success storyWomen Empowerment

ಚಕ್ಕುಲಿ ರೂಪಿಸಿದ ಬದುಕು

ಹಿರಿಯೂರು ತಾಲೂಕಿನ ಆರನಕಟ್ಟೆ ಗ್ರಾಮದ ಶಾಂತಿ ನಾಗರಾಜ್ ಚಕ್ಕಲಿ ತಯಾರಿಸುವುದರಲ್ಲಿ ಪರಿಣಿತರು. ತಯಾರಿಸಿದ ಚಕ್ಕುಲಿಯನ್ನು ಸುತ್ತಮುತ್ತಲಿನ ಗ್ರಾಮಗಳ ಅಂಗಡಿಗಳಿಗೆ ವಿಕ್ರಯಿಸಿ ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆರವಿನಿಂದ ಆರಂಭಿಸಿದ ಚಕ್ಕುಲಿ ತಯಾರಿ ಸ್ವ ಉದ್ಯೋಗ ಇವರ ಕುಟುಂಬದ ಆದಾಯದ ಮೂಲವಾಗಿದೆ.
ಚಕ್ಕುಲಿ ತಯಾರಿ ಆರಂಭಿಸಿದ ಮೊದಲಲ್ಲಿ ಅಕ್ಕ ಪಕ್ಕದ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಕೊಟ್ಟು ಬರುತ್ತಿದ್ದರು. ದಿನ ನಿತ್ಯ ಬೆಳಗಿನ ವೇಳೆಗೆ ಚಕ್ಕುಲಿ ತಯಾರಿಯಲು ಆರಂಭಿಸುತ್ತಾರೆ. ಮಧ್ಯಾಹ್ನದ ವೇಳೆಗೆ ಕೆಲಸ ಮುಗಿಯುತ್ತದೆ. ಇವರು ತಯಾರಿಸಿದ ತಾಜಾ ಚಕ್ಕುಲಿ ಕಡಿಯಲು ಸರಳ, ರುಚಿ ಅದ್ಭುತ. ಹಾಗಾಗಿ ನಮಗೂ ತಂದು ಕೊಡಿ ಎಂದು ಕೆಲ ಹೋಟೆಲ್ ಹಾಗೂ ಅಂಗಡಿಗಳಿಂದ ಬೇಡಿಕೆ ತನ್ನಷ್ಟಕ್ಕೆ ಬರುತ್ತಿರುತ್ತದೆ. ಹಬ್ಬಗಳಲ್ಲಿ ನಮಗೂ ಒಂದಿಷ್ಟು ಮಾಡಿಕೊಡಿ ಎನ್ನುವವರ ಸಂಖ್ಯೆ ಜಾಸ್ತಿಯಿರುತ್ತದೆ. ಪರಿಣಾಮ ಇವರ ಮನೆಯಲ್ಲಿ ನಿತ್ಯವೂ ಚಕ್ಕಲಿ ಕರಿಯುವ ಗಡಿಬಿಡಿ. ಮೊದಲು ಕೂಲಿಗೆ ತೆರಳುತ್ತಿದ್ದ ಪತಿ ನಾಗರಾಜ್ ಪತ್ನಿ ಆರಂಭಿಸಿದ ಚಕ್ಕುಲಿ ತಯಾರಿ ಲಾಭದಾಯಕ ಎಂದು ಮನಗಂಡು ಕೂಲಿ ಕೆಲಸ ಬಿಟ್ಟು ಚಕ್ಕುಲಿ ತಯಾರಿಯಲ್ಲಿಯೇ ದುಡಿಯುತ್ತಿದ್ದಾರೆ. ತಯಾರಿಸಿದ ಚಕ್ಕುಲಿಯನ್ನು ದಿನಕ್ಕೊಂದು ಹಳ್ಳಿಗೆ ತೆರಳಿ ಮಾರಾಟ ಮಾಡಿ ಬರುತ್ತಾರೆ.
ಚಕ್ಕುಲಿ ತಯಾರಿಯೊಂದಿಗೆ ಧರ್ಮಸ್ಥಳ ಯೋಜನೆಯ ಆರ್ಥಿಕ ಸಹಕಾರ ಪಡೆದು ಮನೆಯಲ್ಲಿಯೇ ಅಂಗಡಿ ತೆರೆದಿದ್ದಾರೆ. ಅಲ್ಲದೇ ಇತ್ತೀಚೆಗೆ ಬಂದ ಆದಾಯದಿಂದ ವ್ಯವಸ್ಥಿತವಾದ ಹೊಸ ಮನೆಯನ್ನು ಕಟ್ಟಿಕೊಂಡಿದ್ದಾರೆ. ಇವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಕಲ್ಪನಾ ಪದವಿ ಶಿಕ್ಷಣ ಮುಗಿಸಿ ಖಾಸಗಿ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದಾರೆ. ಎರಡನೆಯ ಮಗಳು ನವ್ಯಶ್ರೀ ದ್ವಿತಿಯ ಪಿಯುಸಿ ಅದ್ಯಯನದಲ್ಲಿದ್ದಾಳೆ. ಓದಿಗೆ ಯಾವುದೇ ಕೊರತೆಗಳಾಗದಂತೆ ಚಕ್ಕುಲಿ ತಯಾರಿಯ ಮೂಲಕ ನಿಭಾಯಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅನ್ನಪೂರ್ಣೇಶ್ವರಿ ಸ್ವ ಸಹಾಯ ಸಂಘದಲ್ಲಿ ಸೇರಿಕೊಂಡ ಇವರು ಸ್ವ ಉದ್ಯೋಗ ಅಭಿವೃದ್ಧಿ ಪಡಿಸಲು 1,50,000 ರೂಪಾಯಿಗಳಷ್ಟು ಸಾಲ ಪಡೆದುಕೊಂಡಿದ್ದಾರೆ. ಮನೆ ನಿರ್ಮಾಣಕ್ಕೆ ಹಾಗೂ ವ್ಯಾಪಾರಕ್ಕಾಗಿ ಈ ಮೊತ್ತವನ್ನು ಬಳಸಿಕೊಂಡಿದ್ದಾರೆ. ಚಕ್ಕುಲಿ ತಯಾರಿಯಿಂದ 1500 ರೂಪಾಯಿವರೆಗೆ ದಿನ ನಿತ್ಯ ಗಳಿಕೆಯಿದೆ. ಇವರಿಂದ ಕರಿಯಲ್ಪಟ್ಟ ಚಕ್ಕುಲಿ ಬಹಳ ಪ್ರಸಿದ್ಧಿ ಪಡೆದಿದೆ. ‘ಹಾರನಕಟ್ಟೆ ಚಕ್ಕುಲಿ’ ಎಂದೆ ಪ್ರಖ್ಯಾತವಾಗಿದೆ. ದಾವಣಗೆರೆ, ಚಿತ್ರದುರ್ಗ, ಸಿರಾ ತಾಲೂಕುಗಳಿಗೂ ಚಕ್ಕುಲಿ ಮಾರಾಟವಾಗಿದ್ದೂ ಇದೆ. ಹಿರಿಯೂರು ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಹಾರನ ಕಟ್ಟೆ ಚಕ್ಕುಲಿ ಖರೀದಿಗೆ ಸಿಗುತ್ತದೆ. ಹತ್ತು ರೂಪಾಯಿಯ ಪ್ಯಾಕ್ ಗಳಲ್ಲಿ ಮಾರಾಟ. ಬೆಳೆಗ್ಗೆ ಏಳು ಗಂಟೆಗೆ ತಯಾರಿಸಲು ಕುಳಿತುಕೊಳ್ಳುತ್ತಾರೆ. ಎರಡು ಗಂಟೆಗೆ ತಯಾರಿ ಕೆಲಸ ಮುಗಿಯುತ್ತದೆ. ನಾಲ್ಕು ಗಂಟೆಯ ವೇಳೆಗೆ ಪ್ಯಾಕಿಂಗ್ ಮುಗಿಸುತ್ತಾರೆ. ಕೂಡಲೇ ಬೈಕನ್ನೇರಿ ಹಳ್ಳಿಗಳೆಡೆಗೆ ತೆರಳಿ ತಲುಪಿಸಿ ಬರುವುದು ನಾಗರಾಜ್ ಅವರ ಕೆಲಸ. ಅಂದೇ ತಯಾರಿ. ಅಂದೇ ವ್ಯಾಪಾರ ಇವರ ಚಕ್ಕುಲಿಯ ಪ್ರಸಿದ್ದಿಯ ಗುಟ್ಟು.

2 thoughts on “ಚಕ್ಕುಲಿ ರೂಪಿಸಿದ ಬದುಕು

 1. Mallikarjun A Koppad
  Axis bank
  date of joniga 17/03/2016 axis bank and still worke
  and FICCL micro finance 30 monts worke
  dear sir
  my totail worke experince 6 years sir plez find my ruseum sir

Leave a Reply

Your email address will not be published. Required fields are marked *