NewsTraining

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ರಂಗವಿಜ್ಞಾನದ ಮೂಲಕ ಸಾಮಥ್ರ್ಯಾಭಿವೃದ್ಧಿ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ರಂಗವಿಜ್ಞಾನದ ಮೂಲಕ ಸಾಮಥ್ರ್ಯಾಭಿವೃದ್ಧಿ ತರಬೇತಿಯನ್ನು ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಸ್ವ-ಸಹಾಯ ಸಂಘದ ಸದಸ್ಯರಿಗೆ, ಸೇವಾಪ್ರತಿನಿಧಿಗಳಿಗೆ ಮತ್ತು ತರಬೇತಿ ಸಹಾಯಕರಿಗೆ ಫಲಾನುಭವಿಗಳಿಗೆ ಆಯೋಜಿಸಲಾದ ಐದು ದಿನಗಳ ರಂಗ ವಿಜ್ಞಾನ ತರಬೇತಿಯ ಉದ್ಘಾಟನೆಯನ್ನು ರಂಗ ನಿರ್ದೇಶಕರಾದ ಡಾ.ಪ್ರಕಾಶ್ ಗರುಡ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ನಾವು ಸಾಮೂಹಿಕ ಬದುಕಿನಲ್ಲಿ ಬದುಕುತ್ತಿದ್ದೇವೆ. ರಂಗಭೂಮಿ ಸಾಮೂಹಿಕ ಬದುಕು ಕಲಿಸುತ್ತದೆ. ನಾಟಕ ಮಾಡಲು ಹಲವರು ಬೇಕು. ನಾಟಕಕ್ಕೆ ಪ್ರೇಕ್ಷಕರು ಸಾಕ್ಷಿ ಪ್ರಜ್ಞೆಯಾಗಿರುತ್ತಾರೆ. ಎಲ್ಲರೂ ಸೇರಿ ಒಂದು ಕಾಲ ಮಿತಿಯಲ್ಲಿ ಪ್ರೇಕ್ಷಕರ ಸಾಕ್ಷಿ ಪ್ರಜ್ಞೆಯಲ್ಲಿ ನಾಟಕವನ್ನು ಪ್ರದರ್ಶಿಸಬೇಕಾಗುತ್ತದೆ. ರಂಗಭೂಮಿಯು ಮನುಷ್ಯ ಅಭಿವ್ಯಕ್ತಿ ಕಲೆಯನ್ನು ಕಲಿತ ತಕ್ಷಣದಿಂದ ಆರಂಭವಾಗಿವೆ ಹಾಗೂ ಮನುಷ್ಯನ ಚರಿತ್ರೆಯ ಜೊತೆಗೆ ಮುಂದುವರೆದಿದೆ. ನಾಟಕ ಹಾಗೂ ರಂಗಭೂಮಿ ಕಲೆ ಈಗಲೂ ಕೂಡ ತನ್ನ ಹಳೆಯ ವೈಭವವನ್ನು ಹಾಗೆಯೇ ಉಳಿಸಿಕೊಂಡಿದೆ ಎಂದರು.
ನಂತರ ಮಾತನಾಡಿದ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ ಪ್ರಕಾಶ್ ಭಟ್ ಇವರು ದಿನನಿತ್ಯ ನಮ್ಮ ಅನುಭವಕ್ಕೆ ಬರುವ ಎಷ್ಟೋ ವಿಷಯಗಳಿರುತ್ತವೆ ಉದಾಹರಣೆಗೆ ಬೆಳಿಗ್ಗೆ ಬೀಸಿ ನೀರು ಇರಲಿಲ್ಲ, ಉಪಾಹಾರ ಸರಿ ಇರಲಿಲ್ಲ ಹೀಗೆ ಹಲವು ಸಂಗತಿಗಳು ನಮ್ಮ ಅನುಭವಕ್ಕೆ ನೀಲುಕಿರುತ್ತವೆ. ಹಾಗೆಯೇ ನಮ್ಮ ದಿನ ನಿತ್ಯದ ಅರಿವಿಗೆ ನಿಲುಕದ ಹÀಲವು ವಿಷಯಗಳು ಕೂಡ ಇರುತ್ತವೆ. ಅವು ನಮ್ಮ ನಿರೀಕ್ಷೆಗೆ ಮೀರಿದ ವಿಷಯಗಳಾಗಿರುತ್ತವೆ. ಇಂತಹ ನಿರೀಕ್ಷೆಗೆ ಮೀರಿದ ವಿಷಯಗಳನ್ನು, ಸತ್ಯಕ್ಕೆ ಅನುಭವಕ್ಕೆ ಮೀರಿದ ಸಂಗತಿಗಳನ್ನು ಜನರಿಗೆ ತಲುಪಿಸಲು ರಂಗ ಮಾಧ್ಯಮ ಬೇಕಾಗುತ್ತದೆ ಎಂದರು.
ನಂತರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿಯವರು ಮಾತನಾಡಿ ಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶಯಗಳನ್ನು ರಂಗ ವಿಜ್ಞಾನದ ಮೂಲಕ ಜನರಿಗೆ ತಲುಪಿಸುವಲ್ಲಿ ಸೇವಾ ಪ್ರತಿನಿಧಿಗಳು ಹಾಗೂ ತರಬೇತಿ ಸಹಾಯಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಂಗ ವಿಜ್ಞಾನ ತರಬೇತಿಯ ಸಂಯೋಜಕರಾದ ಶ್ರೀ ಚಂದ್ರಹಾಸ ಭಂಡಾರಿ, ಉಪನ್ಯಾಸಕರಾದ ಶ್ರೀ ನಿಂಗಪ್ಪ ಜಿ, ಜೈವಂತ್ ಪಟಗಾರ ಉಪಸ್ಥಿತರಿದ್ದರು. ವಿವಿಧ ತಾಲೂಕಿನಿಂದ 51 ಮಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *