NewsTechnology

ಸೋಲಾರ್ ಗ್ರಾಮ ಉದ್ಘಾಟನೆ

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕು ಮತ್ತು ಸೆಲ್ಕೋ ಸೋಲಾರ್ ಪ್ರೈ. ಲಿ. ಕಾರ್ಕಳ ಹಾಗೂ ಗ್ರಾಮ ಪಂಚಾಯತ್ ಎರ್ಲಪಾಡಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಾಂತರಗೋಳಿ ಹಾಗೂ ಗೋವಿಂದೂರು ಇವರ ಸಹಯೋಗದೊಂದಿಗೆ ಎರ್ಲಪಾಡಿ ಸೋಲಾರ್ ಗ್ರಾಮ ಯೋಜನೆಗೆ ಎರ್ಲಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ವಿದ್ಯುತ್ ಇರುವಂತ ಅನೇಕ ಭಾಗಗಳಿಗೆ ಸೋಲಾರ್ ದೀಪ ಅಳವಡಿಕೆ ಅಗತ್ಯತೆ ಇದ್ದು ಗ್ರಾಮೀಣ ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಿಂದ ವಿದ್ಯುತ್ ಅಡಚನೆ ಉಂಟಾಗುತ್ತಿರುವುದು ಸಾಮಾನ್ಯವಾಗಿದ್ದು ಇಂತಹ ಭಾಗಗಳಿಗೆ ಪರ್ಯಾಯ ಇಂಧನವಾದ ಸೋಲಾರ್ ದೀಪಗಳ ಅಳವಡಿಕೆ ಅನಿವಾರ್ಯ ಹಾಗೂ ಎರ್ಲಪಾಡಿ ಗ್ರಾಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಸೋಲಾರ್ ಗ್ರಾಮವನ್ನಾಗಿ ರೂಪಿಸುತ್ತಿರುವುದು ಶ್ಲಾಘನೀಯ ಕಾರ್ಯ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ 10 ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್ ರವರು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಕೆ.ಮಹಾವೀರ ಅಜ್ರಿಯವರು ಮಾತನಾಡಿ ಹಸಿರು ಇಂಧನ ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವ್ರೃದ್ಧಿ ಯೋಜನೆಯು ಪ್ರೊತ್ಸಾಹ ನೀಡುತ್ತಾ ಬಂದಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕಾಂತರಗೋಳಿ ಹಾಗೂ ಗೋವಿಂದೂರು ಭಾಗದ ಫಲಾನುಭವಿಗಳಿಗೆ ಸೋಲಾರ್ ಕಿಟ್‍ಗಳನ್ನು ವಿತರಿಸಲಾಯಿತು. ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸೆಲ್ಕೋ ಸೋಲಾರ್‍ನ ಜನರಲ್ ಮ್ಯಾನೇಜರ್ ಗುರುಪ್ರಕಾಶ್ ಶೆಟ್ಟಿ, ಬೈಲೂರು ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ತಾಲೂಕು ಪಂಚಾಯತ್ ಸದಸ್ಯ ನಿರ್ಮಲ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಮಲಾಕ್ಷ ನಾಯಕ್, ಉದಯ ಕುಮಾರ್ ಹೆಗ್ಡೆ, ಮಂಜುನಾಥ್, ಹರೀಶ್ ಪೂಜಾರಿ, ಅಬ್ದುಲ್ ಸಲಾಂ, ಧರ್ಮರಾಜ್ ಕುಮಾರ್, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಕೃಷ್ಣ ಟಿ ಸ್ವಾಗತಿಸಿ, ಸೇವಾಪ್ರತಿನಿಧಿ ಸುನೀಲ್ ಕುಮಾರ್ ವಂದಿಸಿ, ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ವಲಯದ ಮೇಲ್ವಿಚಾರಕರು ಹರೀಶ್ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *