ಪೇಡಾ ತಯಾರಿಸಿ ಬದುಕು ಕಟ್ಟಿಕೊಳ್ಳಬಹುದೇ? ಮಹಾದೇವಿಯವರಲ್ಲಿ ಈ ಪ್ರಶ್ನೆಯನ್ನು ಕೇಳಿ ನೋಡಿ. ಯಾಕೆ ಸಾಧ್ಯವಿಲ್ಲ. ಖಂಡಿತವಾಗಿ ಬದುಕು ಕಟ್ಟಿಕೊಳ್ಳಬಹುದು ಎನ್ನುತ್ತಾರೆ ಅವರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬನಶಂಕರಿ ಸ್ವ ಸಹಾಯ ಸಂಘದ ಸದಸ್ಯೆಯಾದ ಇವರು ಯೋಜನೆ ನೀಡಿದ ಮಾಹಿತಿಯಂತೆ ಕೋವಾ ತಯಾರಿಸಿ ಅದರಿಂದ ಪೇಡಾ ಸಿದ್ದಪಡಿಸಲು ಆರಂಭಿಸಿದರು. ಮನೆಯ ಪಕ್ಕದಲ್ಲಿಯೇ ಇರುವ ಹಾಲಿನ ಡೈರಿಯಿಂದ ಹಾಲು ಖರೀದಿಸುತ್ತಾರೆ. ಚೆನ್ನಾಗಿ ಕುದಿಸುತ್ತಾರೆ. ಕೋವಾ ತಯಾರಿಸಿಕೊಳ್ಳುತ್ತಾರೆ. ಮುಂದುವರಿದು ಸ್ವಾದಿಷ್ಟ ಪೇಡಾ ಸಿದ್ದಪಡಿಸುತ್ತಾರೆ. ಬೈಲಹೊಂಗಲ ಹಾಗೂ ಧಾರವಾಡದ ಕೆಲವು ಬೇಕರಿಗಳಿಗೆ ತಲುಪಿಸಿ ಆದಾಯ ಗಳಿಸುತ್ತಿದ್ದಾರೆ. ಮಹಾದೇವಿ ಕಂಚಿಗಿಡದ್ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದವರು.