AgricultureNews

ಕೃಷಿ ತ್ಯಾಜ್ಯ ಲಭ್ಯತೆಯ ಸಮೀಕ್ಷೆ ಕುರಿತಾದ ತರಬೇತುದಾರರ ತರಬೇತಿ

ಗ್ರಾಮಾಭಿವೃದ್ಧಿ ಯೋಜನಾ ವ್ಯಾಪ್ತಿಯ ರೈತರಲ್ಲಿ ಕೃಷಿ ತ್ಯಾಜ್ಯ ಲಭ್ಯತೆಯ ಸಮೀಕ್ಷೆ ಕುರಿತಾದ ಒಂದ ದಿನದ ತರಬೇತುದಾರರ ತರಬೇತಿಯನ್ನು ಕೃಷಿ ಮೇಲ್ವಿಚಾರಕರಿಗೆ ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ-ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಂಜಾಬಿನ ‘ಪಂಜಾಬ್ ಬದಲಿ ಇಂಧನ ಅಭಿವೃದ್ಧಿ ಸಂಸ್ಥೆ’ಯ ಸಹಯೋಗದೊಂದಿಗೆ ಕೇಂದ್ರ ಕಛೇರಿ ಕೃಷಿ ವಿಭಾಗದ ನೇತೃತ್ವದಲ್ಲಿ ‘ಪರ್ಯಾಯ ಇಂಧನ ತಯಾರಿಕೆಗೆ ಅಗತ್ಯವಿರುವ ‘ಎಥೆನಾಲ್’ ಮತ್ತು ಬಾಯ್ಲರ್‍ಗಳಿಗೆ ಅಗತ್ಯವಿರುವ ‘ಚಪ್ಪಡಿ’ಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಸಂಸ್ಥೆಯು ತಾಲೂಕು ವ್ಯಾಪ್ತಿಯಲ್ಲಿ ಲಭ್ಯವಿರುವ ಕೃಷಿ ತ್ಯಾಜ್ಯಗಳ ಅಂಕಿ ಅಂಶ ಸಂಗ್ರಹಣೆಯನ್ನು ತಾಲೂಕು ಮಟ್ಟದಲ್ಲಿ ನಡೆಸುವ ಉದ್ದೇಶದಿಂದ ಕಲಬುರ್ಗಿ, ಕೊಪ್ಪಳ ಮತ್ತು ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಕೃಷಿ ಮೇಲ್ವಿಚಾರಕರಿಗೆ ತರಬೇತುದಾರರ ತರಬೇತಿಯನ್ನು ಆಯೋಜಿಸಲಾಗಿತ್ತು.
ತರಬೇತಿಯನ್ನು ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಸೀತಾರಾಮ್ ಶೆಟ್ಟಿ ಇವರು ಉದ್ಘಾಟಿಸಿ, ಕೃಷಿ ಮೇಲ್ವಿಚಾರಕರು ಈ ಕಾರ್ಯಕ್ರಮದ ಆಳವನ್ನು ಅರಿತು ವಸ್ತುನಿಷ್ಟವಾಗಿ ರೈತರಿಂದ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ವಿ.ಕೆಯ ನಿವೃತ್ತ ಹಿರಿಯ ವಿಜ್ಞಾನಿಗಳಾದ ಡಾ.ಕುಮಾರಸ್ವಾಮಿ ಇವರು ಭಾಗವಹಿಸಿ ಇಂದಿನ ದಿನಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯ ಅವಶ್ಯಕತೆ ಹಾಗೂ ಸಾಂಪ್ರದಾಯಿಕ ಇಂಧನಗಳ ಅವಲಂಬನೆಯಿಂದ ಹೊರಬರಬೇಕಾದ ಅನಿವಾರ್ಯತೆ ಹಾಗೂ ಈ ನಿಟ್ಟಿನಲ್ಲಿ ಕೃಷಿ ತ್ಯಾಜ್ಯದಿಂದ ಪರ್ಯಾಯ ಇಂಧನ ತಯಾರಿಕೆಗೆ ಇರುವ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಿದರು. ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ಪ್ರಾಧ್ಯಾಪಕರಾದ ಡಾ.ಶಿವಮೂರ್ತಿ ಇವರು ಸದ್ರಿ ಸಮೀಕ್ಷೆಯನ್ನು ನಡೆಸುವಾಗ ಗಮನಿಸಬೇಕಾದ ಅಂಶಗಳು ಹಾಗೂ ಪ್ರಶ್ನೋತ್ತರ ನಡೆಸುವ ವಿಧಾನದ ಕುರಿತು ಮಾಹಿತಿ ನೀಡಿದರು. PRESPL ಇದರ ಮುಖ್ಯ ಹಣಕಾಸು ಅಧಿಕಾರಿಯಾದ ಶ್ರೀ ಮಧುಸೂದನ ಶೆಣೈ, ಮನೀಷ್ ಜೈನ್, ಕೇಂದ್ರ ಕಛೇರಿಯ ಕೃಷಿ ನಿರ್ದೇಶಕರಾದ ಶ್ರೀ ಮನೋಜ್ ಮಿನೇಜಸ್, ಯೋಜನಾಧಿಕಾರಿಗಳಾದ ಶ್ರೀ ಲವಕುಮಾರ್, ಜ್ಞಾನವಿಕಾಸ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಸಂತೋಷ್ ರಾವ್ ಪಿ, ಸಿರಿಧಾನ್ಯ ಯೋಜನಾಧಿಕಾರಿಗಾಳದ ಮಹಾಬಲೇಶ್ವರ, ಉಪನ್ಯಾಸಕರುಗಳಾದ ಶ್ರೀ ನಿಂಗಪ್ಪ, ಶ್ರೀ ಜೈವಂತ್ ಮತ್ತು ಶ್ರೀಮತಿ ವಿಜಯಲಕ್ಷ್ಮಿ, ಮೇಲ್ವಿಚಾರಕರಾದ ಶ್ರೀ ಹರೀಶ್ ಶೆಟ್ಟಿ ಇವರುಗಳು ಉಪಸ್ಥಿತರಿದ್ದರು.
ಸಮೀಕ್ಷೆಗಾಗಿ ಮಳೆಯಾಶ್ರಿತ ಕೃಷಿ ಜಮೀನಿನ ಗ್ರಾಮವಾದ ಧಾರವಾಡ ತಾಲೂಕಿನ ಪುಡಲಕಟ್ಟಿ ಗ್ರಾಮದ ಸುಮಾರು 30 ರೈತರೊಂದಿಗೆ ಸಂವಾದವನ್ನು ನಡೆಸಿ ಕೃಷಿ ತ್ಯಾಜ್ಯ ಲಭ್ಯತೆಯ ಅಂಕಿ ಅಂಶವನ್ನು ಗುಂಪು ಚರ್ಚೆಯ ಮೂಲಕ ಸಂಗ್ರಹಿಸುವುದರೊಂದಿಗೆ ತಾಲೂಕು ಮಟ್ಟದ ಸಮೀಕ್ಷೆಯಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 93 ಮಂದಿ ಕೃಷಿ ಮೇಲ್ವಿಚಾರಕರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *