MicrofinanceNewsTechnologyTraining

ಸೇವಾಪ್ರತಿನಿಧಿಗಳ ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ತರಬೇತಿ

“ಸರ್ಕಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಕೇಂದ್ರ ಸರ್ಕಾರದ ಆದೇಶದಂತೆ ಯೋಜನೆಯಲ್ಲಿ ಗೌರವಧನ ಪಡೆಯುವ ಒಟ್ಟು 13 ಸಾವಿರ ಜನ ಸೇವಾಪ್ರತಿನಿಧಿಗಳು ಇದ್ದು, ಆದಾಯಮಿತಿಗಿಂತ ಹೆಚ್ಚು ಪಡೆದ ಮೊತ್ತಕ್ಕೆ ತೆರಿಗೆ ಪಾವತಿ ಫೈಲ್ ಮಾಡುವ ಈ ತರಬೇತಿಯನ್ನು ಉತ್ತಮವಾಗಿ ಪಡೆದುಕೊಳ್ಳಿರಿ. ಈ ಮೂಲಕ ಸೇವಾಪ್ರತಿನಿಧಿಗಳ ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿ ಅವರಿಗೆ ಸೌಲಭ್ಯವನ್ನು ದೊರಕಿಸುವಲ್ಲಿ ಆನ್‍ಲೈನ್ ಮೂಲಕ ಪ್ರಕ್ರಿಯೆ ಮಾಡಬೇಕಾಗಿದೆ. ಈ ಪ್ರಕ್ರಿಯೆ ನಡೆಸಲು ಆಸಕ್ತಿ ಹೊಂದಿರುವ ಕಾರ್ಯಕರ್ತರಾದ ತಾವೆಲ್ಲ ವಿವಿಧ ಯೋಜನಾಕಛೇರಿಗಳಿಂದ ಆಗಮಿಸಿ ಪ್ರತಿನಿಧಿಸಿರುವಿರಿ.” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ (ರಿ)ಮೈಸೂರು ಜಿಲ್ಲಾ ನಿರ್ದೇಶಕರಾದ ಶ್ರೀಯುತ ವಿಜಯ ನಾಗನಳರವರು ಶುಭಕೋರಿದರು.
ಮೈಸೂರು ಪ್ರಾದೇಶಿಕ ಕಛೇರಿಯ ಗುಂಪುಲೆಕ್ಕ ಪರಿಶೋಧನ ವಿಭಾಗದ ಯೋಜನಾಧಿಕಾರಿಗಳಾದ ಕೇಶವ ದೇವಾಂಗ್. ಕೇಂದ್ರ ಕಛೇರಿಯ ಸೇವಾ ಪ್ರತಿನಿಧಿ ವಿಭಾಗದ ಯೋಜನಾಧಿಕಾರಿ ಶ್ರೀಯುತ ದಿನೇಶ್, ತರಬೇತಿ ಸಂಸ್ಥೆಯ ಶ್ರೀಮತಿ ವಿಶಾಲ ಬಿ. ಮಲ್ಲಪುರ, ಕೇಂದ್ರ ಕಛೇರಿಯ ವೇತನ ವಿಭಾಗದ ಪ್ರಬಂಧಕರಾದ ಶ್ರೀ ಸುಬ್ರಮಣಯೀ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತರಬೇತಿ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಹಾಗೂ ಧನ್ಯಾವಾದ ಕಾರ್ಯಕ್ರಮವನ್ನು ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀಯುತ ಶಿವಕುಮಾರ್ ನೆರವೆರಿಸಿಕೊಟ್ಟರು. ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಕುವೆಂಪುನಗರ, ಮೈಸೂರು ಇಲ್ಲಿ ಆಯೋಜಿಸಲಾಗಿದ್ದು, ಒಂದು ದಿನದ ಕಾರ್ಯಗಾರವಾಗಿದ್ದು ಈ ತರಬೇತಿಗೆ ಮೈಸೂರು, ಬೆಂಗಳೂರು ಜಿಲ್ಲಾ ವ್ಯಾಪ್ತಿಯ ವಿವಿಧ ಯೋಜನಾ ಕಛೇರಿಯ ಒಟ್ಟು 54 ಕಾರ್ಯಕರ್ತರು ಪಾಲ್ಘೊಂಡಿರುತ್ತಾರೆ. ತರಬೇತಿಯು ಇನ್‍ಕಮ್ ಟ್ಯಾಕ್ಸ್ ರಿಟರ್ನ್ ನಿಯಮಗಳೊಂದಿಗೆ ಆನ್‍ಲೈನ್ ಮಾದರಿ ನಮೂನೆಯ ಪ್ರಾಯೋಗಿಕ ಚಟುವಟಿಕೆಗಳನ್ನು ಪೂರೈಸಿದರು.
ತರಬೇತಿ ಕೊನೆಯಲ್ಲಿ ಘಟ್ಟ ಸಮಾರೋಪ ಸಮಾರಂಭದಲ್ಲಿ ಶಿಭಿರಾರ್ಥಿಗಳು ತಮ್ಮ ಉತ್ತಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಯಶಸ್ವಿ ಕಾರ್ಯಕ್ರಮವಾದ ಬಗ್ಗೆ ತಿಳಿಸಿದರು. ನಂತರದಲ್ಲಿ ಯೋಜನಾಧಿಕಾರಿಗಳಾದ ಶ್ರೀ ಕೇಶವ ದೇವಾಂಗ ಮತ್ತು ಪ್ರಾಂಶುಪಾಲರಾದ ಶ್ರೀಮತಿ ವಿಶಾಲಾರವರು ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾರ್ಗದರ್ಶಿಸಿದರು.

2 thoughts on “ಸೇವಾಪ್ರತಿನಿಧಿಗಳ ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ತರಬೇತಿ

    1. Hi sir, I am Ganesha M i am from Belthangady i interested Income tax return file training , how to apply thiis training.

Leave a Reply

Your email address will not be published. Required fields are marked *