DharmasthalaNews

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಜೀವವಿಮಾ ಸೌಲಭ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾಯೋಜಿತ ಸ್ವಸಹಾಯ ಸಂಘಗಳ ಸದಸ್ಯರಿಗೆ ಜೀವಭದ್ರತಾ ವಿಮೆಯ ಕಾರ್ಯಕ್ರಮವನ್ನು 2016ರಿಂದ ಜಾರಿಗೆ ತಂದಿದ್ದು, 2018-19ರ ಸಾಲಿಗೆ ಭದ್ರತಾ ವಿಮಾ ಪ್ರಿಮಿಯಮ್ ಮೊತ್ತವನ್ನು ಭಾರತೀಯ ಜೀವವಿಮಾ ನಿಗಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು  ವರ್ಗಾಯಿಸಿದರು.

ಈ ಜೀವಭದ್ರತಾ ವಿಮಾ ಕಾರ್ಯಕ್ರಮದನ್ವಯ ಯೋಜನೆಯ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಅವರ ಗಂಡ/ಹೆಂಡತಿಗೆ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಪ್ರಕಾರ ಸುಮಾರು 80 ಲಕ್ಷ ಜನರಿಗೆ ಸೌಲಭ್ಯ ದೊರೆಯಲಿದ್ದು, ಇದರ ನಿರ್ವಹಣೆಗಾಗಿ ಭಾರತೀಯ ಜೀವವಿಮಾ ನಿಗಮದ ಮಂಗಳೂರು ವಿಭಾಗೀಯ ಕಛೇರಿಯಲ್ಲಿ ವಿಶೇಷ ವಿಭಾಗವನ್ನು ತೆರೆದಿರುವುದಾಗಿ ವಿಭಾಗೀಯ ಪ್ರಬಂಧಕರಾದ ಶ್ರೀ ವೈ.ಎಸ್.ಅಶೋಕ್‍ರವರು ತಿಳಿಸಿದರು.

ಈ ಸಂಬಂಧ ರೂ. 12.00 ಕೋಟಿ ಮೊತ್ತದ ಪ್ರಿಮಿಯಮ್‍ನ ಚೆಕ್‍ನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಭಾರತೀಯ ಜೀವವಿಮಾ ನಿಗಮದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೀವವಿಮಾ ನಿಗಮದ ಅಧಿಕಾರಿಗಳಾದ ಶ್ರೀ ವೈ.ಎಸ್. ಅಶೋಕ್, ಶ್ರೀ ಎಸ್. ಗುರುರಾಜ್ ರಾವ್, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕರು (ಹಣಕಾಸು) ಶ್ರೀ ಶಾಂತಾರಾಮ್ ಆರ್.ಪೈ ಹಾಗೂ ವಿಮಾ ವಿಭಾಗದ ನಿರ್ದೇಶಕರಾದ ಶ್ರೀ ಅಬ್ರಹಾಮ್‍ರವರು ಹಾಜರಿದ್ದರು.

Leave a Reply

Your email address will not be published. Required fields are marked *