AgricultureNewsTraining

ಸಿ.ಎಚ್.ಎಸ್.ಸಿ ಪ್ರಬಂಧಕರು ಮತ್ತು ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

ಸಿ.ಎಚ್.ಎಸ್.ಸಿ ಪ್ರಬಂಧಕರ ಮತ್ತು ಕಛೇರಿ ಸಹಾಯಕರ ಸಾಮಥ್ರ್ಯಾವನ್ನು ಹೆಚ್ಚಿಸಲು ಈ ತರಬೇತಿಯನ್ನು ಆರಂಭಿಸಲಾಗಿದ್ದು, ಪ್ರಮುಖವಾಗಿ ಸಿ.ಎಚ್.ಎಸ್.ಸಿ ಕಾರ್ಯಕ್ರಮವು ಸಂಸ್ಥೆ ಮತ್ತು ಸರಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, 6 ವರ್ಷಗಳ ಒಡಬಂಡಿಕೆಯಿಂದ ಆರಂಭವಾಗಿದ್ದು, ಪ್ರಸ್ತುತವಾಗಿ ಪೂಜ್ಯಾರ ಆಶಯದಂತೆ ನಿರ್ವಹಣೆಯಾಗಿತ್ತಿದ್ದು, ಕೃಷಿ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮವಾಗಿದ್ದು ಅನೇಕ ಬಡ ರೈತರಿಗೆ ಈ ಕಾರ್ಯಕ್ರಮ ತಲುಪಬೇಕಾದರೆ ತಮ್ಮೆಲ್ಲರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಈ ಕಾರ್ಯಕ್ರಮದ ವಿಷಯದ ಕುರಿತು ಕುಂದು-ಕೊರತೆಯಿದ್ದಲ್ಲಿ ಹಿರಿಯ ಅಧಿಕಾರಿ ವರ್ಗ ಇಲ್ಲವೇ ತರಬೇತಿಯ ಮೂಲಕ ಪರಿಹರಿಸಿಕೊಂಡು ಮುನ್ನುಗುವ ಛಲ ನಿಮ್ಮಲ್ಲಿರಲಿ, ನಿಮ್ಮಲ್ಲಿರುವ ಪ್ರತಿಭೆಯನ್ನು ಪೋಷಿಸಿರಿ ಎಂದು ಮೈಸೂರು ಜಿಲ್ಲಾ ನಿರ್ದೇಶಕರಾದ ಶ್ರೀಯುತ ವಿಜಯ್ ನಾಗನಳರವರು ಶುಭಕೋರಿದರು.
ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಪ್ರಾಯೋಜಿತ ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಇಲ್ಲಿ ಯೋಜನೆಯ ಸಿ.ಎಚ್.ಎಸ್.ಸಿ ಪ್ರಬಂಧಕರು ಮತ್ತು ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿಯ ಒಂದು ದಿನದ ಕಾರ್ಯಗಾರದಲ್ಲಿ ಮೈಸೂರು, ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ವಿವಿಧ ತಾಲೂಕಿನ ಪ್ರಬಂಧಕರು ಹಾಗೂ ಕಛೇರಿ ಸಹಾಯಕರು ಸೇರಿ ದಿನಾಂಕ:22.11.2018 ರಂದು 41 ಮಂದಿ ಹಾಗೂ ದಿನಾಂಕ: 23.11.2018 ರಂದು 43 ಮಂದಿ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿರುತ್ತಾರೆ. ತರಬೇತಿಯು ಪ್ರಾಯೋಗಿಕ ಮತ್ತು ಚರ್ಚೆ ಹಾಗೂ ವಿವಿಧ ಚಟುವಟಿಕೆಗಳನ್ನು ಹೊಂದಿರುತ್ತದೆ.
ಈ ಕಾರ್ಯಕ್ರಮದ ಉದ್ಘಾಟನೆಯ ನಿರೂಪಣೆಯನ್ನು ಮೈಸೂರು ಪ್ರಾದೇಶಿಕ ಕಛೇರಿಯ ಸಿ.ಎಚ್.ಎಸ್.ಸಿ ಸಮನ್ವಯಾಧಿಕಾರಿಯಾದ ಶ್ರೀಯುತ ಸತೀಶ್‍ರವರು ನಡೆಸಿಕೊಟ್ಟರು ಹಾಗೂ ಸ್ವಾಗತ ಮತ್ತು ಧನ್ಯಾವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರರವರು ನಡೆಸಿಕೊಟ್ಟರು. ಉಪಸ್ಥಿತಿ: ಸಿ.ಎಚ್.ಎಸ್.ಸಿ ನಿರ್ದೇಶಕರಾದ ಶ್ರೀಯುತ ಗಣೇಶ್ ಕುಡ್ವಾ, ಕೇಂದ್ರಕಛೇರಿ ಸಿ.ಎಚ್.ಎಸ್.ಸಿ ಸಮನ್ವಯಾಧಿಕಾರಿಗಳಾದ ಶ್ರೀಯುತ ಹರೀಶ್ ಮತ್ತು ಮಾಧವ್ ಹಾಗೂ ಕೇಂದ್ರ ಕಛೇರಿಯ ಪ್ರಬಂಧಕಾರದ ಶ್ರೀಯುತ ಚೇತನ್‍ರವರು ಉಪಸ್ಥಿತರಿದ್ದರು.

One thought on “ಸಿ.ಎಚ್.ಎಸ್.ಸಿ ಪ್ರಬಂಧಕರು ಮತ್ತು ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ

  1. Hello,my self Preeti mathapati.
    Iam completed BBA.
    I would like to take an opportunity to work in your institution please consider my request and give me an opportunity to work in your institution
    Thank you

Leave a Reply to Preeti Mallikarjunyya mathapati Cancel reply

Your email address will not be published. Required fields are marked *