“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಹೀಲ್ಬ್ರೋನ್ ವಿಶ್ವವಿದ್ಯಾನಿಲಯ, ಜರ್ಮನಿ, ಇದರ ವಿದ್ಯಾರ್ಥಿಗಳು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಪ್ರಾಯೋಜಿತ ತರಬೇತಿ ಸಂಸ್ಥೆ ಮಾನವ ಸಂಪನ್ಮೂಲ ತರಬೇತಿ ಕೇಂದ್ರಕ್ಕೆ ಭೇಟಿ ನೀಡಲಾಗಿದ್ದು ಪ್ರಮುಖ ವಿಷಯಗಳಾದ ಸ್ವಚ್ಛತೆ ಮತ್ತು ನೈರ್ಮಲ್ಯ, ಕಿರು ಹಣಕಾಸು ವ್ಯವಹಾರ ಪದ್ಧತಿ, ಮಹಿಳಾ ಸಬಲೀಕರಣ, ಮಧ್ಯವರ್ಜನ ಶಿಬಿರ, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಯೋಜನೆಯ ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ಕುರಿತಾಗಿ ಮಾಹಿತಿಯನ್ನು ಪಡೆದಿದ್ದು, ಈ ವೇಳೆ ಯೋಜನೆಯ ಮೈಸೂರು ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿಗಳಾದ ಶ್ರೀಯುತ ವಿಶ್ವಾಸ್ ಶೆಟ್ಟಿಯವರು ಉಪಸ್ಥಿತರಿದ್ದು ಸವಿವರವಾಗಿ ವಿದೇಶಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿರುತ್ತಾರೆ.
ನಂತರದಲ್ಲಿ ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಕೈಗೊಂಡಿರುವ ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿಗಳು, ಕಂಪ್ಯೂಟರ್, ಟೈಲರಿಂಗ್ ತರಬೇತಿಯ ಪ್ರತ್ಯಕ್ಷಿಕೆ ಮಾಹಿತಿಯನ್ನು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ವಿಶಾಲ ಬಿ ಮಲ್ಲಪುರವರು ನೀಡಿರುತ್ತಾರೆ.
SDM-IMD ಕಾಲೇಜಿನ ಮ್ಯಾನೇಜರ್ ಆದ ಶ್ರೀಯುತ ಶ್ರೀಧರ್.ಸಿ.ವಿ, ಹಾಗೂ SDM-IMD ಯ ಉಪನ್ಯಾಸಕರಾದ ಶ್ರೀ ಡಾ||ನೀಲಂಜನ್ ಸೆಂಗುಪ್ತ, ಶ್ರೀ ವೆಂಕಟರಾಜ ಬಿ ಹಾಗೂ ಹೀಲ್ಬ್ರೋನ್ ವಿಶ್ವವಿದ್ಯಾನಿಲಯದ ಪ್ರೋಫೆಸರ್ಗಳಾದ ರಾಲ್ಫ್ಡಿಲ್ರ್ಲಪ್, ಸ್ಟೀಫನ್ ವಿಲ್ಮ್ಸ್ ಹಾಗೂ 15 ಜರ್ಮನಿ ವಿದ್ಯಾರ್ಥಿಗಳು, SDM-IMD ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿರುತ್ತಾರೆ.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಕಂಪ್ಯೂಟರ್ ಶಿಕ್ಷಕಿಯಾಗಿರುವ ಕು|| ರಂಜಿತ.ಎನ್ರವರು ನಡೆಸಿಕೊಟ್ಟಿರುತ್ತಾರೆ ಹಾಗೂ ಧನ್ಯಾವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಶಿವಕುಮಾರ್ ನೆರವೆರಿಸಿಕೊಟ್ಟರು.
******
ವಿದೇಶಿ ವಿದ್ಯಾರ್ಥಿಗಳಿಂದ ಅಧ್ಯಯನ ಪ್ರವಾಸ (Heilbronn University-Study Visit)

One thought on “ವಿದೇಶಿ ವಿದ್ಯಾರ್ಥಿಗಳಿಂದ ಅಧ್ಯಯನ ಪ್ರವಾಸ (Heilbronn University-Study Visit)”
Iti