News

ಉಳಿಯ ಕೆರೆ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ರೋಟರಿ ಚಾರಿಟೇಬಲ್ ಟ್ರಸ್ಟ್ ನ ಕೆರೆಗಳ ಪುನರ್ ನವೀಕರಣ ಯೋಜನೆಯಾದ ರೋಟೋಲೆಕ್ಸ್ನಡಿ ಅಲಂಗಾರ್ ಉಳಿಯ ಕೆರೆಯನ್ನು ಹೂಳೆತ್ತಿ ನವೀಕರಿಸಿದ್ದು ದಿನಾಂಕ 31.07.18 ರಂದು ಉದ್ಘಾಟನೆ ಮಾಡಿ ಕೆರೆಗೆ ಬಾಗಿನ ಅರ್ಪಿಸುವುದರ ಮುಖೇನ ಲೋಕಾರ್ಪಣೆಗೊಳಿಸಲಾಯಿತು.
ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷ ಚಂದ್ರಿಕಾ ಮಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ| ಮುರಳಿಕೃಷ್ಣ ಡಾ ರಶ್ಮಿ ದಂಪತಿಗಳು ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭ ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ, ರೋಟರಿ ಕ್ಲಬ್ ಅಧ್ಯಕ್ಷ ಡಾ ರಮೇಶ್, ಯೋಜನಾಧಿಕಾರಿ ಕೃಷ್ಣ ಟಿ, ಪುರಸಭಾ ಸದಸ್ಯರಾದ ಪಿ.ಕೆ. ಥೋಮಸ್, ಹನೀಫ್ ಅಲಂಗಾರು, ಇಂಜಿನಿಯರ್ ದಿನೇಶ್ ಉಪಸ್ಥಿತರಿದ್ದರು. ಕೆರೆ ನವೀಕರಣಕ್ಕೆ ಯೋಜನೆಯ ವತಿಯಿಂದ ರೂ. 2 ಲಕ್ಷ ದ ಚೆಕ್ಕನ್ನು ಹಸ್ತಂತರಿಸಲಾಯಿತು. ಹರೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಕೇಂದ್ರ ಸಮಿತಿ ಉಪಾಧ್ಯಕ್ಷರು, ವಲಯದ ಒಕ್ಕೂಟದ ಅಧ್ಯಕ್ಷರು, ಒಕ್ಕೂಟದ ಸದಸ್ಯರು, ರೋಟರಿ ಕ್ಲಬ್‍ನ ಸದಸ್ಯರು, ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *