಾದಕ ವಸ್ತು ದುಶ್ಪರಿಣಾಮದ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಯಾವುದೇ ವ್ಯಸನಕ್ಕೆ ತುತ್ತಾಗದೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಎಂ.ಕೆ. ವಿಜಯಕುಮಾರ್, ಹಿರಿಯ ನ್ಯಾಯವಾದಿಗಳು ಕಾರ್ಕಳ, ಶ್ರೀ ಜಯಕುಮಾರ್ ಜೈನ್, ಅಧ್ಯಕ್ಷರು, ಪ್ರಗತಿಬಂಧು ಕೇಂದ್ರ ಒಕ್ಕೂಟ, ಕಾರ್ಕಳ, ಶ್ರೀ ಮಹಾವೀರ ಹೆಗ್ಡೆ ಅಂಡಾರು, ಹರಿಶ್ಚಂದ್ರ ತೆಂಡುಲ್ಕರ್, ಅಂತೋನಿ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 782 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಕೃಷ್ಣ ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತವಿತ್ತರು. ಎಸ್.ಎನ್.ವಿ. ಕಾಲೇಜಿನ ಶಿಕ್ಷಕರಾದ ಸುಭ್ರಮಣ್ಯ ಆಚಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೌಡಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ರವರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ವಾರಿಜಯರವರು ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *