AgricultureNewsTraining

ಕೃಷಿ ಮೇಲ್ವಿಚಾರಕರಿಗೆ SRI ಮತ್ತು SSI ಪದ್ಧತಿ ಅನುಷ್ಠಾನದ ತರಬೇತುದಾರರ ತರಬೇತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷಿ ಮೇಲ್ವಿಚಾರಕರಿಗೆ SRI ಮತ್ತು SSI ಪದ್ಧತಿ ಅನುಷ್ಠಾನದ ತರಬೇತುದಾರರ ತರಬೇತಿಯನ್ನು ದಿನಾಂಕ: 22.01.2019 ಮತ್ತು 23.01.2019 ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಾಪುರ, ಧಾರವಾಡ ಮತ್ತು ಕೃಷಿ ವಿಭಾಗದ ಕೇಂದ್ರ ಕಛೇರಿಯ ಸಹಯೋಗದೊಂದಿಗೆ ಹುಕ್ಕೇರಿ ಮತ್ತು ಖಾನಾಪೂರ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಸದರಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ಧಾರವಾಡ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಸೀತಾರಾಮ ಶೆಟ್ಟಿ ಇವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ನಂತರ ತರಬೇತುದಾರರನ್ನು ಉದ್ದೇಶಿಸಿ “ಸಮಾಜ ಸೇವೆಯಲ್ಲಿ ಸಮಯಕ್ಕೆ ಮಿತಿ ಇಲ್ಲ. ರೈತರೊಂದಿಗೆ ಮಾಡುವ ಕೆಲಸ ಅತಿ ಹೆಚ್ಚು ಖುಷಿ ನೀಡುವುದು. ಶ್ರಮ ಪಟ್ಟು ದುಡಿದರೆ ಯಶಸ್ಸು ಖಂಡಿತ ಲಭಿಸುವುದು. ನಿಯಮದಡಿಯಲ್ಲಿ ನಿಯಮಗಳನ್ನು ಅರಿತುಕೊಂಡು ಕೆಲಸ ಮಾಡಿ” ಎಂದು ಕೃಷಿ ಮೇಲ್ವಿಚಾರಕರಿಗೆ ಶುಭ ಹಾರೈಸಿದರು.
ನಂತರದಲ್ಲಿ ಜ್ಞಾನವಿಕಾಸ ತರಬೇತಿ ಸಂಸ್ಥೆಯ ನಿರ್ದೇಶಕರಾದ ಡಾ| ಪ್ರಕಾಶ್ ಭಟ್ ಇವರು “ನೀರು ಅಮೂಲ್ಯವಾದ ಸಂಪತ್ತು. ನೀರಿನ ಸದ್ಭಳಕೆ ಮಾಡಬೇಕೆಂಬ ನಿಟ್ಟಿನಲ್ಲಿ ಇಂತಹ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಿ” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಶ್ರೀ ಲವಕುಮಾರ್, ಧರ್ಮಸ್ಥಳದ ಕೃಷಿ ವಿಭಾಗದ ಮೇಲ್ವಿಚಾರಕರಾದ ಶ್ರೀ ಲೋಕೇಶ್, ಉಪನ್ಯಾಸಕರಾದ ಶ್ರೀ ಸಂತೋಷ್ ರಾವ್ ಪಿ ಮತ್ತು ನಿಂಗಪ್ಪ ಜಿ ಇವರು ಉಪಸ್ಥಿತರಿದ್ದರು. ವಿವಿಧ ತಾಲೂಕುಗಳಿಂದ ಒಟ್ಟು 30 ಜನ ಮೇಲ್ವಿಚಾರಕರು ಭಾಗವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *