NewsTraining

ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಶಿಸ್ತುಬದ್ಧ ಕಾರ್ಯ ಚಟುವಟಿಕೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುತ್ತಿದೆ, ಇನ್ನೂ ಹೆಚ್ಚೆಚ್ಚು ಯಶಸ್ವಿಗೊಳ್ಳಬೇಕಾದರೆ ಹೊಸದಾಗಿ ಆಯ್ಕೆಯಾಗಿರುವ/ಯುವ ಪೀಳಿಗೆಯ ಕಛೇರಿ ಸಹಾಯಕರು ಸಂಸ್ಥೆಯ ರೂಪು-ರೇಷೆಗಳನ್ನು ಅಳವಡಿಸಿಕೊಂಡು, ತಮ್ಮ ಕೆಲಸದ ಜವಾಬ್ದಾರಿಯನ್ನ ಅರಿತು ಕ್ಲಪ್ತ ಸಮಯದಲ್ಲಿ ಚತುರತೆಯಿಂದ ಕೆಲಸ ಮುಗಿಸುವ ಕೌಶಲ್ಯವನ್ನ ರೂಡಿಸಿಕೊಂಡಲ್ಲಿ ಕಾರ್ಯಕ್ಷೇತ್ರದ ಕೆಲಸಗಳು ಗೊಂದಲವಿಲ್ಲದೇ ಯಶಸ್ವಿಗೊಳ್ಳುವುದು. ಕೆಲಸ ಮಾಡುವುದರ ಜೊತೆಗೆ ಉತ್ತಮ ಗುರಿಯನ್ನ ಇಟ್ಟಿಕೊಂಡು ಹುದ್ದೆಯಿಂದ ಹುದ್ದೆಗೆ ಮೇಲ್ದರ್ಜೆಗೆ ಏರುವ ಆಶಭಾವನೆಯಿಂದ ಉತ್ತಮ ಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ಆರ್ಥಿಕ ವರ್ಷದ ಘೋಷವಾಕ್ಯ ‘ಮಿತವ್ಯಯ ಸಾಧಿಸೋಣ, ಸಮಾಜಸೇವೆ ಮಾಡೋಣ’, ಆದ್ದರಿಂದ ಸರಿಯಾದ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ವ್ಯವಸ್ಥೆಯನ್ನ ಸುಧಾರಿಸಿಕೊಂಡು ಕಛೇರಿಗಳಲ್ಲಿ ಏನನ್ನಾದರು ಸಾಧಿಸಲೇಬೇಕೆಂಬ ಧ್ಯೇಯ ನಿಮ್ಮದಾಗಿರಲಿ. ಈ ತರಬೇತಿಯು ನಿಮ್ಮ ಬೆಳವಣಿಗೆಗೆ ಉತ್ತೇಜನ ನೀಡುವಂತಾಗಲಿ ಎಂದು ಮೈಸೂರು ತಾಲೂಕು ಯೋಜನಾಧಿಕಾರಿಗಳಾದ ಶ್ರೀಯುತ ಆನಂದ್ ಇವರು ಹಾರೈಸಿದರು. 
ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ. ಮಲ್ಲಾಪುರ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯಕ್ರಮದ ಪ್ರಾಥಮಿಕ ಹಂತದವರೆಗೂ ಫಲಾನುಭವಿಗಳಿಗೆ ತಲುಪಿಸುವಲ್ಲಿ ಕಛೇರಿಯಲ್ಲಿನ ಕೆಲಸ ಪ್ರಮುಖವಾಗಿದ್ದು, ಈ ಕೆಲಸಗಳನ್ನು ನಿರ್ವಹಿಸುವ ಕಛೇರಿ ಸಹಾಯಕರ ಸಾಮಥ್ರ್ಯ ಹಾಗೂ ಜ್ಞಾನವನ್ನ ಹೆಚ್ಚಿಸಲು ಪ್ರತಿ ವರ್ಷಕ್ಕೆ ಒಂದು ತರಬೇತಿಯನ್ನು ಆಯೋಜಿಸಲಾಗುತ್ತಿದೆ. ವರತ್ತಿ ಮತ್ತು ವಯಕ್ತಿಕ ಕೆಲಸಕ್ಕೆ ಪೂರಕ ವಿಷಯಗಳಿದ್ದು, ನುರಿತ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಗುವುದು. ಈ ಅವಕಾಶವನ್ನು ಸದ್ಭಳಕೆ ಮಾಡಕೊಳ್ಳಬೇಕು, ಕುಂದು-ಕೊರತೆಗಳನ್ನು ನೀಗಿಸಿಕೊಳ್ಳಲು ತರಬೇತಿಯಲ್ಲಿ ಪಾಲ್ಘೊಳ್ಳಬೇಕು ಹಾಗೂ ತರಬೇತಿಗೆ ಭಾಗವಹಿಸಿದ ಸಿಬ್ಬಂದಿಗಳಿಗೆ ತರಬೇತಿಯ ವಿಷಯಗಳ ಮಾಹಿತಿಯನ್ನು ತಿಳಿಸಿದರು.
ಯೋಜನೆಯ ಕಛೇರಿ ಸಿಬ್ಬಂದಿಗಳಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿಯನ್ನು 3 ದಿನಗಳ ಕಾಲ ದಿನಾಂಕ: 06.08.2018 ರಿಂದ 08.08.2018ರವರೆಗೆ ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಪ್ರಾಯೋಜಿತ ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರಿನಲ್ಲಿ ಹಮ್ಮಿಕೊಂಡಿದ್ದು ಈ ತರಬೇತಿಯಲ್ಲಿ ಮಾಹಿತಿ, ಪ್ರಾಯೋಗಿಕ ಕಲಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದು, ವಿವಿಧ ತಾಲೂಕಿನ 34 ಕಛೇರಿ ಸಹಾಯಕರು ಭಾಗವಯಿಸಿದ್ದಾರೆ.
ತರಬೇತಿಯ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರೂಪಣೆ, ಸ್ವಾಗತ ಮತ್ತು ಧನ್ಯವಾದ ಕಾರ್ಯಕ್ರಮಗಳನ್ನು ಸಂಸ್ಥೆಯ ಉಪನ್ಯಾಸಕರಾದ ಶ್ರೀ ಶಿವಕುಮಾರ ಇವರು ನೆರವೇರಿಸಿಕೊಟ್ಟರು.

 

Leave a Reply

Your email address will not be published. Required fields are marked *