MicrofinanceNews

ಗ್ರಾಮೀಣ ಉದ್ಯಮ ಕ್ಷೇತ್ರಕ್ಕೆ ಸಾಲ ವಿತರಣೆ -ಸಿಡ್ಬಿ ಮತ್ತು- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪಾಲುದಾರಿಕೆ

11.09.2018ರಂದು ಮುಂಬೈಯಲ್ಲಿ ಸಿಡ್ಬಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಮುಸ್ತಾಫಾ ಭಾ.ಆ.ಸೇ. ಇವರ ಘನ ಉಪಸ್ಥಿತಿಯಲ್ಲಿ ಗ್ರಾಮೀಣ ಉದ್ಯಮ ಕ್ಷೇತ್ರಕ್ಕೆ ಆರ್ಥಿಕ ನೆರವನ್ನು ಹೆಚ್ಚಿಸಲು ಸಿಡ್ಬಿ ಹಾಗೂ ಯೋಜನೆಯ ನಡುವೆ ಒಪ್ಪಂದವೊಂದನ್ನು ಮಾಡಿಕೊಳ್ಳಲಾಯಿತು.

ಬಡಜನತೆಯಿಂದ ಸ್ಥಾಪಿಸಲ್ಪಟ್ಟ ಗ್ರಾಮೀಣ ಉದ್ಯಮಗಳಿಗೆ ಕೈಗೆಟಕುವ ಬಡ್ಡಿದರದಲ್ಲಿ ಆರ್ಥಿಕ ನೆರವಿನ ಒದಗಣೆಯನ್ನು ಹೆಚ್ಚಿಸುವುದು ಸಿಡ್ಬಿ ಸಂಸ್ಥೆಯ ಅಧ್ಯಕ್ಷರ ಕನಸಿನ ಯೋಜನೆಯಾಗಿದ್ದು ಇದಕ್ಕಾಗಿ ಬಡಜನರಿಗೆ ಸ್ವಸಹಾಯ ಸಂಘಗಳ ಮೂಲಕ ನೆರವು ಒದಗಿಸುವಲ್ಲಿ ಹೆಸರು ಮಾಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅತ್ಯುತ್ತಮ ಪಾಲುದಾರ ಎಂದು ಸಿಡ್ಬಿಯ ಅಭಿಪ್ರಾಯವಾಗಿತ್ತು. ಬಡಜನತೆಯ ಸಬಲೀಕರಣಕ್ಕೆ ಒಂದು ಮುಖ್ಯ ಸಾಧನವಾಗಿರುವ ಕಿರು ಸಾಲ ಯೋಜನೆಯು ಇತ್ತೀಚಿನ ವರ್ಷಗಳಲ್ಲಿ ತನ್ನ ಗಾತ್ರದಲ್ಲಿ ಬಹಳಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಆದರೂ ಕಿರು ಸಾಲ ಯೋಜನೆಯಲ್ಲಿ ಬಡ್ಡಿದರಗಳು 20-24% ಇರುವುದರಿಂದ ದೊಡ್ಡ ಪ್ರಮಾಣದಲ್ಲಿ ಉದ್ದಿಮೆಗಳನ್ನು ಕೈಗೊಳ್ಳಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕಿನ ನೆರವನ್ನು ಕಡಿಮೆ ದರದಲ್ಲಿ ಮುಟ್ಟಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದಾಗ್ಯೂ ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮ ತಮ್ಮ ಕಾರ್ಯಚಟುವಟಿಕೆಯನ್ನು ಹೆಚ್ಚಿಸಲು ಹಾಗೂ ತಮ್ಮ ವ್ಯವಹಾರವನ್ನು ಉದ್ಯಮದ ಹಂತಕ್ಕೆ ಕೊಂಡೊಯ್ಯುವ ಮಹಾತ್ವಾಕಾಂಕ್ಷೆ ಹೊಂದಿರುವ ಕಿರು ಆರ್ಥಿಕ ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆಯುವವರು ಕಿರು ಆರ್ಥಿಕ ಸಂಸ್ಥೆಗಳು ರೂ.50,000.00 ಕ್ಕಿಂತ ಹೆಚ್ಚು ಮೊತ್ತದ ಸಾಲವನ್ನು ವಿತರಿಸದ ಕಾರಣ ಹಾಗೂ ಬ್ಯಾಂಕುಗಳು ಅಧಿಕ ಸಂಖ್ಯೆಯ ಸಣ್ಣ ಮೊತ್ತದ ಸಾಲಗಳಿಂದ ವಿತರಣೆಯಿಂದ ದೂರಸರಿದಿರುವ ಕಾರಣ ಸಾಲವನ್ನು ಪಡೆದುಕೊಳ್ಳುವಲ್ಲಿ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಈ ಔದ್ಯೋಗಿಕ ಕ್ಷೇತ್ರದಲ್ಲಿ ಮಹಾತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಉದ್ಯಮದ ಹಂತಕ್ಕೆ ಕೊಂಡೊಯ್ಯಲು ಒಂದು ನಿರ್ಣಾಯಕ ಕೊರತೆ ನಿರ್ಮಾಣವಾಗಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಯೋಜನೆಯ ಅಧ್ಯಕ್ಷರೂ ಆಗಿರುವ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ರುಡ್‍ಸೆಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷರೂ ಆಗಿದ್ದು, ಗ್ರಾಮೀಣ ಯುವಜನತೆ ಮತ್ತು ಮಹಿಳೆಯರಲ್ಲಿ ಉದ್ದಿಮೆಶೀಲತೆ ಅಭಿವೃದ್ಧಿಗಾಗಿ ಬಹಳಷ್ಟು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಆರಂಭಿಸಿದ್ದು, ಸಿಡ್ಬಿ ಸಂಸ್ಥೆಯೊಡಗಿನ ಒಪ್ಪಂದ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿರುತ್ತದೆ.

ಸಿಡ್ಬಿಯ ಹಾಗೂ ಯೋಜನೆಯ ನಡುವೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಸ್ಥಾಪನೆಗೆ ರೂ. 3.00 ಲಕ್ಷದವರೆಗಿನ ಅಗತ್ಯ ನೆರವನ್ನು ದೊರಕಿಸುತ್ತದೆ. 4 ಲಕ್ಷ ಗಂಪುಗಳಲ್ಲಿ 42 ಲಕ್ಷ ಸದಸ್ಯರನ್ನು ಹೊಂದಿರುವ ಯೋಜನೆಯು ಕಿರು ಉದ್ಯಮ ಸ್ಥಾಪನೆಗಾಗಿ ಸಿಡಿಯ ಜೊತೆ ಕೈಜೋಡಿಸಿ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು ರೂ. ರೂ.500 ಕೋಟಿ ಮೊತ್ತದ ಬಂಡವಾಳವನ್ನು ತೊಡಗಿಸುವ ಗುರಿಯನ್ನು ಹಮ್ಮಿಕೊಂಡಿದೆ.

ಈ ಒಡಂಬಡಿಕೆಗೆ ಸಹಿ ಹಾಕುವ ಸಂದರ್ಭದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೆಶಕರಾದ ಡಾ| ಎಲ್.ಎಚ್.ಮಂಜುನಾಥ್‍ರವರು ಹಾಗೂ ಸಿಡ್ಬಿಯ ಜನರಲ್ ಮ್ಯಾನೇಜರ್ ಶ್ರೀ ಎಸ್.ಪಿ.ಸಿಂಗ್‍ರವರು, ಸಿಡ್ಬಿಯ ಡಿ.ಎಂ.ಡಿ ಶ್ರೀ ಅಜಯ್ ಕುಮಾರ್ ಕಪೂರ್‍ರವರು ಹಾಗೂ ಸಿಡ್ಬಿಯ ಎಸ್.ಎಪ್.ಎಂ.ಸಿ. ವಿಭಾಗದ ಮುಖ್ಯ ಮಹಾ ಪ್ರಬಂಧಕರಾದ ಶ್ರೀ ಪ್ರಕಾಶ್ ಕುಮಾರ್‍ರವರು ಈ ಸಂದರ್ಭ ಹಾಜರಿದ್ದರು.

(ಡಾ| ಎಲ್.ಎಚ್.ಮಂಜುನಾಥ್)
ಕಾರ್ಯನಿರ್ವಾಹಕ ನಿರ್ದೇಶಕರು

3 thoughts on “ಗ್ರಾಮೀಣ ಉದ್ಯಮ ಕ್ಷೇತ್ರಕ್ಕೆ ಸಾಲ ವಿತರಣೆ -ಸಿಡ್ಬಿ ಮತ್ತು- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪಾಲುದಾರಿಕೆ

  1. I am interested in ur environment to do work so plz give such opportunity
    My contact number is 8951 97 5460 thank you

Leave a Reply

Your email address will not be published. Required fields are marked *