News

ಜ್ಞಾನವಿಕಾಸ ತರಬೇತಿ ಸಂಸ್ಥೆಯ ಸಿಬ್ಬಂದಿಗಳ ಸಭೆ

ಜ್ಞಾನವಿಕಾಸ ತರಬೇತಿ ಸಂಸ್ಥೆಯ ಸಿಬ್ಬಂದಿಗಳಿಗೆ ತೃತೀಯ ತ್ರೈಮಾಸಿಕ ಪ್ರಗತಿ ಪರಿಸರ ಸಭೆಯನ್ನು ಗೌರವ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ.ಎಲ್.ಎಚ್ ಮಂಜುನಾಥ್ ಇವರ ನೇತೃತ್ವದಲ್ಲಿ ದಿನಾಂಕ: 25/01/2019 ರಂದು ಜ್ಞಾನವಿಕಾಸ ತರಬೇತಿ ಸಂಸ್ಥೆ ರಾಯಪುರ ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಸ್ತುತ ಆರ್ಥಿಕ ವರ್ಷದ ತೃತೀಯ ತ್ರೈಮಾಸಿಕ ಅವಧಿಯ ಈಗಾಗಲೇ ಮುಗಿದಿದ್ದು ಈ ಅವಧಿಯಲ್ಲಿ ತರಬೇತಿ ಸಂಸ್ಥೆಯ ಸಾಧನೆ ಹಾಗೂ ವಿವಿಧ ತರಬೇತಿಗಳ ಕುರಿತು ವಿಮರ್ಶೆಯನ್ನು ಮಾಡಿ ತರಬೇತಿಯಲ್ಲಿ ಅಳವಡಿಸಿಕೊಳ್ಳಬಹುದಾದ ವಿನೂತನ ಕಾರ್ಯಕ್ರಮಗಳು ಹಾಗೂ ಹೊಸ ಯೋಜನೆಗಳ ಕುರಿತು ಮಾರ್ಗದರ್ಶನವನ್ನು ನೀಡಿದರು. ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬಹುದಾದ ಇಲಾಖಾ ತರಬೇತಿಗಳು ಹಾಗೂ ಸರಕಾರೇತರ ಸಂಸ್ಥೆಗಳ ತರಬೇತಿಗಳ ಕುರಿತು ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆ ನಿರ್ದೇಶಕರಾದ ಡಾ.ಪ್ರಕಾಶ ಭಟ್, ಜಿಲ್ಲಾ ನಿರ್ದೇಶಕರಾದ ದಿನೇಶ್ ಎಂ, ಯೋಜನಾಧಿಕಾರಿಗಳಾದ ನಾರಾಯಣ ಪಾಲನ್, ತರಬೇತಿ ಸಂಸ್ಥೆಯ ಸಂತೋಷ್ ರಾವ್ ಪಿ, ಉಪನ್ಯಾಸಕರಾದ ಜೈವಂತ ಪಟಗಾರ, ನಿಂಗಪ್ಪ ಜಿ, ವಿಜಯಲಕ್ಷ್ಮಿ ನೆಗಳೂರು, ಜ್ಯೋತಿ ಶಿಗ್ಗಾವಿ, ಅಶ್ವಿನಿ ನಂದಿಹಳ್ಳಿ ಮತ್ತು ತರಬೇತಿ ಸಂಸ್ಥೆಯ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *