DharmasthalaEventsNews

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಜನಜಾಗೃತಿ ಜಾಥಾ, ಸಮಾವೇಶ, ಮದ್ಯ ಮುಕ್ತರಿಗೆ ಅಭಿನಂದನಾ ಸಮಾರಂಭ

ತಿ.ನರಸೀಪುರ : ಅಕ್ಟೋಬರ್-02 ಅಂದಕೂಡಲೇ ನೆನಪಾಗುವುದು ಗಾಂಧೀಜಯಂತಿ ಭಾರತ ಮಾತೆಯನ್ನು ಅವಳ ಮಕ್ಕಳೇ ನಡೆಸಿಕೊಂಡು ಹೋಗಬೇಕೇ ಹೊರತು ಪರಕೀಯರಲ್ಲ ಎಂಬ ಚಿಂತನೆಯೊಂದಿಗೆ ಬ್ರಿಟೀಷರ ವಿರುದ್ಧ ಶಾಂತಿಯುತ ಹೋರಾಟ ನಡೆಸಿದರು. ಅಹಿಂಸೆಯಿಂದಲೇ ಸ್ವಾತಂತ್ರ್ಯತಂದು ಕೊಟ್ಟರು. ದುಶ್ಚಟ ಮುಕ್ತ ಸ್ವಚ್ಛ ರಾಮರಾಜ್ಯದ ಕನಸನ್ನು ಕಂಡರು. ಆದರೆ ಕನಸು ಕನಸಾಗಿಯೇ ಸಾಗಿದೆ. ಪರಿಸರದ ಮಾಲಿನ್ಯತೆ ಒಂದೆಡೆಯಾದರೆ ದುಶ್ಚಟಗಳಿಂದ ಎಲ್ಲಾ ಕಳೆದುಕೊಳ್ಳುತ್ತಿರುವ ಕುಟುಂಬಗಳು ಇನ್ನೊಂದೆಡೆ. ಈ ಸಮಸ್ಯೆಯನ್ನು ಮನಗಂಡ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ಜನಜಾಗೃತಿಗೊಳಿಸುವ ಕೆಲಸಕ್ಕೆ ಮುಂದಾದರು. ಪ್ರತೀ ವರ್ಷ ಆಗಸ್ಟ್ ಹಾಗೂ ಜನವರಿ ತಿಂಗಳಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಪರಿಸರದ ಸ್ವಚ್ಛತೆ ಬಗ್ಗೆ ಕಾರ್ಯಕ್ರಮ ಕೈಗೊಂಡು ತಾಲೂಕಿನಾಧ್ಯಂತ ದೇವಸ್ಥಾನ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ಪ್ರಸ್ತುತ ಇದೇ ಕಾರ್ಯಕ್ರಮವನ್ನು ಇನ್ನಷ್ಟು ಉತ್ತಮ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಜನಜಾಗೃತಿ ಜಾಥಾ, ಸಮಾವೇಶ, ಮದ್ಯ ಮುಕ್ತರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ದಿವ್ಯ ಸಾನಿಧ್ಯ:- ಶ್ರೀ ಶ್ರೀ ಸೋಮನಾಥಸ್ವಾಮಿಗಳವರು, ಶ್ರೀ ಆದಿಚುಂಚನಗಿರಿ ಶಾಖಾ ಮಠ ಮೈಸೂರು.
ನವರಾತ್ರಿ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ತಾಯಿಯ ಬೇರು ಇದ್ದಹಾಗೆ ಈ ಸಂಸ್ಥೆಯು ಒಂದು ಕುಟುಂಬದ ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಅಭಿವೃದ್ಧಿಯಾಗಲು ಯಾವ ಬ್ಯಾಂಕಿನವರು ಮಾಡದ ಕೆಲಸವನ್ನು ಈ ಸಂಸ್ಥೆಯು ಮಾಡುತ್ತಿದ್ದು, ಗಾಂಧೀಜಯಂತಿಯ 150ನೇ ಹುಟ್ಟು ಹಬ್ಬದ ಪ್ರಯುಕ್ತ ಈ ಕಾರ್ಯಕ್ರಮವನ್ನು ಮಾಡುವುದು ತುಂಬಾ ಸಂತೋಷದ ವಿಷಯ ಎಂದರು. ಕೃಷಿ ಮತ್ತು ಕೃಷಿಯೇತರ ಅನುದಾನಗಳನ್ನು ವಿತರಣೆ ಮಾಡಿದರು.

ಶ್ರೀ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ವಾಟಾಳು ಸೂರ್ಯಸಿಂಹಾಸನ ಮಠ, ವಾಟಾಳು.
ಕಾರ್ಯಕ್ರಮವನ್ನು ಕುರಿತು ಶುಭಹಾರೈಸಿದರು. ಹಾಗೂ ಯೋಜನೆಯ ಇದುವರೆಗಿನ ಸಾಧನಾ ವರದಿ ಬಿಡುಗಡೆ ಮಾಡಿದರು.

ಅಧ್ಯಕ್ಷತೆ:- ಶ್ರೀ ವಜ್ರೇಗೌಡರವರು, ಅಧ್ಯಕ್ಷರು, ಜನಜಾಗೃತಿ ಸಮಾವೇಶ ವ್ಯವಸ್ಥಾಪನಾ ಸಮಿತಿ, ತಿ.ನರಸೀಪುರ ತಾಲೂಕು.
ಕಾರ್ಯಕ್ರಮವನ್ನು ಕುರಿತು ಶುಭಹಾರೈಸಿದರು. ಹಾಗೂ ಮದ್ಯಮುಕ್ತರಿಗೆ ಅಭಿನಂದನಾ ಪತ್ರ ವಿತರಣೆ ಮಾಡಿದರು.

ಕಾರ್ಯಕ್ರಮದ ಉದ್ಘಾಟನೆ:- ಸನ್ಮಾನ್ಯ ಶ್ರೀ ಆರ್.ಧ್ರುವನಾರಾಯಣ್‍ರವರು, ಲೋಕಸಭಾ ಸದಸ್ಯರು, ಚಾಮರಾಜನಗರ ಕ್ಷೇತ್ರ.
ಸಂಸ್ಥೆಯು ರಾಜ್ಯದೆಲ್ಲಡೆ ಸಂಘಗಳನ್ನು ಮಾಡುವ ಮೂಲಕ ಸಂಘದ ಸದಸ್ಯರನ್ನು ಆರ್ಥಿಕವಾಗಿ ಸಧೃಡರನ್ನಾಗಿ ಮಾಡಿಸುತ್ತಿದೆ. ಈ ಪ್ರಗತಿನಿಧಿಯನ್ನು ಮಹಿಳೆಯರು ದುಂದುವೆಚ್ಚ ಮಾಡದೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದಾದಲ್ಲಿ ಈ ದೇಶ ಸಾಕ್ಷರತಾ ದೇಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಕ್ಟೋಬರ್ 2 ಪೂಜ್ಯ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಪೂಜ್ಯ ಬಾಪೂಜಿಯವರು ದುಶ್ಚಟಮುಕ್ತ ಸಮಾಜದ ಕನಸು ಕಂಡವರು. ಅವರ ಕನಸಿನ ಭಾರತದಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳ ಶಾಪ ತಟ್ಟದಿರಲಿ ಎಂದು ಪ್ರಾರ್ಥಿಸಿದವರು. ಅವರ 18 ರಚನಾತ್ಮಕ ಕಾರ್ಯಕ್ರಮದಲ್ಲಿ 3ನೇ ಕಾರ್ಯಕ್ರಮವೇ ಪಾನ ನಿಷೇಧ. ಬೆಂಕಿ ದೇಹವನ್ನು ಸುಟ್ಟರೆ, ಮದ್ಯಪಾನ ದೇಹ ಮತ್ತು ಆತ್ಮ ಎರಡನ್ನೂ ಸುಡುತ್ತದೆ ಎಂದರು. ಮದ್ಯಮುಕ್ತ ಕುಟುಂಬ ಆನಂದ ಸಾಗರ. ಪ್ರತಿಯೊಬ್ಬರು ದುಶ್ಚಟವೆಂಬ ಅನಿಷ್ಠ ಅಭ್ಯಾಸಕ್ಕೆ ಬಲಿಬೀಳದೆ ಸಮೃದ್ಧ ಭಾರತವನ್ನು ಕಟ್ಟಬೇಕೆಂದರು. ಈ ವರ್ಷ ಪೂಜ್ಯ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯ ಸಂಭ್ರಮ. ಈ ನಿಟ್ಟಿನಲ್ಲಿ ಯೋಜನೆಯು ಗಾಂಧಿಸ್ಮøತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕೆ ಗಾಂಧೀ ವಿಚಾರಧಾರೆಗಳ ಕಾರ್ಯಾಗಾರಗಳಾದ ಜನಜಾಗೃತಿ ಜಾಥಾ, ಪಾನಮುಕ್ತರ ಸಮಾವೇಶ ಹಮ್ಮಿಕೊಂಡು ವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿರುವುದು ಉತ್ತಮ ವಿಚಾರ ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಸಹಕಾರ ನೀಡಬೇಕು ಎಂದರು.

ಸನ್ಮಾನ್ಯ ಶ್ರೀ ಎಂ.ಅಶ್ವಿನ್‍ಕುಮಾರ್‍ರವರು, ಶಾಸಕರು, ತಿ.ನರಸೀಪುರ ವಿಧಾನ ಸಭಾ ಕ್ಷೇತ್ರ.
ಧರ್ಮಸ್ಥಳ ಸಂಸ್ಥೆಯು ಗ್ರಾಮೀಣ ಪ್ರದೇಶದ ಜನರಿಗೆ ಬ್ಯಾಂಕಿನ ವ್ಯವಹಾರಗಳ ಶಿಸ್ತಿನ ಬಗ್ಗೆ ಕಲಿಸಿದ ಏಕೈಕ ಸಂಸ್ಥೆಯೇ ಧರ್ಮಸ್ಥಳ ಸಂಸ್ಥೆ. ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಅಭಿವೃದ್ಧಿಯಾಗಲು ಈ ಸಂಸ್ಥೆಯು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಈ ಕಾರ್ಯಕ್ರಮದ ಪ್ರಯೋಜನವನ್ನು ಎಲ್ಲಾ ಸದಸ್ಯರು ಬಳಸಿಕೊಳ್ಳಲು ತಿಳಿಸಿರುತ್ತಾರೆ.

ಮುಖ್ಯ ಅತಿಥಿಗಳು:- ಶ್ರೀ ವಿ.ವಿಜಯಕುಮಾರ್ ನಾಗನಾಳ, ನಿರ್ದೇಶಕರು, ಶ್ರೀ ಕ್ಷೇ.ಧ.ಗ್ರಾ.ಯೋ(ರಿ.) ಮೈಸೂರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸು 1982ರಲ್ಲಿ ಧರ್ಮಸ್ಥಳದ ರತ್ನಗಿರಿಯಲ್ಲಿ ಬಾಹುಬಲಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಬಡಜನರ ಅಭಿವೃದ್ಧಿಗಾಗಿ ಏನಾದರೊಂದು ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂಬ ಚಿಂತನೆ ಪೂಜ್ಯ ಹೆಗ್ಗಡೆಯವರಿಗೆ ಹೊಳೆಯಿತು. “ಪ್ರಗತಿಗಾಗಿ ಬಂಧುಗಳಾಗೋಣ” ಎಂಬ ಧ್ಯೇಯದೊಂದಿಗೆ ರೈತ ಕುಟುಂಬಗಳನ್ನು ಸೇರಿಸಿ ಶ್ರಮವಿನಿಮಯ, ಉಳಿತಾಯ ಮನೋಭಾವನೆ ಸೇರಿಸಿ ಶ್ರಮವಿನಿಮಯ, ಉಳಿತಾಯ ಮನೋಭಾವನೆಯನ್ನು ಜನರಲ್ಲಿ ಬಿತ್ತಿದರು. ಪೂಜ್ಯರ ಕನಸು ನನಸಾಗುತ್ತಾಹೋಯಿತು. 1995ರಲ್ಲಿ 01 ತಾಲೂಕಿನಿಂದ ಇಂದು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಜನಪ್ರತಿನಿಧಿಗಳು, ಚಿಂತಕರು, ಗಣ್ಯರ ಪ್ರಯತ್ನ ಬೇಡಿಕೆಯಂತೆ 2012ರಲ್ಲಿ ತಿ.ನರಸೀಪುರ ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸಲು ಪೂಜ್ಯರು ಒಪ್ಪಿಗೆ ನೀಡಿದರು. ಇದಾದ ನಂತರ ನಮ್ಮ ತಾಲೂಕಿನಲ್ಲಿ ನಡೆದದ್ದು ಪವಾಡವೇ ಸರಿ. ಒಂದು ಕ್ಷಣ ಅಚ್ಚರಿಗೊಳ್ಳುವ ಬೆಳವಣಿಗೆ, ಸಾಧನೆ ಆಗಿ ಹೋಯಿತು. ಸಾಕಷ್ಟು ಮಂದಿ ಅಧಿಕಾರಿಗಳು, ಕಾರ್ಯಕರ್ತರು, ಹಗಲಿರುಳು ದುಡಿದು ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಸಂಘ ರಚನೆಯಲ್ಲಿ ತೊಡಗಿದರು ಪ್ರಸ್ತುತ 3348 ಗುಂಪುಗಳು ಕಾರ್ಯನಿರ್ವಹಿಸುತ್ತಿದ್ದು, 30167 ಮಂದಿ ಗುಂಪಿನ ಪಾಲುದಾರರಾಗಿರುತ್ತಾರೆ ಎಂದು ತಿಳಿಸಿರು.

ಜನಜಾಗೃತಿ ಜಾಥಾ ಉದ್ಘಾಟನೆ:- ಶ್ರೀ ಹಂದನಹಳ್ಳಿ ಹೆಚ್.ಎಸ್.ಸೋಮಶೇಖರ್, ಅಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆ, ಮೈಸೂರು.
ಜನಜಾಗೃತಿ ಜಾಥಾ ಉದ್ಘಾಟನೆ ಮಾಡಿ ಮಾತನಾಡಿದ ಸೋಮಶೇಖರ್‍ರವರು ಜನಜಾಗೃತಿ ವೇದಿಕೆಗೆ ಕಳೆದ 27 ವರ್ಷಗಳಿಂದ ವ್ಯಸನಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ವೇದಿಕೆ ಸ್ಥಾಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ, ಹತೋಟಿ, ನಿರ್ವಹಣೆ ಕುರಿತಂತೆ ಶ್ರಮಿಸುತ್ತಿದೆ. ಸರಕಾರ ಹೆಚ್ಚುವರಿ ಮದ್ಯದಂಗಡಿ ನೀಡಿದ್ದಲ್ಲಿ ವೇದಿಕೆಯ ಮೂಲಕ ನಡೆಸಿದ ಈ ಪ್ರಯತ್ನ ಸಫಲತೆಯತ್ತ ಸಾಗಲು ಅಡ್ಡಿಯಾಗುವುದಲ್ಲದೆ, ಈ ನಿಟ್ಟಿನಲ್ಲಿ ದುಡಿದ ಎಲ್ಲರಿಗೂ ಬೇಸರ ತಂದಿದೆ. ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಸಮಾನ ಮನಸ್ಕರೊಂದಿಗೆ ರಾಜ್ಯದಲ್ಲಿ ತೀವ್ರ ಪ್ರತಿಭಟನೆ ನಡೆಸುವ ಅನಿವಾರ್ಯತೆ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಶ್ರೀ ನಾಗೇಂದ್ರ ಕುಮಾರ್ ಅಧ್ಯಕ್ಷರು, ತಾಲೂಕು ಪರ್ತಕರ್ತರ ಸಂಘ ತಿ.ನರಸೀಪುರ, ಸಂಜೀವ್ ನಾಯ್ಕ್ ಯೋಜನಾಧಿಕಾರಿಗಳು ತಿ.ನರಸೀಪುರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳಾದ ಹೊನ್ನನಾಯಕ, ಪ್ರಭುಸ್ವಾಮಿ, ಶಿವಶಂಕರಮೂರ್ತಿ, ಕೊಂಗಯ್ಯ, ಕಿರಗಸೂರು ಶಂಕರ್, ಬನ್ನೂರು ನಾರಾಯಣ್, ಶೇಖರ್, ಗೌರವಾನ್ವಿತ ಸಮಿತಿ ಸದಸ್ಯರುಗಳಾದ ಕುಮಾರಸ್ವಾಮಿ, ಜ್ಞಾನೇಂದ್ರಮೂರ್ತಿ, ಅಣ್ಣಯ್ಯ ಹಾಗೂ ತಾಲೂಕಿನ ಎಲ್ಲಾ ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಗೌರವಾನ್ವಿತ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.

 

ಸಂಜೀವ್ ನಾಯ್ಕ್
ಯೋಜನಾಧಿಕಾರಿ

Leave a Reply

Your email address will not be published. Required fields are marked *