AgricultureMicrofinanceNewsNews on Groupssuccess storyTrainingWomen Empowerment

ಇಷ್ಟವಾದ ಶ್ರಮದ ಮೆಟ್ಟಿಲು ಆದಾಯದ ತೊಟ್ಟಿಲು

ಕುಟುಂಬದ ಪ್ರತಿ ಜವಾಬ್ದಾರಿ ವ್ಯಕ್ತಿಯು ಆ ಕುಟುಂಬದ ಅಭಿವೃದ್ಧಿ ಚಿಂತನೆಯತ್ತ ಸಾಗಿರುತ್ತಾರೆ. ಜೀವನಮಟ್ಟವನ್ನು ಸುಧಾರಿಸಲು ಇಚ್ಛಿಸಿರುತ್ತಾರೆ. ಇದಕ್ಕಾಗಿ ಕುಟುಂಬದಲ್ಲಿ ಹೊಂದಾಣಿಕೆ ಇದ್ದರಂತೂ ಅಭಿವೃದ್ಧಿಯ ಮೆಟ್ಟಿಲನ್ನು ಆಯಾಸವಿಲ್ಲದೇ ಹತ್ತಬಹುದು. ಹೀಗೆ ಕುಟುಂಬದಲ್ಲಿ ಸದಸ್ಯರ ವಯಕ್ತಿಕ ಸಾಧನೆಯು ಮುಖ್ಯವಾಗುತ್ತೇ. ಹಾಗಂತ ಸಾಧನೆಗೆ ಕಷ್ಟವೇ ಬರಬೇಕೆಂದು ಇಲ್ಲ. ಸುಖವಿದ್ದಾಗೂ ಇಷ್ಟಪಟ್ಟು ದುಡಿಮೆಯನ್ನು ಸ್ವೀಕರಸಿದಲ್ಲಿ ಜೀವನದಲ್ಲಿ ಏಳಿಗೆ ತೋರಿಸಬಹುದೆಂದು ತೋರಿಸಿದವರೆ ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು.ಜ್ಯೋತಿ ಮತ್ತು ಶಿವಮಲ್ಲು ದಂಪತಿಗಳು ಮೈಸೂರಿನ ಹಳೇಕೆಸರಿಯಲ್ಲಿ ನೆಲಸಿರುವರು. ಇವರಿಗೆ ಇರುವುದೊಂದೆ ಎಕರೆ ಭೂಮಿ ಒಂದು ಸ್ವಂತ ಮನೆ. ನೀರಾವರಿ ವ್ಯವಸ್ಥೆ ಹೆಚ್ಚು ಕೃಷಿ ಬೆಳೆ ಪಡೆಯಲು ಆಗದೆ ವಂಚಿತವಾಗಿತ್ತು. ಆಗದು ಎಂದು ಕೈ ಕಟ್ಟಿ ಕೂತುಕೊಳ್ಳುವ ಜಯಾಮಾನದವರು ಇವರು ಅಲ್ಲ ಎಂದು ತೋರಿಸಿದವರು.

ತವರು ಮನೆಯಲ್ಲಿ ಕೃಷಿ ಕುಟುಂಬದಲ್ಲಿ ಹೈನುಗಾರಿಕೋದ್ಯಮದ ಬದುಕಿನಲ್ಲಿ ಇಬ್ಬರು ಸಹೋದರರೊಂದಿಗೆ ಬೆಳೆದ ಜ್ಯೋತಿ ಏಕೈಕ ಅಕ್ಕರೆಯ ಮಗಳಾಗಿ ಯಾವುದೇ ಶ್ರಮದ ಕೆಲಸ ಮಾಡಿದವರಲ್ಲ. ಆದರೆ ಗಂಡನ ಮನೆಯಲ್ಲಿ ತಾವೇ ಸ್ವ ಇಚ್ಛೆಯಿಂದ ಕೃಷಿ ಮತ್ತು ಹೈನುಗಾರಿಕೆ, ಇತರೆ ಚಟುವಟಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ತಾವಾಯ್ತು ತಮ್ಮ ಕೆಲಸವಾಯ್ತು ಇದ್ದರಲ್ಲಿ ತೃಪ್ತಿ ಜೀವನ ನಡೆಸಿದ್ದರು. ಆದರೆ ಇವರು ಜುಲೈ 2014ರಲ್ಲಿ ಮುರಡೇಶ್ವರ ಸ್ವ ಸಹಾಯ ಸಂಘದಲ್ಲಿ (ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ) ಸೇರಿದ ನಂತರ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿರು. ಪ್ರಥಮವಾಗಿ ಇವರು ರೂ.10000/-ಗಳ ಧನಸಹಾಯವನ್ನು ಬ್ಯಂಕಿನಿಂದ ಸ್ವ ಸಹಾಯ ಸಂಘದಲ್ಲಿ ಪಡೆದಾಗ ಮೊದಲು ಅಲ್ಪಸ್ವಲ್ಪ ಟೇಲರಿಂಗ ಬರುತ್ತಿದ್ದರಿಂದ ಹೊಲಿಗೆ ಯಂತ್ರವನ್ನು ಖರೀದಿಸಿದರು. ನಂತರ ಮತ್ತೆ ಹೈನುಗಾರಿಕೆ ಮಾಡಲು ರೂ.30000/-ಗಳನ್ನು ತೆಗೆದುಕೊಂಡು ಒಂದು ಹಸು ಖರೀದಿಸಿದರು. ಇದಾದ ಮೇಲೆ ರೂ.50000/-ಗಳ ಸಹಾಯವನ್ನು ಪಡೆದು ತಮ್ಮಲ್ಲಿರುವ ರೂ.50000/-ಗಳನ್ನು ಹಾಕಿ 8ಲಕ್ಷ ಸಾಲದೊಂದಿಗೆ ರೂ.9 ಲಕ್ಷದ ಕಾರನ್ನು ಬಾಡಿಗೆ ಕೊಡಲು ಖರೀದಿಸಿದರು. ಇದಾದ ನಂತರ ಇತ್ತೀಚೆಗೆ ರೂ.1.50ಲಕ್ಷ ಮೊತ್ತವನ್ನು ಪಡೆದು ಕೃಷಿಯಂತ್ರ(ಟ್ರೈಲರ್) ಖರೀದಿಸಿದ್ದಾರೆ. ಹೀಗೆ ಪಡೆದ ಆರ್ಥಿಕ ಸಹಕಾರ, ಇದನ್ನೆ ಪಡೆಯಬೇಕೆಂಬ ಚಿಂತನೆ, ಯೋಜನೆ ಎಲ್ಲವೂ ಧರ್ಮಸ್ಥಳ ಸಂಸ್ಥೆಗೆ ಸೇರಿದ ನಂತರ ಪ್ರಗತಿನಿಧಿಯ ಆರ್ಥಿಕ ಸಹಾಯದ ಉದ್ದೇಶ ಸಮರ್ಪಕ ಬಳಕೆ ಮತ್ತು ಸಂಘಟನಾ ಕಾರ್ಯಕ್ರಮದಿಂದ ಈ ಶಕ್ತಿ ಸಿಕ್ಕಿದೆ ಎನ್ನುವದು ಇವರ ಅಭಿಪ್ರಾಯ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಕರ ಸಂಘವಾದ ಪ್ರಗತಿಬಂಧು ಅನ್ನದಾತ ತಂಡವನ್ನು ಇವರ ಪತಿಯಾದ ಶಿವಮಲ್ಲು ಇವರು 6ಜನ ಕೃಷಿಕರೊಂದಿಗೆ ಕಟ್ಟಿಕೊಂಡರು. ಕೃಷಿಗೆ ಪೂರಕ ಬೋರ್ ಕೊರೆಸುವಲ್ಲಿ, ಗೊಬ್ಬರ ಮತ್ತು ಜಮೀನು ಖರೀದಿಗೆ ಹೀಗೆ ಇಲ್ಲಿಯವರೆಗೂ ಒಟ್ಟು 2 ಲಕ್ಷದ ಸಹಾಯವನ್ನು ಪಡೆದಿರುತ್ತಾರೆ.

ಯಾವುದೇ ಉದ್ಯೋಗದಲ್ಲಿ ನಿರೀಕ್ಷಿತವಾಗಿ ಆದಾಯವನ್ನು ಕೂಡಾ ಪಡೆಯಲು ಇಚ್ಛಿಸುವುದು ಸಹಜ. ಅದೇ ಆದಾಯ ದುಂದುವೆಚ್ಚ ಮತ್ತು ದುಷ್ಚಟಕ್ಕೆ ಒಳಗಾಗದೇ ಸೂಕ್ತ ಮತ್ತೆ ಆದಾಯ ವಿನಿಯೋಗಕ್ಕೆ ಬಳಸುವುದಾದರೆ ಬೇಗನೆ ಹೆಚ್ಚು ಹೆಚ್ಚು ಆದಾಯದೊಂದಿಗೆ ಹೆಚ್ಚು ಅಭಿವೃದ್ಧಿಯತ್ತ ಸಾಗಬಹುದೆಂದು ಈ ದಂಪತಿಗಳು ತೋರಿಸಿಕೊಟ್ಟಿದ್ದಾರೆ.

ಜ್ಯೋತಿ ದಂಪತಿಗಳ ಬಹುದ್ಯೋಗಗಳು ಆದಾಯದೊಂದಿಗೆ ಸಾಗಿರುವ ಬಗೆಯನ್ನು ಒಮ್ಮೆ ನೋಡೋಣ..

ಕ್ರ.ಸಂ.

ಉದ್ಯೋಗ

ಮಾಸಿಕ ಆದಾಯ

ವಿವರ  ಪ್ರಾರಂಭದಲ್ಲಿ  ಪ್ರಸ್ತುತ  ಪ್ರಾರಂಭದಲ್ಲಿ  ಪ್ರಸ್ತುತ  ಮರುಪಾವತಿ
1 ವಾಹನ ಬಾಡಿಗೆ (ಕಾರು)  9 ಲಕ್ಷದ ಎಕ್ಸೆಂಟ್ ಕಾರು 18000 8000
2 ಬ್ಯೂಟಿಸಿಯನ್ ಉದ್ಯೋಗ ಮನೆಯಲ್ಲಿ 4000  
3 ಅಣಬೆ ಬೇಸಾಯ  ಮನೆಯಲ್ಲಿ 20000 11000
4 ಕಾಯಿಪಲ್ಲೆ ಮಾರಾಟ  ಕೃಷಿ 2 ಎಕರೆ 7000
5 ಕೃಷಿ ಯಂತ್ರ ಬಾಡಿಗೆ (ಟ್ರಿಲ್ಲರ್)  (ಟ್ರಿಲ್ಲರ್) 3000
6 ಸಿಮೆಂಟ್ ಚೀಲವನ್ನು ಹೊಲಿಯುವುದು. 1 ಹೊಲಿಗೆ ಯಂತ್ರ 9000
7 ಟೈಲರಿಂಗ್ ಉದ್ಯೋಗ
8 ಕೃಷಿ ಭೂಮಿ ಕೃಷಿ ವಾರ್ಷಿಕ ಬೆಳೆ-ಭತ್ತ ಇತರೆ. . 1 ಎಕರೆ  3 ಎಕರೆ 1000 8000
          69000 19000

 

ಈ ಎಲ್ಲ ಉದ್ಯೋಗದಿಂದ ಆದಾಯ ರೂ.69000/-ಗಳು ಇದ್ದು, ಮೇಲ್ಮುಕ ಉಳಿತಾಯ(ಮೊದಲೇ ಸಾಲದ ರೂಪದಲ್ಲಿ ಪಡೆದ ಮೊತ್ತಕ್ಕೆ ಮರುಪಾವತಿ ರೂ.19000/-ಗಳನ್ನು ಮಾಡುತ್ತಿದ್ದು,) ನಿವ್ವಳ ಉಳಿತಾಯ ರೂ.50000/-ಗಳನ್ನು ಹೊಂದುತ್ತಿರುವುದು ಗಮನಿಸಬಹುದಾಗಿದೆ. ಜೊತೆಗೆ ಈಗಿರುವ ಮನೆಯನ್ನು ದುರಸ್ಥಿ ಮಾಡಿಸುವ ವಿಚಾರವಿದ್ದು, ಹೊಸ ಮನೆಗೆ ನಿವೇಶನ ಖರೀದಿ ಮತ್ತು ರೂ.5ಲಕ್ಷ ಮೊತ್ತದ 2 ಎಕರೆ ಭೂಮಿ ಖರೀದಿಯನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಸುವ್ಯವಸ್ಥೆಯಲ್ಲಿ ಮನೆಯನ್ನು ಕಟ್ಟುವ ಗುರಿಯನ್ನು ಹೊಂದಿದ್ದಾರೆ.
ಈ ಮೇಲಿನ ಆರ್ಥಿಕ ಅಭಿವೃದ್ಧಿಯ ಜೊತೆಗೆ ಈಗ ಇವರು ಶಿಸ್ತು, ಸಮಯಪಾಲನೆ, ಉತ್ತಮ ಸಂವಹನ ಹಾಗೂ ಚಿಂತನೆ, ಯೋಜನೆ ಹಾಕಿಕೊಳ್ಳುವ ಕಲೆಯನ್ನು ಬಲ್ಲವರಾಗಿದ್ದಾರೆ. ಯಾವುದೇ ಸಭೆ ಸಮಾರಂಭಗಳಲ್ಲಿಯೇ ಆಗಲಿ ಧೈರ್ಯದಿಂದ ಮಾತನಾಡುವ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ.
‘ಮನಸ್ಸು ಮಾಡಿದರೆ ಯಶಸ್ವಿ ಉದ್ಯೋಗ, ಹಣ ವಿನಿಯೋಗ ಸದ್ಭಳಕೆಯಾದರೆ ಉತ್ತಮ ಆದಾಯ’ ಎಂದು ತೋರಿಸಿಕೊಟ್ಟಿರುವ ಕೇವಲ 7 ನೇ ತರಗತಿ ಓದಿರುವ ಜ್ಯೋತಿ ಮತ್ತು ಶಿವಮಲ್ಲ ನಿಜಕ್ಕೂ ಮಾದರಿಯಾಗಿದ್ದು, ಇವರ ಮುಂದಿನ ಜೀವನ ಇನ್ನೂ ಯಶಸ್ವಿಯಾಗಲಿ ಎಂದು ಶುಭ ಹಾರೈಸೋಣ..

One thought on “ಇಷ್ಟವಾದ ಶ್ರಮದ ಮೆಟ್ಟಿಲು ಆದಾಯದ ತೊಟ್ಟಿಲು

Leave a Reply

Your email address will not be published. Required fields are marked *