ಮೇಲುಕೋಟೆ : ಗ್ರಾಮೀಣಾ ಭಾಗದ ಬಡ ಕುಟುಂಬಗಳು, ರೈತರು ಹಾಗೂ ನಿರುದ್ಯೋಗಿಗಳ ಬದುಕಿನಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಸಹಕಾರಿಯಾಗಿರುವ ರಾಜ್ಯದ ಏಕೈಕ ಸಂಸ್ಥೆ ಅಂದರೆ ಅದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂದು ಸಂಸ್ಥೆಯ ನಿರ್ದೇಶಕ ಎ.ಶ್ರೀಹರಿ ತಿಳಿಸಿದರು.
ಮೇಲುಕೋಟೆಯಲ್ಲಿ ಗುರುವಾರ ಆಯೋಜಿಸಿದ್ದ ಒಕ್ಕೂಟಗಳ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ ಕೈಕಂರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಮನುಷ್ಯನಿಗೆ ಯಾವುದೇ ರೀತಿ ಸಹಾಯಕ್ಕೆ ಸಂಸ್ಥೆ ನೆರವಾಗುತ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆಯ ರೈತರ ಬೆನ್ನಿಗೆ ನಮ್ಮ ವಿರೇಂದ್ರ ಹೆಗ್ಗಡೆ ಅವರು ಇದ್ದರೆ ರೈತರು ಅತಿಯಾಸೆ ಒಳಗಾಗದೆ ಜೀವನ ನಡೆಸ ಬೇಕು.
ಮಾನವನಿಗೆ ದಾರ್ಮಿಕತೆಯ ಮೇಲೆ ನಂಬಿಕೆ ಇರಬೇಕು, ಯಾವುದೇ ಧರ್ಮಕ್ಕೆ ಸೀಮಿತವಾಗದೆ ಎಲ್ಲಾರು ಒಂದೇ ಎಂಬ ವಿಶಾಲವಾದ ಭಾವನೆಯಿಂದ ಇಂತಹ ಧಾರ್ಮಿಕ ಪೂಜೆಗಳಲ್ಲಿ ಎಲ್ಲಾರೂ ಸಾಮೂಹಿಕವಾಗಿ ಭಾಗವಹಿಸಿಬೇಕು. ಇಂದು ಮೇಲುಕೋಟೆ ಒಕ್ಕೂಟದಲ್ಲಿ 360 ಗುಂಪುಗಳಿದ್ದು 3000 ಸದಸ್ಯರು ಇಂದು ಧರ್ಮಸ್ಥಳ ಸ್ವಸಹಾಯ ಸಂಸ್ಥೆಯಲ್ಲಿ ಒಟ್ಟಾರೆ 3 ಕೋಟಿಗೂ ಸಾಲ ನೀಡಲಾಗಿದೆ.
ರಾಜ್ಯದಲ್ಲಿ ವಿರೇಂದ್ರ ಹೆಗ್ಗಡೆಯವರ ಕನಸು ನನಸಾಗಿದೆ. ಎಲ್ಲಾರೂ ಸ್ವಾಭಿಮಾನಿಗಳಾಗಿ ಜೀವನ ನಡೆಸುತ್ತಿದಾರೆ ಕರ್ನಾಟಕ ರಾಜ್ಯದಲ್ಲಿ ಇಂತಹ ಯೋಜನೆಯಲ್ಲಿ ಸಂಪೂರ್ಣವಾಗಿ ಯಶಸ್ವಿಗೊಂಡ ಏಕೈಕ ಸಂಸ್ಥೆ ಎಂದರೆ ಧರ್ಮಸ್ಥಳ ಸಂಸ್ಥೆ ಎಂದು ತಿಳಿಸಿದರು.
ಈ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತಿ ಶಿಕ್ಷಕ ವಿ. ವೆಂಕಟರಾಮೇಗೌಡ್ರು ಮಾತನಾಡಿ ದೇಶದಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಮಕ್ಕಳು ಪೋಷಕರು, ಕೇವಲ ಅಂಕ ಗಳಿಸುವ ದುರಾಸೆಯಲ್ಲಿ ಮಕ್ಕಳಿಗೆ ಸಾಮಾಜಿಕವಾಗಿ ಮೌಲ್ಯವನ್ನೇ ಕಡೆಗಣಿಸಿದಾರೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪ ಅಧ್ಯಕ್ಷೆ ಸುಮಲತಾ ಮಹೇಶ್,ಗುಣಶೇಖರ್,ಅಶ್ವತ್ ಕುಮಾರ, ದಯಾನಂದ ಪಿ. ಮಂಜು ವಿ.ಆರ್. ಪಿಡಿಓ ತಮ್ಮೇಗೌಡ ಇತರರು ಇದ್ದರು.
ಮೇಲುಕೋಟೆಯಲ್ಲಿ ಒಕ್ಕೂಟಗಳ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ
