NewsTechnologyTraining

ಗ್ರಾಮೀಣ ಶೇಷ್ಠತಾ ಕೇಂದ್ರದಲ್ಲಿ ಚೇತನಾ ಶಿಬಿರ

ಬೆಳ್ತಂಗಡಿ: ಜ, 03: ಹೈನುಗಾರಿಕೆ ಲಾಭದಾಯಕವಾಗಬೇಕಾದರೆ ಅದರ ಹಾಲಿನ ಮೌಲ್ಯವನ್ನು ಮಾತ್ರ ಪರಿಗಣಿಸದೇ, ವಿವಿಧ ಮೂಲಗಳಿಂದ ಲಭ್ಯವಾಗುವ ಪ್ರಯೋಜನಗಳನ್ನು ಪರಿಗಣಿಸಬೇಕು. ಸಹಕಾರಿ ಹೈನುಗಾರಿಕೆ ಈ ರೀತಿಯ ಸೌಲಭ್ಯ ನೀಡುವಲ್ಲಿ ಮಾರ್ಗದರ್ಶಿಯಾಗಬೇಕೆಂದು ದಕ್ಷಿಣಕನ್ನಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು, ಪ್ರಸ್ತುತ ನಿರ್ದೇಶಕರು ಹಿರಿಯ ಸಹಕಾರಿಗಳಾದ ಶ್ರೀ ನಿರಂಜನ ಬಾವಂತಬೆಟ್ಟು ತಿಳಿಸಿದರು. ಕರ್ನಾಟಕ ಹಾಲು ಮಹಾಮಂಡಳಿಯ ಧಾರವಾಡ ತರಬೇತಿ ಕೇಂದ್ರದಿಂದ ಉತ್ತರ ಕರ್ನಾಟಕ ಮತ್ತು ಶಿವಮೊಗ್ಗ ಹಾಲು ಸಹಕಾರಿ ಸಂಘಗಳ ಅಧ್ಯಕ್ಷರುಗಳಿಗೆ ಬೆಳ್ತಂಗಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಗ್ರಾಮೀಣ ಶೇಷ್ಠತಾ ಕೇಂದ್ರದಲ್ಲಿ ಆಯೋಜಿಸಲಾದ 3 ದಿನಗಳ ‘ಚೇತನಾ ಶಿಬಿರ’ವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡುತ್ತಿದ್ದರು. ತಮ್ಮ ಸಂಘದ ಪ್ರಗತಿಯನ್ನು ಆಧಾರವಾಗಿ ತಿಳಿಸುತ್ತಾ, ಸಂಘಗಳ ಪ್ರಗತಿಯಲ್ಲಿ ಅಧ್ಯಕ್ಷರುಗಳ ಪಾತ್ರದ ಕುರಿತು ಈ ಸಂದರ್ಭದಲ್ಲಿ ವಿಶ್ಲೇಸಿದರು. ಪ್ರಾರಂಭದಲ್ಲಿ ಧಾರವಾಡ ತರಬೇತಿ ಕೇಂದ್ರದ ಜಂಟಿ ನಿರ್ದೆಶಕ ಡಾ|. ಅಬ್ದುಲ್ ಅಜೀಜ್ ಮುಲ್ಲಾರವರು ಎಲ್ಲರನ್ನೂ ಸ್ವಾಗತಿಸುತ್ತಾ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ಅಧ್ಯಕ್ಷರುಗಳಿಗೆ ಈ ತರಬೇತಿ ಪ್ರಗತಿಗೆ ಪ್ರೇರಣೆಯಾಗಬೇಕು. ವಿನಃ ಪ್ರಚೋದನೆಯಾಗಬಾರದೆಂದು ಮಾರ್ಮಿಕವಾಗಿ ತಿಳಿಸಿದರು. ಸಂಸ್ಥೆಯ ನಿರ್ದೇಶಕ ಶ್ರೀ ಬೂದಪ್ಪ ಗೌಡರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಹಾಲು ಉತ್ಪಾದಕ ಸಂಘಗಳಿಗೆ ದೊರಕುವ ವಿವಿಧ ಸೌಲಭ್ಯಗಳ ಕುರಿತು ಮಾತನಾಡಿದರು. ದ.ಕ. ಹಾಲು ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ಕಹಾಮ ನಿವೃತ್ತಿ ಜಂಟಿ ನಿರ್ದೇಶಕರಾದ ಶ್ರೀ ಡಿ.ಎಸ್. ಹೆಗಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು. ವಲಯದ ಉಪವ್ಯವಸ್ಥಾಪಕ ಡಾ|. ರಾಮಕೃಷ್ಣ ಭಟ್ಟ, ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್, ಶ್ರೀ ಬಾಲಕೃಷ್ಣ, ಶ್ರೀ ರಾಜೇಶ್ ಉಪಸ್ಥಿತರಿದ್ದರು. ಕು|. ಅಭಿಲಾಷ ಪ್ರಾರ್ಥನೆ ಮಾಡಿದರು. ಶ್ರೀ ಬಾಲಕೃಷ್ಣರವರು ವಂದಿಸಿದರು.

Leave a Reply

Your email address will not be published. Required fields are marked *