“ಮಾಡುವ ಕೆಲಸವನ್ನು ಶಿಸ್ತಿನಿಂದ ಅಚ್ಚುಕಟ್ಟಾಗಿ ಮಾಡಿದ್ದಲ್ಲಿ, ಆಸಕ್ತಿ ಮೂಡುವುದು, ಆಸಕ್ತಿಯಿಂದ ಹೆಚ್ಚಿನ ಕಲಿಕೆಯಾಗಿ ಹೊಸ ಅವಕಾಶವನ್ನು ಕಂಡುಕೊಳ್ಳಲು ಸಾಧ್ಯ. ಆದರಿಂದ ಈ ತರಬೇತಿಯಲ್ಲಿ ನೀಡಲಾಗುವ ಮಾಹಿತಿ ಪಡೆದು ತಮ್ಮೆಲ್ಲರ ಕುಂದುಕೊರತೆಯನ್ನು ನೀಗಿಸಿಕೊಂಡು ಯಶಸ್ವಿಗೊಳ್ಳಿರಿ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ (ರಿ.) ಮೈಸೂರಿನ ಪ್ರಾದೇಶಿಕ ಕಛೇರಿಯ ಗುಂಪು ಲೆಕ್ಕ ಪರಿಶೋಧನೆ ಯೋಜನಾಧಿಕಾರಿಗಳಾದ ಶ್ರೀ ಕೇಶವ ದೇವಾಂಗ ಇವರು ದೀಪ ಬೆಳಗಿಸಿ ವಿದ್ಯುಕ್ತ ಚಾಲನೆ ನೀಡಿ ಸ್ಪೂರ್ತಿದಾಯಕ ಮಾತುಗಳಿಂದ ಶುಭಕೋರಿದರು.
ಕೇಂದ್ರ ಕಛೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶನದಂತೆ ಕಾರ್ಯಕರ್ತರ ಕುಂದು ಕೊರತೆ ನೀಗಿಸಲು, ಸಾಮಥ್ರ್ಯಾವನ್ನು ವೃದ್ಧಿಸಲು, ಯೋಜನೆಯ ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಲು ಪ್ರತಿ ವರ್ಷ ಪ್ರತಿ ಸಿಬ್ಬಂದಿಗೂ ತರಬೇತಿಯನ್ನು ನೀಡಲಾಗುತ್ತಿದ್ದು, ಹೊಸದಾಗಿ ಸೇರ್ಪಡೆಯಾದ ಕಛೇರಿ ಸಹಾಯಕರಿಗೆ ಕ್ಷೇತ್ರದ ಹಿನ್ನಲೆ, ಯೋಜನೆಯ ಕಾರ್ಯಕ್ರಮ ಹಾಗೂ ಹೊಸ ತಂತ್ರಜ್ಞಾನದ ಮಾಹಿತಿ, ವ್ಯಕ್ತಿತ್ವ ವಿಕಾಸ…ಇತ್ಯಾದಿ ವಿಷಯಗಳು ಈ ತರಬೇತಿಯಲ್ಲಿ ಅಳವಡಿಸಲಾಗಿದ್ದು ಪ್ರಾಯೋಗಿಕ ಹಾಗೂ ಇತರ ಚಟುವಟಿಕೆಗಳು ಹೊಂದಿರುತ್ತದೆ ಎಂದು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಶಿವಕುಮಾರ್ರವರು ಪ್ರಾಸ್ತವಿಕ ನುಡಿಯಲ್ಲಿ ತರಬೇತಿಯ ರೂಪು ರೇಷೆಗಳನ್ನು ತಿಳಿಸಿಕೊಟ್ಟರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯಾವಾದ ಕಾರ್ಯಕ್ರಮವನ್ನು ಕು|| ರಂಜಿತ.ಎನ್, ಕಂಪ್ಯೂಟರ್ ಶಿಕ್ಷಕಿ, ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರು ಇವರು ನೆರವೆರಿಸಿಕೊಟ್ಟರು. ಉಪಸ್ಥಿತಿ: ಶ್ರೀಯುತ ಶಿವಕುಮಾರ್, ಉಪನ್ಯಾಸಕರು, ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರು.
ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಕುವೆಂಪುನಗರ, ಮೈಸೂರು ಇಲ್ಲಿ ಆಯೋಜಿಸಲಾಗಿದ್ದು ಈ ತರಬೇತಿಗೆ ಮೈಸೂರು, ಬೆಂಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧ ಜಿಲ್ಲಾ ಹಾಗೂ ಯೋಜನಾ ಕಛೇರಿಯ ಒಟ್ಟು 25 ಕಛೇರಿ ಸಹಾಯಕರು ಪಾಲ್ಘೊಂಡಿರುತ್ತಾರೆ. ತರಬೇತಿಯು ವಿವಿಧ ಬಗೆಯ ವಿಷಯಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಹೊಂದಿರುತ್ತದೆ.
ಕಛೇರಿ ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ
