ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕು ಅಖಿಲ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಬೈಲೂರು ವಲಯ, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೌಡೂರು ಕಲಾ ಕೇಂದ್ರ ರಂಗನಪಲ್ಕೆ ಬೈಲೂರಿನಲ್ಲಿ ದಿನಾಂಕ 03.09.2018 ರಿಂದ 10.09.2018 ರ ವರೆಗೆ 1254 ನೇ ಮದ್ಯವರ್ಜನ ಶಿಬಿರವು ಶ್ರೀ ತ್ರಿವಿಕ್ರಮ ಕಿಣಿ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ದಿನಾಂಕ 03.09.2018 ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಲೂಸಿ ಸಲ್ಡಾನ ಕೌಡೂರು ಸಭಾಭವನ ಮಾಲಕರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀ ಸುಮಿತ್ ಶೆಟ್ಟಿ, ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ , ಜಯಕುಮಾರ್ ಜೈನ್ ಅಧ್ಯಕ್ಷರು, ಪ್ರಗತಿಬಂಧು ಕೇಂದ್ರ ಸಮಿತಿ, ಅಬ್ದುಲ್ ಸಲಾಂ ವಲಯಾಧ್ಯಕ್ಷರು, ಯೋಜನಾಧಿಕಾರಿ ಕ್ಷುಷ್ಣ ಶೆಟ್ಟಿ, ಇತರ ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ದಿನಾಂಕ 10.09.18 ರಂದು ಕುಟುಂಬ ದಿನದಲ್ಲಿ ಕೇಂದ್ರ ಕಛೇರಿಯ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ರವರು ಮಾಹಿತಿ ನೀಡಿದರು.
ದಿನಾಂಕ 10.09.2018 ರ ಸಮಾರೋಪ ಕಾರ್ಯಕ್ರಮವನ್ನು ಕಮಲಾಕ್ಷ ನಾಯಕ್ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಮಾನ್ಯ ಶಾಸಕರಾದ ಶ್ರೀ ವಿ ಸುನೀಲ್ ಕುಮಾರ್, ಮಾಜಿ ಶಾಸಕರಾದ ಶ್ರೀ ಎಚ್ ಗೋಪಾಲ್ ಭಂಡಾರಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾಲಿನಿ ಜೆ ಶೆಟ್ಟಿ, ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ಶೀ ಮಹಾವೀರ ಅಜ್ರಿ, ಕಟ್ಟಡದ ಮಾಲಕರಾದ ಶ್ರೀ ಲಾರೆನ್ಸ್ ಸಲ್ಡಾನ, ಶಿಬಿರಾಧಿಕಾರಿ ಗಣೇಶ್ ಆಚಾರ್ಯ, ಆರೋಗ್ಯ ಸಹಾಯಕಿ ಚಿತ್ರ ಹಾಗೂ ಇತರ ಗಣ್ಯರು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಕಟ್ಟಡ ಮಾಲಿಕರಾದ ಶ್ರೀ ಲಾರೆನ್ಸ್ ಸಲ್ಡಾನರವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ನೀರೆ ರವೀಂದ್ರ ನಾಯಕ್ರವರು ನೆರವೇರಿಸಿ, ಮೇಲ್ವಿಚಾರಕರು ಹರೀಶ್ ಆಚಾರ್ಯ ನಿರೂಪಿಸಿದರು. ಅಬ್ದುಲ್ ಸಲಾಂ ಧನ್ಯವಾದ ಸಮರ್ಪಿಸಿದರು.
ಕೃಷ್ಣ ಟಿ
ಯೋಜನಾಧಿಕಾರಿ