“ಕರ್ತವ್ಯವನ್ನು ಕ್ರಮ ಬದ್ಧ ರೀತಿಯಲ್ಲಿ ನಿರ್ವಹಿಸಿದರೆ ಸಂಸ್ಥೆಯ ಅಭಿವೃದ್ಧಿ ಸಾಧ್ಯ” ಆದ್ದರಿಂದ ಸಂಸ್ಥೆಯ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುತ್ತಿರುವ ತಾವುಗಳು ಉತ್ತಮ ರೀತಿಯಲ್ಲಿ ನಿರ್ವಹಿಸಿರಿ ಹಾಗೂ ಯೋಜನೆಯ ಎಲ್ಲಾ ಫಲಾನುಭವಿಗಳನ್ನು ನೇರವಾಗಿ ಸಂಪರ್ಕಕ್ಕೆ ಸಿಗಬಹುದಾದ ಕಾರಣ ತಪಾವತುಗಳಾದ್ದಲ್ಲಿ ಜಾಗೃತಿ ಮೂಡಿಸಿರಿ, ಹೊಸ ಕಲಿಕೆಯಾಗುವುದು. ಈ ಮೂಲಕ ಕೆಲಸದಲ್ಲಿ ಮುಂಬಡ್ತಿ ಸಿಕ್ಕಿ ಯಶಸ್ವಿಗೊಳ್ಳಿರಿ ಎಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮೈಸೂರು ಪ್ರಾದೇಶಿಕ ಕಛೇರಿ ಸ್ವ-ಸಹಾಯ ಸಂಘ ಯೋಜನಾಧಿಕಾರಿಗಳಾದ ಶ್ರೀಯುತ ಸದಾಶಿವ ಕುಲಾಲ್ರವರು ಶುಭಕೋರಿದರು.
ಕೇಂದ್ರ ಕಛೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ನಿರ್ದೇಶನದಂತೆ ಕಾರ್ಯಕರ್ತರ ಕುಂದು ಕೊರತೆ ನೀಗಿಸಲು, ಸಾಮಥ್ರ್ಯಾವನ್ನು ವೃದ್ಧಿಸಲು, ವ್ಯಕ್ತಿತ್ವ ವಿಕಾಸ, ಯೋಗಾಭ್ಯಾಸ ಇತ್ಯಾದಿ ವಿಷಯಗಳು ಈ ತರಬೇತಿಯಲ್ಲಿ ಅಳವಡಿಸಲಾಗಿದ್ದು ಪ್ರಾಯೋಗಿಕ ಹಾಗೂ ಇತರ ಚಟುವಟಿಕೆಗಳು ಹೊಂದಿರುತ್ತದೆ ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರ ಪ್ರಾಸ್ತವಿಕ ನುಡಿಯಲ್ಲಿ ತರಬೇತಿಯ ರೂಪು ರೇಷೆಗಳನ್ನು ತಿಳಿಸಿಕೊಟ್ಟರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯಾವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೇಯ ಉಪನ್ಯಾಸಕರಾದ ಶಿವಕುಮಾರ್ರವರು ನೆರವೆರಿಸಿಕೊಟ್ಟರು.
ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಕುವೆಂಪುನಗರ, ಮೈಸೂರು ಇಲ್ಲಿ ಆಯೋಜಿಸಲಾಗಿದ್ದು ಈ ತರಬೇತಿಗೆ ಕರ್ನಾಟಕದ ವಿವಿಧ ಯೋಜನಾ ಕಛೇರಿಯ ಒಟ್ಟು 25 ನಗದು ಸಹಾಯಕರು ಪಾಲ್ಘೊಂಡಿರುತ್ತಾರೆ. ತರಬೇತಿಯು ವಿವಿಧ ಬಗೆಯ ವಿಷಯಗಳು ಹಾಗೂ ಪ್ರಾಯೋಗಿಕ ಚಟುವಟಿಕೆಗಳನ್ನು ಹೊಂದಿರುತ್ತದೆ.
ನಗದು ಸಹಾಯಕರ ಸಾಮಥ್ರ್ಯಾಭಿವೃದ್ಧಿ ತರಬೇತಿ
