Community HealthNews

ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಕ್ರಮ ಹಾಗೂ ಜಾಥ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿ.ನರಸೀಪುರ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದೊಂದಿಗೆ ದಿನಾಂಕ:26.06.2018ರಂದು ವಿಶ್ವ ಅಂತರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ನಿಷೇಧ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮೈಸೂರು ಜಿಲ್ಲಾ ನಿರ್ದೇಶಕರು ಶ್ರೀವಿ.ವಿಜಯಕುಮಾರ್ ನಾಗನಾಳ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಶ್ಚಟಗಳಿಗೆ ದಾಸರಾಗಿರುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಮದ್ಯವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪದ ಮೂಲಕ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇಂತಹ ಮಾಹಿತಿ ನೀಡುವುದರಿಂದ ಉತ್ತಮ ಜೀವನ ನಡೆಸುವ ಬಗ್ಗೆ ತಿಳಿದುಕೊಳ್ಳುತ್ತಾರೆ ಜನರು ಮಾದಕ ಸೇವನೆಯಿಂದ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ ದೇಶದಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ಪ್ರತೀ ವರ್ಷ 10 ಲಕ್ಷ ಜನರು ಮರಣ ಹೊಂದುತ್ತಿದ್ದು, ರಾಜ್ಯದಲ್ಲಿ ಸರಾಸರಿ ಒಂದರಿಂದ ಎರಡು ಲಕ್ಷ ಜನರು ಒಂದು ವರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಲ್ಲಿ ಯುವ ಸಮುದಾಯವೇ ಹೆಚ್ಚು ಬಾಗಿಯಾಗುತ್ತಿರುವುದು ಆತಂಕಕಾರಿ ವಿಷಯ ಎಂದರು.

ಸಂಪನ್ಮೂಲ ವ್ಯಕ್ತಿ  ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಶ್ರೀ ಪ್ರಭುಸ್ವಾಮಿಯವರು ಮಾತನಾಡಿ ಮಾದಕ ವಸ್ತು ಎಂದರೇನು? ಮಾದಕ ವಸ್ತು ಎಂದರೆ ನಶೆ ಒಳಗಾಗುವ ಪದಾರ್ಥಗಳು. ಇತ್ತೀಚಿನ ದಿನಗಳಲ್ಲಿ ಕುಡಿತವೊಂದೇ ಅಲ್ಲದೇ ಡ್ರಕ್ಸ್, ಅಫೀಮ್, ಗಾಂಜ, ಸಿಗರೇಟು ಹಾಗೂ ಮಹಿಳೆಯರು ಬಳಕೆ ಮಾಡುವಂತಹ ನೇಲ್ ಫಾಲೀಶ್, ವೈಟ್ನರ್ ಇಂತಹ ವಸ್ತುಗಳನ್ನು ಕೂಡ ಬಳಕೆ ಮಾಡಿಕೊಂಡು ಮಾದಕ ವಸ್ತುಗಳಿಗೆ ಅಧೀನರಾಗುತ್ತಿದ್ದಾರೆ. ಇಂದಿನ ದಿನ ಕುಡಿತವಿಲ್ಲದೇ ಇರುವ ಕುಟುಂಬಗಳನ್ನು ಹುಡುಕಿದರು ಕೂಡಾ ಸಿಗದೇ ಇರುವಂತಹ ಸ್ಥಿತಿ ಎದುರಾಗಿದೆ ಆದುದ್ದರಿಂದ ನಾವೆಲ್ಲ ಜಾಗೃತರಾಗಿ ಮುಂದಿನ ಪೀಳಿಗೆಯವರು ಈ ವಸ್ತುಗಳಿಂದ ದೂರವಿರುವಂತೆ ಎಚ್ಚರ ವಹಿಸಿ ಜೀವನವನ್ನು ನಡೆಸಬೇಕೆಂದು ತಿಳಿಸಿದರು.

