NewsTraining

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ, ಮೈಸೂರು ಇದರ ನಿರ್ದೇಶಕರ ಭೇಟಿ

ಧಾರವಾಡ ಜನವರಿ 03: ‘ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ತರಬೇತಿ ಸಂಸ್ಥೆ, ಮೈಸೂರು’ ಇದರ ನಿರ್ದೇಶಕಿಯಾದ ಶ್ರೀಮತಿ ಶಿಲ್ಪಾ ನಾಗ್ IAS ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ತರಬೇತಿ ಸಂಸ್ಥೆ ‘ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ ಧಾರವಾಡ’ ಇಲ್ಲಿಗೆ ಭೇಟಿ ನೀಡಿದರು. ತರಬೇತಿ ಸಂಸ್ಥೆಯ ಸೌಲಭ್ಯಗಳಾದ ಅಭ್ಯರ್ಥಿಗಳ ವಸತಿ ಗೃಹ, ಅತಿಥಿ ಗೃಹ, ತರಗತಿ ಕೊಠಡಿಗಳು, Selco Solar Lab, ಯಾಂತ್ರಿಕೃತ ಸಿದ್ಧ ಉಡುಪು ತಯಾರಿಕಾ ಘಟಕ, ಕಂಪ್ಯೂಟರ್ ಲ್ಯಾಬ್, ಸಿರಿಧಾನ್ಯಗಳ ಸಂಸ್ಕರಣಾ ಘಟಕ, ಬೇಕಿಂಗ್ ಘಟಕ, ಕೌಶಲ ತರಬೇತಿ ಲ್ಯಾಬ್, ಶುದ್ಧಗಂಗಾ ನೀರಿನ ಶುದ್ಧಿಕರಣ ಘಟಕ, ನಿರುಪಯುಕ್ತ ನೀರಿನ ಶುದ್ಧಿಕರಣ ಘಟಕ ಮತ್ತು ಆಡಳಿತ ವಿಭಾಗಗಳನ್ನು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ “ಅತ್ಯುತ್ತಮವಾದ ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ಇರುವ ಸಂಸ್ಥೆ ಇದಾಗಿದ್ದು ಇಲ್ಲಿಯ ನಿರ್ವಹಣೆ ಹಾಗೂ ವ್ಯವಸ್ಥೆಗಳು ಅಭಿನಂದನೀಯ. ಈ ಸಂ

 

ಸ್ಥೆಗೆ ಸಿರಿಧಾನ್ಯಗಳ ಕ್ಷೇತ್ರದಲ್ಲಿ ವಿಶೇಷವಾದ ಆಸಕ್ತಿ ಇದ್ದು ಸಂಸ್ಕರಣಾ ಮತ್ತು ಮೌಲ್ಯವರ್ಧನಾ ಘಟಕವು ಈ ಕ್ಷೇತ್ರದ ಕುರಿತು ಅಧ್ಯಯನಾಸಕ್ತರಿಗೆ ಅತ್ಯುತ್ತಮ ಜ್ಞಾನವನ್ನು ಒದಗಿಸುವಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯ ಪ್ರವರ್ತಕ ಸಂಸ್ಥೆಯಾಗಬಹುದು” ಎಂದು ಅಭಿಪ್ರಾಯ ಪಟ್ಟರು.

ಈ ಸಂಧರ್ಭದಲ್ಲಿ SIRD  ತರಬೇತಿ ಸಂಸ್ಥೆ ಪ್ರಾದೇಶಿಕ ತರಬೇತಿ ಕೇಂದ್ರ ಧಾರವಾಡ ಇದರ ಉಪ ನಿರ್ದೇಶಕರಾದ ಶ್ರೀ ಮೂಗನೂರಮಠ್, ತರಬೇತಿ ಕೇಂದ್ರದ ನಿರ್ದೇಶಕರಾದ ಡಾ|| ಪ್ರಕಾಶ್ ಭಟ್, ಪ್ರಾಂಶುಪಾಲರಾದ ಸಂತೋಷ್ ರಾವ್.ಪಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *