NewsWomen Empowerment

ಗಾಡಗೊಳಿಯಲ್ಲಿ ಹಿರಿಯ ನಾಗರೀಕ ದಿನಾಚರಣೆ

ಹೋಳೆಆಲೂರ: ಹಿರಿಯ ನಾಗರೀಕರ ದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇ.ಧ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರೀಕರಿಗೆ ಸನ್ಮಾನವನ್ನು ಸರಕಾರಿ ಪ್ರಾಥಮಿಕ ಶಾಲೆ ಗಾಡಗೋಳಿ ಗ್ರಾಮದಲ್ಲಿ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹೊಳೆಆಲೂರ ಮೇಲ್ವಿಚಾರಕರಾದ ಶ್ರೀ ಮಲ್ಲೀಕಾರ್ಜುನಗೌಡ ಎನ್ ಸಂಕನಗೌಡ್ರ ಮಾತನಾಡುತ್ತಾ, ಗುರು ಹಿರಿಯರನ್ನು ಗೌರವಿಸಬೇಕು, ಗುರುವಿಲ್ಲದ ಮಠವಲ್ಲ ಹಿರಿಯರಿಲ್ಲದ ಮನೆ ಅಲ್ಲಾ.. ವೃದ್ದಾಶ್ರಮ ಸಂಸ್ಕ್ರತಿ ಈಗ ಹೆಚ್ಚಾಗುತ್ತಿದ್ದು, ಮಕ್ಕಳಿಗೆ ಸರಿಯಾದ ಮಾನವೀಯತೆಯ ಶಿಕ್ಷಣವನ್ನು ಮನೆಯಲ್ಲಿ ಕೊಡಬೇಕು ಮನೆಯಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಸಾಮರಸ್ಯದಿಂದ ಬಾಳಿದ್ದಲ್ಲಿ ಅವಿಭಕ್ತ ಕುಟುಂಬಗಳನ್ನು ಗ್ರಾಮಗಳಲ್ಲಿ ಕಾಣಬಹುದು.
ವಿಶ್ವ ನಾಗರೀಕರ ದಿನಾಚರಣೆ ಅಂಗವಾಗಿ ಶ್ರೀಮತಿ ಸಾಬವ್ವ ಯಲ್ಲಪ್ಪ ನೆರೇಗಲ್ಲ್ ರವರಿಗೆ ಮಹಿಳಾ ಜ್ಞಾನವಿಕಾಸದಿಂದ ಗಾಡಗೋಳಿ ಒಕ್ಕೂಟದ ಅದ್ಯಕ್ಷೆ ಶ್ರೀಮತಿ ನಿರ್ಮಲಾ ಧನ್ಮೂರ ಹಾಗೂ ರೇಣುಕಾ ಜೈನಾಪುರ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ನೀಲಮ್ಮ ಯಲಿಗಾರ, ನಿರ್ಮಲಾ ಗಾಣಿಗೇರ, ಸಾವಿತ್ರಿ ಹಿರೇಹಾಳ ಸೇವಾಪ್ರತಿನಿಧಿ ಮಮತಾಜ್ ನಧಾಪ್ ಹಾಗೂ ಎಲ್ಲಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *