NewsTraining

ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಸಿದ್ದ ಉಡುಪು ತಯಾರಿ ತರಬೇತಿ

ಬೆಳ್ತಂಗಡಿ 16- ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಎಲ್ಲರೂ ಟೈಲರಿಂಗ್ ವೃತ್ತಿಯನ್ನು ಆರಂಭಿಸಬೇಕು ಎಂದು ಕೈ ಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ಸರಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಇದರ ಸಹಯೋಗದಲ್ಲಿ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿಯಲ್ಲಿ ನಡೆದ ಸಿದ್ದ ಉಡುಪು ತಯಾರಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಶಿವಶಂಕರ್‍ರವರು ಟೈಲರಿಂಗ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಶುಭಹಾರೈಸಿದರು.
ನಂತರ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲರಾದ ಚಂದ್ರಶೇಖರ್‍ರವರು ಮಾತನಾಡಿ ಸ್ವ-ಉದ್ಯೋಗದ ಮೂಲಕ ಮಹಿಳೆಯರು ಸ್ವಾವ0ಬಿಗಳಾಗಬೇಕು. ಜೀವನದಲ್ಲಿ ಸ್ವ ಉದ್ಯೋಗದ ಮೂಲಕ ಹೊಸಬದುಕನ್ನು ಕಟ್ಟಿಕೊಳ್ಳುವ ಪಣ ತೊಡಬೇಕು, ಸ್ವ ಉದ್ಯೋಗವನ್ನು ಮಾಡುವವರಿಗೆ ಮಾದರಿಯಾಗಿರಬೇಕು, ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟೈಲರಿಂಗ್ ಶಿಕ್ಷಕಿ ಶ್ರೀಮತಿ ಉಷಾರವರು ಉಪಸ್ಥಿತರಿದ್ಧರು, ಶ್ರೀಮತಿ ಶಾಲಿನಿ ಪ್ರಾರ್ಥನೆ ಹಾಡಿದರು, ಕು| ದಿವ್ಯಾ, ಮತ್ತು ಶ್ರೀಮತಿ ಹರಿಣಾಕ್ಷಿ ರವರು 45 ದಿನಗಳ ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತರಬೇತಿ ಸಂಸ್ಥೆಯ ಉಪನ್ಯಾಸಕರಾದ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ರಾಜೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *