DharmasthalaNewsTraining

ನಲಿಯೋಣ ಬಾ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಧರ್ಮಸ್ಥಳ, ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಮತ್ತು ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 03.05.2019 ರಿಂದ 12.05.2019 ರ ತನಕ ನಡೆಯುವ ನಲಿಯೋಣ ಬಾ ಮಕ್ಕಳ ಬೇಸಿಗೆ ಶಿಬಿರವು ಶ್ರೀ ಸಿದ್ಧವನ ಗುರುಕುಲ ಉಜಿರೆಯಲ್ಲಿ ನಡೆಯುತ್ತಿದೆ.
ಈ ಶಿಬಿರವನ್ನು ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|.ಬಿ. ಯಶೋವರ್ಮಾರವರು ಉದ್ಘಾಟಿಸಿದರು. ನಂತರ ಮಾತನಾಡುತ್ತಾ ಮಕ್ಕಳು ಕಲಿಕೆಯೊಂದಿಗೆ ಪಾಠವನ್ನು, ಪಾಠದೊಂದಿಗೆ ಕಲಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳನ್ನು ಅತೀ ಹೆಚ್ಚು ಮುದ್ದು ಮಾಡಬಾರದು. ಅವರನ್ನು ಬೆಳಯಲು ಬಿಡಬೇಕು. ಪರಿಸರದಲ್ಲಿ ಸ್ವಚ್ಚಂದವಾಗಿ ಓಡಾಡಬೇಕು. ಪ್ರಕೃತಿಯಲ್ಲಿರುವ ಪ್ರಾಣಿ, ಪಕ್ಷಿ ಇವುಗಳನ್ನು ವೀಕ್ಷಿಸಬೇಕು. ಶಿಬಿರದಲ್ಲಿ ನಲಿಯಲಿ, ಕುಣಿಯಲಿ, ನೆಲದಲ್ಲಿ ಹೊರಳಾಡಲಿ, ಸಣ್ಣ ಪುಟ್ಟ ಗಾಯಗಳಾಗಬಹುದು. ಅವರು ಖುಷಿ ಪಡಲು ಬಿಡಿ. ಈ ಶಿಬಿರದಿಂದ ಆತ್ಮ ಸ್ಥೈರ್ಯ ಹೆಚ್ಚುವಂತಾಗಿ ತಮ್ಮ ಬದುಕಿಗೆ ಪೂರಕವಾಗಲಿ ಎಂದು ಶುಭ ಹಾರೈಸಿದರು.
ಮಕ್ಕಳು ತಮ್ಮ ಕೈಗೆ ವಿವಿಧ ಬಣ್ಣಗಳನ್ನು ಹಚ್ಚಿಕೊಂಡು ವೈಟ್ ಬೋರ್ಡ್‍ಗೆ ತಮ್ಮ ಕೈಗಳ ಅಚ್ಚನ್ನು ಮೂಡಿಸುವುದರ ಮೂಲಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕರಾದ ಶ್ರೀ ಕೆ.ಬೂದಪ್ಪ ಗೌಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ತರಗತಿ ಕೋಣೆಯಲ್ಲಿ ಕಲಿತ ಶಿಕ್ಷಣ ಪರೀಕ್ಷೆಗೆ ಸೀಮಿತವಾಗಿರುತ್ತದೆ. ಆದರೆ ಇಂತಹ ಶಿಬಿರದಲ್ಲಿ ದೊರೆಯುವ ಶಿಕ್ಷಣ ಜೀವನಕ್ಕೆ ಅನುಕೂಲವಾಗಿರುತ್ತದೆ. ಶಿಕ್ಷಣದ ಜೊತೆ ಜೀವನ ಕೌಶಲ್ಯ ಹಾಗೂ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿಸುತ್ತಾ 10 ದಿನ ನಡೆಯುವ ಶಿಬಿರದಲ್ಲಿ ಹಮ್ಮಿಕೊಂಡ ತರಬೇತಿ ವಿಷಯಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ನೀಡಿದ ಸಹಕಾರ, ಮಾರ್ಗದರ್ಶನಕ್ಕೆ ವಂದನೆಯನ್ನು ಸಲ್ಲಿಸಿದರು. ಈ ಶಿಬಿರ ಯಶಸ್ವಿಗೊಳಿಸಲು ಶಿಬಿರದ ಮಕ್ಕಳು, ಅವರ ಹೆತ್ತವರು ಮತ್ತು ಪೋಷಕರ ಸಹಕಾರವನ್ನು ಕೋರಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸೋನಿಯಾ ವರ್ಮಾ, ಎಸ್.ಡಿ.ಎಮ್. ನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಶಿಬಿರದ ಸಂಯೋಜಕರಾದ ಚಂದ್ರಹಾಸರವರು 10 ದಿನಗಳ ಕಾಲ ನಡೆಯುವ ಈ ಶಿಬಿರದ ಪೂರ್ವ ಸಿದ್ಧತೆಗಳನ್ನು ಬಹಳ ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಶಿಬಿರದಲ್ಲಿ 115 ಮಂದಿ ಮಕ್ಕಳ ಹೆಸರನ್ನು ಹೆತ್ತವರು ನೊಂದಾವಣೆ ಮಾಡಿರುತ್ತಾರೆ.
ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ಸ್ವಾಗತಿಸಿ, ಉಪನ್ಯಾಸಕರಾದ ರಾಜೇಶ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

3 thoughts on “ನಲಿಯೋಣ ಬಾ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

 1. SHARATH G M,
  GANJIGATTE VILLAGE,
  HOLALKERE TALUK,
  CHITRADURGA DISTRICT,
  PINCODE-577518.
  DATE OF BIRTH 01-06-1990
  CONTACT NUMBER – 9740936777
  I HAVE COMPLETED SSLC AND DIPLOMA IN CIVIL ENGINEERING.
  I HAVE INTRESTED IN SOCIAL RURAL DEVELOPMENT PROGRAM WORKS.

  CONCERN SIR/MADAM,,

  THANKING YOU…

Leave a Reply

Your email address will not be published. Required fields are marked *