DharmasthalaNews

ಸ್ವಚ್ಚತಾ ಕಾರ್ಯಕ್ರಮ

ಸಾರ್ವಜನಿಕ ಸ್ಥಳ, ಶಾಲಾ ಆವರಣ, ಗ್ರಾಮಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಕಾರ್ಕಳ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದಿನಾಂಕ 08.08.2018 ರಿಂದ ದಿನಾಂಕ 14.08.18 ರವರೆಗೆ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹೊಸ್ಮರು ವಲಯದ ಸ.ಹಿ.ಪ್ರಾ.ಶಾಲೆ ಪಣಪಿಲ, ಚಾಮುಂಡೇಶ್ವರಿ ದೇವಸ್ಥಾನ, ಸ.ಹಿ.ಪ್ರಾ.ಶಾಲೆ ಪೆಂಚಾರು, ಮುಜಿಲ್ಯಾನಿ ದೇವಸ್ಥಾನ ಈದು, ಬ್ರಹ್ಮ ಮುಗೇರ್ಕಳ ದೇವಸ್ಥಾನ ನೂರಾಳ್‍ಬೆಟ್ಟು, ಸ.ಹಿ.ಪ್ರಾ.ಶಾಲೆ ಈದು, ಕೊಡಮಣಿತ್ತಾಯ ದೇವಸ್ಥಾನ ಗುಮ್ಮೆತ್ತು, ಕಾಳಿಕಾಂಬ ದೇವಸ್ಥಾನ ನೂರಾಳ್‍ಬೆಟ್ಟು ಮತ್ತು ಪೇರಲ್ಕೆ ರಸ್ತೆ ಬದಿಯಲ್ಲಿ ಶಾಲಾ ವಠಾರ ಹಾಗೂ ಶ್ರದ್ದಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮಗಳಲ್ಲಿ ಸುಮಾರು 438 ಮಂದಿ ಸದಸ್ಯರು ಭಾಗವಹಿದ್ದರು. ಊರಿನ ಗಣ್ಯರು, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಹಾಗೂ ಮೇಲ್ವಿಚಾರಕರು ಸೇರಿ ಕಾರ್ಯಕ್ರಮವನ್ನು ನಡೆಸಿದರು. ಪೂಜ್ಯರ ಮಾರ್ಗದರ್ಶನದಲ್ಲಿ ಅವರವರು ವಾಸ ಮಾಡುವ ಪರಿಸರವನ್ನು ಸ್ವಚ್ಚವಾಗಿಟ್ಟರೆ ಗ್ರಾಮ ಮಟ್ಟದಲ್ಲಿ ಮತ್ತು ಇಡಿ ರಾಜ್ಯದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬಹುದು. ಪೂಜ್ಯರ ಈ ಉತ್ತಮ ಕಾರ್ಯಕ್ರಮದಿಂದ ಮಕ್ಕಳಲ್ಲಿ, ಹಾಗೂ ಗ್ರಾಮಸ್ಥರಲ್ಲಿ ಜಾಗೃತಿಯನ್ನು ಉಂಟುಮಾಡಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *