AgricultureNewsTraining

ಹೈನುಗಾರಿಕೆ ಸ್ವ ಉದ್ಯೋಗ ತರಬೇತಿ

“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಉದ್ದೇಶಗಳ ಆಧಾರದ ಮೇಲೆ ಮಹಿಳೆಯರ ಅಭಿವೃದ್ದಿಗೆ ಸ್ವ-ಸಹಾಯ ಸಂಘ, ರೈತರಲ್ಲಿ ಸಹಭಾಗಿತ್ವ ಮತ್ತು ಸಂಶೋಧನತ್ಮಾಕ ವ್ಯವಸಾಯ ರೂಪಿಸಿಕೊಳ್ಳಲು ಪ್ರಗತಿ ಬಂಧು ಸಂಘ ಹಾಗೆಯೇ ವಿಶೇಷವಾಗಿ ಅಕ್ಷರಸ್ಥ/ಅನಕ್ಷರಸ್ಥ ಯುವಕ ಯುವತಿಯರಿಗೆ ಆಶದಾಯಕ ಬದುಕನ್ನು ಕಟ್ಟುಕೊಳ್ಳಲು ಸಹಕಾರಿಯಾಗಿ, ನಿರುದ್ಯೋಗ ನಿರ್ಮೂಲನೆಗಾಗಿ ‘ಜಂಟಿ ಬಾಧ್ಯತಾ ಸಂಘ’ಗಳನ್ನು ರಚಿಸಿ ಅಗತ್ಯ ಮಾರ್ಗಸೂಚಿ, ಆರ್ಥಿಕ ಸಹಕಾರವನ್ನ ನೀಡುತ್ತ ಬರುತ್ತಿದ್ದು, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪ್ರತಿ ಕಾರ್ಯಕ್ರಮಗಳ ಹಿಂದೆ ದೊಡ್ಡ ಪ್ರಯೋಗಗಳನ್ನ ನಡೆಸಿ ಅನಂತರವೇ ಪೂಜ್ಯರು ಪ್ರಕಟಿಸುವುದು ರೂಢಿಯಾಗಿದ್ದು, ಫಲಾನುಭವಿಗಳು ಈ ಸಾಮಾಜಿಕ ಕಳಕಳಿಯನ್ನ ಅರಿತು ಇತರರಿಗೂ ಮಾದರಿಯಾಗುವ ಬದುಕನ್ನ ಸಾಗಿಸಬೇಕು ಎಂದು ಮೈಸೂರಿನ ಪ್ರಾದೇಶಿಕ ಕಛೇರಿ ಆಡಳಿತ ಯೋಜನಾಧಿಕಾರಿಗಳಾದ ಶ್ರೀಯುತ ಸೋಮನಾಥ್.ಕೆ ಇವರು ಹಾರೈಸಿದರು.
ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಮಲ್ಲಾಪುರ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಪೂಜ್ಯರ ಮಾತಿನಂತೆ “ಹಸಿದವನಿಗೆ ಮೀನನ್ನು ಕೊಡುವ ಬದಲು,ಮೀನನ್ನು ಹಿಡಿಯುವುದನ್ನ ಕಲಿಸಬೇಕೆಂಬಂತೆ” ಸಾಲವನ್ನ ನೀಡಿ ಮರುಪಾವತಿಗೆ ಆಶಾಕಿರಣದಂತ ಉದ್ಯೋಗ ಸೃಷ್ಠಿಸುವುದು ಅವಶ್ಯವೆಂದು ಸ್ವ-ಉದ್ಯೋಗಧಾರಿತ ತರಬೇತಿಯನ್ನ ತನ್ನ 4 ತರಬೇತಿ ಸಂಸ್ಥೆಗಳ ಮುಖೇನ ತರಬೇತಿ ನೀಡುತ್ತಿದ್ದು ಈ ಅವಕಾಶವನ್ನ ಸದ್ಭಳಕೆ ಮಾಡಕೊಳ್ಳಬೇಕು ಹಾಗೂ ಹೈನುಗಾರಿಕೆ ತರಬೇತಿಗೆ ಭಾಗವಹಿಸಿದ ಶಿಭಿರಾರ್ಥಿಗಳಿಗೆ ಸಂಸ್ಥೆಯ ರೂಪುರೇಷೆಗಳನ್ನು, ತರಬೇತಿಯ ವಿಷಯಗಳ ಮಾಹಿತಿಯನ್ನ ತಿಳಿಸಿದರು.
ಯೋಜನೆಯ ಜಂಟಿ ಬಾಧ್ಯಾತ ಸಂಘಗಳ ಫಲಾನುಭವಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು 5 ದಿನಗಳ ಕಾಲ ದಿನಾಂಕ: 10.07.2018 ರಿಂದ 14.07.2018ರವರೆಗೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಪ್ರಾಯೋಜಿತ ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರಿನಲ್ಲಿ ಹಮ್ಮಿಕೊಂಡಿದ್ದು ಈ ತರಬೇತಿಯಲ್ಲಿ ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದು, ಮೈಸೂರು ಮತ್ತು ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಒಟ್ಟು 58 ಫಲಾನುಭವಿ ಸದಸ್ಯರು ಭಾಗವಯಿಸಿದ್ದಾರೆ.
ತರಬೇತಿಯ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರೂಪಣೆ, ಸ್ವಾಗತ ಮತ್ತು ಧನ್ಯವಾದ ಕಾರ್ಯಕ್ರಮಗಳನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀ ಶಿವಕುಮಾರ ಇವರು ನೆರವೇರಿಸಿಕೊಟ್ಟರು.

Leave a Reply

Your email address will not be published. Required fields are marked *