ಮುಖ್ಯ ಅತಿಥಿ ತಿ.ನರಸೀಪುರ ಎ.ಎಸ್.ಐ ಶ್ರೀರಾಜೇಂದ್ರರವರು ಮಾದಕ ಸೇವನೆಯಿಂದ ಯುವ ಪೀಳೆಗೆ ದೂರವಿರುವುದು ಬಹು ಮುಖ್ಯ. ಅದಕ್ಕಾಗಿಯೇ ನಿಮ್ಮಂಥಹ ಯುವ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇದರ ದುಷ್ಪರಿಣಾಮಗಳ ಕುರಿತು ಎಚ್ಚತ್ತುಕೊಳ್ಳುವಂತೆ ಕರೆ ನೀಡಿದರು ಹಾಗೂ ಕಾರ್ಯಕ್ರಮ ಉತ್ತಮವಾಗಿ ನಡೆಸುವುದರೊಂದಿಗೆ ಈ ಕಾರ್ಯಕ್ರಮದ ಪ್ರಯೋಜನವಾಗಲಿ ಎಂದು ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ತಿ.ನರಸೀಪುರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಶ್ರೀಮತಿ ನಾಗರತ್ನಮ್ಮ, ಪ್ರಾಂಶುಪಾಲರು ಮಾತನಾಡುತ್ತಾ ದುಶ್ಚಟ ಮುಕ್ತ ಸಮಾಜವನ್ನು ನಿರ್ಮಿಸುವುದರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮತ್ತು ಕುಟುಂಬ ನಡೆಸುವ ಮಹಿಳೆಯನ್ನು ಮಾಹಿತಿಯ ಮೂಲಕ ಜಾಗ್ರತೆಗೊಳಿಸಿ ಮುಂದಿನ ಜೀವನವನ್ನು ಯಾವುದೇ ರೀತಿ ಮಾದಕವಸ್ತುಗಳು ಬಳಕೆಯಾಗದಂತೆ ನೋಡಿಕೊಳ್ಳುವಂತೆ ಮಾಹಿತಿ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.

ಮಾದಕ ವಸ್ತು ಸೇವನೆ ವಿರುದ್ಧ ಪ್ರತಿಜ್ಞೆಯನ್ನು ಕೈಗೊಂಡರು. ಊರಿನವರಿಗೆ ಜನಜಾಗೃತಿಯನ್ನು ಮೂಡಿಸುವ ಉದ್ದೇಶದಿಮದ ತಿ.ನರಸೀಪುರ ಪೇಟೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು, ನವಜೀವನ ಸಮಿತಿ ಸದಸ್ಯರು, ಸಂಘದ ಸದಸ್ಯರುಗಳು ಮಾದಕ ವಸ್ತು ವಿರೋಧಿಸಲಾದ ಬ್ಯಾನರ್ ಹಿಡಿದು ರ್ಯಾಲಿ ನಡೆಸಿ ಮಾದಕ ವಸ್ತು ಸೇವನೆಯ ವಿರುದ್ಧದ ಘೋಷಣೆ ಕೂಗಿದರು. ಉದ್ಘಾಟಕರು, ಆಹ್ವಾನಿರು ರ್ಯಾಲಿಗೆ ಮಾರ್ಗದರ್ಶನ ನೀಡಿದರು. ಇದರಿಂದ ಉತ್ತಮ ಫಲಿತಾಂಶ ವ್ಯಕ್ತವಾಯಿತು.

ಈ ಕಾರ್ಯಕ್ರಮದಲ್ಲಿ ಜಾಥ ಉದ್ಘಾಟಕರಾಗಿ ಶ್ರೀಯುತ ವಿ.ವಿಜಯ ಕುಮಾರ್ ನಾಗನಾಳ ಜಿಲ್ಲಾ ನಿರ್ದೇಶಕರು, ಆಹ್ವಾನಿತರಾಗಿ ಸಂಪತ್ ಕುಮಾರ್ ಉಪನ್ಯಾಸಕರು ಹಾಗೂ ಪ್ರೇಮಕುಮಾರಿ ಉಪನ್ಯಾಸಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿ.ನರಸೀಪುರ, ಸಂಜೀವನಾಯ್ಕ್ ಯೋಜನಾಧಿಕಾರಿಗಳು ಶ್ರೀ.ಕ್ಷೇ.ಧ.ಗ್ರಾ.ಯೋ(ರಿ.) ತಿ.ನರಸೀಪುರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿ, ಸೇವಾಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳು, ಸಂಘದ ಸದಸ್ಯರುಗಳು ಸೇರಿದಂತೆ ಸುಮಾರು 400 ಜನ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *