Community HealthNews

ಅಂತರಾಷ್ಟ್ರೀಯ ಮಾದಕ ವಸ್ತು ವಿರೋದಿ ದಿನಾಚರಣೆ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತಾಲೂಕು ಜನಜಾಗೃತಿ ವೇದಿಕೆ, ಬಾಲಾಂಜನೇಯ ಯುವಕ ಸಂಘ ಮುರತಂಗಡಿ ಸಾಣೂರು, ವಿನಾಯಕ ಗೆಳೆಯರ ಬಳಗ ಮುರತಂಗಡಿ ಸಾಣೂರು ಜಂಟಿ ಆಶ್ರಯದೊಂದಿಗೆ ದಿನಾಂಕ 26.06.18 ರಂದು ಸಾಣೂರು ವಲಯದ ಪದವಿ ಪೂರ್ವ ಕಾಲೇಜು, ಮುರತ್ತಂಗಡಿ ಸಾಣೂರಿನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ದಿನಾಚರಣೆ ಪ್ರಯುಕ್ತ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಲಾಯಿತು. ಸದ್ರಿ ಕಾರ್ಯಕ್ರಮದಲ್ಲಿ ಆದರ್ಶ ಗೋಕಾಲ್ ಉಪನ್ಯಾಸಕರು, ಸುಚೇತ ಕಾಮತ್ ಪ್ರಾಂಶುಪಾಲರು ಪ.ಪೂ. ಕಾಲೇಜು ಮುರತ್ತಂತಡಿ ಸಾಣೂರು, ವಲಯಾಧ್ಯಕ್ಷರು ನಾಗೇಂದ್ರ ಶೆಟ್ಟಿಗಾರ್, ಜಯ ಶೆಟ್ಟಿಗಾರ್ ಅಧ್ಯಕ್ಷರು ಸಾಣೂರು ಬಿ ಒಕ್ಕೂಟ, ಮುಕೇಶ್ ವಿನಾಯಕ ಗೆಳೆಯರ ಬಳಗ ಮುರತ್ತಂಗಡಿ ಸಾಣೂರು, ಸಂತೋಷ್ ಬಾಲಾಂಜನೇಯ ಯುವಕ ಸಂಘ ಮುರತ್ತಂಗಡಿ ಸಾಣೂರು, ಪ್ರಶಾಂತ್ ಕಾಮತ್ ಬಾಲಾಂಜನೇಯ ಯುವಕ ಸಂಘ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 500 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರಮ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ನಡೆಸುವ ಈ ಕಾರ್ಯಕ್ರಮ ರಾಷ್ಟ್ರವೇ ಗುರುತಿಸುವಂತಹ ಕಾರ್ಯಕ್ರಮವಾಗಿದ್ದು ದೇಶಕ್ಕೆ ಮಾದರಿಯಾಗಿದೆ. ಕಾರ್ಯಕರ್ತರ ಮುಖೇನ ನಡೆಸುವ ಪ್ರತಿಯೊಂದು ಕಾರ್ಯಕ್ರಮ ಜನರಲ್ಲಿ ಜಾಗೃತಿ ಮೂಡಿಸುತ್ತದೆ. ಸಮಾಜ ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ, ಮಾದಕ ವಸ್ತು ದುಶ್ಪರಿಣಾಮದ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂಬ ಸಂದೇಶವನ್ನು ನೀಡಿ ವಿದ್ಯರ್ಥಿಗಳಲ್ಲಿ ಪ್ರಮಾಣ ವಚನ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಅರುಣಿಯವರು ಸ್ವಾಗತವನ್ನು ನೀಡಿ, ಮೇಲ್ವಿಚಾರಕರಾದ ವಾರಿಜ ವಿ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಶಿಕ್ಷಕರು ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

ಕೃಷ್ಣ ಟಿ
ಯೋಜನಾಧಿಕಾರಿ

Leave a Reply

Your email address will not be published. Required fields are marked *