DharmasthalaNews

ನಮ್ಮ ಊರು-ನಮ್ಮ ಶ್ರದ್ಧಾ ಕೇ0ದ್ರ – ರಾಜ್ಯದಾದ್ಯ0ತ ಶ್ರದ್ಧಾ ಕೇ0ದ್ರಗಳ ಸ್ವಚ್ಛತಾ ಅಭಿಯಾನ

ಶ್ರೀ ಕ್ಷೇತ್ರ ಧರ್ಮಸ್ಥಳದಿ0ದ ಶುಭಾಶಯಗಳು.

ನಿಮ್ಮ ಊರಿನ-ನಿಮ್ಮ ಶ್ರದ್ಧಾಕೇ0ದ್ರವನ್ನು ವರ್ಷಕ್ಕೆ ಎರಡು ಬಾರಿ ಸಾಮೂಹಿಕವಾಗಿ ಸ್ವಚ್ಛತೆಗೊಳಿಸುವ ಸ0ಪ್ರದಾಯವನ್ನು ಬೆಳೆಸಿಕೊ0ಡಿದ್ದೀರಿ. ಇದನ್ನು ಈ ವರ್ಷವೂ ಮು0ದುವರೆಸುವುದು ಈ ಕಾರ್ಯಕ್ರಮದ ಉದ್ಧೇಶವಾಗಿದೆ. ಅ0ದರೆ ನಾವೇ ಮಾಲಿನ್ಯ ಹೊಗಲಾಡಿಸಿದರೆ ಮತ್ತೆ ನಮಗೆ ಮಾಲಿನ್ಯವಾಗದ0ತೆ ಎಚ್ಚರಿಕೆ ಮೂಡುತ್ತದೆ.

ಸ0ತೋಷದ ವಿಚಾರವೆ0ದರೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಯಾತ್ರಿಕರಲ್ಲಿ ಈ ಕಾರ್ಯಕ್ರಮದಿ0ದ ಆಗಿರುವ ಬದಲಾವಣೆಯನ್ನು ಗುರುತಿಸಿದ್ದೇನೆ. ಕ್ಷೇತ್ರದಲ್ಲಿ ಮತ್ತು ಯಾತ್ರಿಕರಲ್ಲಿ ಪರಿಸರ ಮಾಲಿನ್ಯ ಮಾಡದಿರುವ ಮನೋಭಾವ ಕ0ಡುಬರುತ್ತಾ ಇದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾರತದ ಸ್ವಚ್ಛ ಧಾರ್ಮಿಕ ಕ್ಷೇತ್ರ ಎ0ಬ ಪ್ರಶಸ್ತಿ ಬ0ದಿದೆ.

ಈ ಆದರ್ಶ ಮತ್ತು ಸ್ಫೂರ್ತಿಯನ್ನು ಗಮನದಲ್ಲಿರಿಸಿಕೊ0ಡು ನಿಮ್ಮ ಊರಿನ ಶ್ರದ್ಧಾಕೇ0ದ್ರವನ್ನು ಮಲಿನ ಮಾಡದಿರಿ. ಮಲಿನ ಮಾಡಿದ್ದಲ್ಲಿ ಅದನ್ನು ಶುದ್ಧೀಕರಿಸೋಣ ಎನ್ನುವ ಉತ್ಸಾಹವಿರಲಿ.

ಆದ್ದರಿ0ದ ಆಗಸ್ಟ್ 8 ರಿ0ದ 15 ರ ತನಕ ರಾಜ್ಯದಾದ್ಯ0ತ ನಡೆಯಲಿರುವ ಸ್ವಚ್ಛ ಶ್ರದ್ಧಾ ಕೇ0ದ್ರದ ಕಾರ್ಯಕ್ರಮದಲ್ಲಿ ಪಾಲ್ಗೊ0ಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಶ್ರೀ ಮಂಜುನಾಥನ ಅನುಗ್ರಹ ಇರಲಿ.

ಡಾ. ಡಿ. ವೀರೇಂದ್ರ ಹೆಗ್ಗಡೆಯವರು
ಶ್ರೀ ಕ್ಷೇತ್ರ ಧರ್ಮಸ್ಥಳ

Leave a Reply

Your email address will not be published. Required fields are marked *